ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್‌ಗೆ ಭೇಟಿ

Advt_Headding_Middle
Advt_Headding_Middle

ರೈಡ್ ಫಾರ್ ರೋಟರಿಯ 14 ದೇಶಗಳ 38ವಿದೇಶಿ ರೋಟೇರಿಯನ್ನರ ತಂಡವು ಸುಳ್ಯ ರೋಟರಿ ಕ್ಲಬ್‌ಗೆ ಜ.19ರಂದು ಭೇಟಿ ನೀಡಿತು. ಈ ತಂಡದ ಪ್ರಮುಖ ಉದ್ದೇಶ ಸೇವೆಗಾಗಿ ನಿಧಿ ಸಂಗ್ರಹವಾಗಿತ್ತು. ಈ ತಂಡವು ಮಂಗಳೂರಿನಿಂದ ಹೊರಟು ಮಡಿಕೇರಿ, ಮೈಸೂರು, ಊಟಿ, ವಯನಾಡು, ಕೊಯಂಬುತ್ತೂರು, ಮೂನಾರ್, ಕೊಚ್ಚಿನ್‌ನಲ್ಲಿ ಜ.29ರಂದು ಸಮಾಪನಗೊಳ್ಳಲಿದೆ.
ರೋಟರಿ ಕ್ಲಬ್ ಸುಳ್ಯದ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷ ರೊ.ಡಾ. ಪುರುಷೋತ್ತಮ ಕಟ್ಟೆಮನೆ ವಿದೇಶಿ ತಂಡದವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ರೋಟರಿ ಸುಳ್ಯದ ಧ್ವಜವನ್ನು ಯು.ಎಸ್.ಎ.ಯು.ಕೆ, ಸ್ವೀಡನ್, ಜರ್ಮನಿ, ಇಂಗ್ಲೆಂಡ್, ಪೋಲೆಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯಾ, ನಾರ್ವೆ, ಕೆನಡಾ, ನೆದೆರ್ಲ್ಯಾ೦ಡ್, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಮುಂತಾದ 14 ದೇಶಗಳ ತಂಡದ ಪ್ರತಿನಿಧಿಗಳಿಗೆ ಹಸ್ತಾಂತರಿಸಿದರು. ತದನಂತರ ವಿದೇಶಿ   ರೋಟೇರಿಯನ್ನರ ತಂಡದ ಪರವಾಗಿ ಮಾರ್ಕೊಸ್ ಮತ್ತು ರಾಜ್ ಸುಳ್ಯ ರೋಟರಿ ಸಂಸ್ಥೆಯ ಸಮಾಜ ಸೇವೆಯನ್ನು ಹೊಗಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್ ರೊ.ಜೋಸೆಫ್ ಮ್ಯಾಥ್ಯು, ವಲಯ5 ರ ಅಸಿಸ್ಟಂಟ್ ಗವರ್ನರ್ ಡಾ.ಕೇಶವ ಪಿ. ಕೆ., ರೋಟರಿ ಸಿಟಿಯ ಅಧ್ಯಕ್ಷ ರೊ.ಭಾನುಪ್ರಕಾಶ್, ಸಂಚಾಲಕ ರೊ. ಜಿತೇಂದ್ರ, ಕಾರ್ಯದರ್ಶಿ ಸನತ್, ಖಜಾಂಜಿ ಸತೀಶ್ ಕೆ.ಜಿ, ಗಣೇಶ್ ಆಳ್ವ, ಪ್ರಭಾಕರ ನಾಯರ್ , ಅವಿನಾಶ್ ಡಿ.ಕೆ. ಹಾಗೂ ಶ್ರೀನಿವಾಸ್ ಕೆ ಉಪಸ್ಥಿತರಿದ್ದರು. ಸಭೆಯ ನಂತರ ಮಧ್ಯಾಹ್ನದ ಭೋಜನವನ್ನು ಸ್ವೀಕರಿಸಿ ಮಡಿಕೇರಿ ಕಡೆಗೆ ವಿದೇಶಿ ರೋಟೆರಿಯನ್ನರ ತಂಡ ಅಪರಾಹ್ನ ೩ ಗಂಟೆಗೆ ನಿರ್ಗಮಿಸಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.