ಪಂಜ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

Advt_Headding_Middle
Advt_Headding_Middle

ಫೆ.5 ದರ್ಶನ ಬಲಿ-ಫೆ.6 ಬ್ರಹ್ಮರಥೋತ್ಸವ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವಕ್ಕೆ ಅಂಗವಾಗಿ ಜ.೨೪ ರಂದು ಮುಂಜಾನೆ ಗೊನೆ ಮುಹೂರ್ತ ಕಾರ್ಯಕ್ರಮವು ವೈದಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಕುದ್ವದ ತೋಟದಲ್ಲಿ ಗೊನೆ ಕಡಿದು ಬ್ಯಾಂಡ್,ವಾದ್ಯ,ಜಾಗಟೆಯ,ಮೆರವಣಿಗೆಯೊಂದಿಗೆ,ದೇವಳಕ್ಕೆ ತರಲಾಯಿತು. ದೇವಳದ ಆಡಳಿತಾಧಿಕಾರಿ ಡಾ.ದೇವಿಪ್ರಸಾದ್ ಕಾನತ್ತೂರ್ ,ಸೀಮೆಯ ನೂರಾರು ಭಕ್ತರು ಪಾಲ್ಗೊಂಡಿದ್ದರು. ಫೆ.೧.ರಂದು ರಾತ್ರಿ ಧ್ವಜಾರೋಹಣ.ಫೆ.೨.ರಂದು ನಿತ್ಯ ಬಲಿ.ಫೆ.೩.ರಂದು ಹಗಲು ನಿತ್ಯ ಬಲಿ,ಹಸಿರು ಕಾಣಿಕೆಯನ್ನು ದೇವಳಕ್ಕೆ ತರುವುದು.ರಾತ್ರಿ ಉಗ್ರಾಣ ತುಂಬಿಸುವುದು,ದಂಡಮಾಲೆ ಹಾಕಿ ಬಲಿ ಹೊರಡುವುದು,ಬೇತಾಳಗಳು ಇಳಿಯುವುದು. ಫೆ.೪.ರಂದು ಹಗಲು ಬೈಗಿನ ಬಲಿ,ರಾತ್ರಿ ಉತ್ಸವ,ಮಹಾಪೂಜೆ.ಫೆ.೫.ರಂದು ಹಗಲು ದರ್ಶನ ಬಲಿ,ಫೆ.೬.ರಂದು ರಾತ್ರಿ ಬ್ರಹ್ಮರಥೋತ್ಸವ ಜರುಗಲಿದೆ. ಬ್ರಹ್ಮರಥೋತ್ಸವ ಸೇವೆ ಮಾಡಿಸುವವರಿಗೆ ಅವಕಾಶವಿರುತ್ತದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಫೆ.೩.ರಂದು ರಾತ್ರಿ ಗಂಟೆ ೮ ರಿಂದ ನೃತ್ಯ ತಾಳ ಕಲಾ ಕೇಂದ್ರ ಪಂಜ ಇದರ ಮಕ್ಕಳಿಂದ ನೃತ್ಯ ವೈವಿಧ್ಯ.ಫೆ.೫.ರಂದು ಸಂಜೆ ಗಂಟೆ ೭ ರಿಂದ ಶ್ರೀ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ.ಫೆ.೬.ರಂದು ಸಂಜೆ ಗಂಟೆ ೭ ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ,ಹನುಮಗಿರಿ ಇವರಿಂದ ಸತ್ಯಾಂತರಂಗ ಕನ್ನಡ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

ಪಂಜ: ಫೆ.3 ರಂದು ಜಾತ್ರೋತ್ಸವಕ್ಕೆ ಹಸಿರು ಕಾಣಿಕೆ ಸಮರ್ಪಣೆ
ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವರ್ಷಾವಧಿ ಜಾತ್ರೋತ್ಸವಕ್ಕೆ ಫೆ.3 ರಂದು ಸೀಮೆಯ ವಿವಿಧ ಸ್ಥಳಗಳಲ್ಲಿ ಸಂಗ್ರಹಸಿದ ಹಸಿರು ಕಾಣಿಕೆಯನ್ನು ಸತ್ಯ ಕಟ್ಟೆಯಿಂದ ಮೆರವಣಿಗೆ ಮೂಲಕ ಸಾಗಿ ದೇವಳಕ್ಕೆ ಸಮರ್ಪಣೆ ನಡೆಯಲಿದೆ. ಕುಣಿತ ಭಜನೆ ತಂಡ,ಕೀಲುಕುದುರೆ,ಬ್ಯಾಂಡ್,ವಾದ್ಯ ಮೆgವಣಿಗೆಯ ಆಕರ್ಷಣೆಯಾಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.