Breaking News

ಜ.31 : ಪೈಂದೋಡಿ ದೇವಳದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

Advt_Headding_Middle
Advt_Headding_Middle

ಸುಮಾರು 8೦೦ ವರ್ಷಗಳ ಹಿಂದೆ ಸರ್ಪ ಮತ್ತು ಮುಂಗುಸಿ ಸ್ನೇಹದಿಂದ ಇದ್ದ ಹುತ್ತವನ್ನೇ ಪ್ರಧಾನ ಸಾನಿಧ್ಯವಾಗಿರಿಸಿಕೊಂಡು ಆರಾಧನೆ ಆರಂಭಿಸಿದ ಪುಣ್ಯ ಕ್ಷೇತ್ರ ಐವತ್ತೊಕ್ಲು ಗ್ರಾಮದ ಪೈಂದೋಡಿ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜ.೩೧.ರಂದು ಜರುಗಲಿದೆ.

ಪೂ.೭ ರಿಂದ ಗಣಪತಿ ಹೋಮ, ಪಂಚವಿಂಶತಿ, ಕಲಶ ಪೂಜೆ,ಆಶ್ಲೇಷಬಲಿ ಪೂಜೆ, ಕಲಶಾಭಿಷೇಕ, ದೈವಗಳಿಗೆ ಮತ್ತು ನಾಗದೇವರಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ವೈದಿಕ ಮಂತ್ರಾಕ್ಷತೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ ೮ ಕ್ಕೆ ಶ್ರೀ ದೇವರಿಗೆ ರಂಗ ಪೂಜೆ, ಬಳಿಕ ಪ್ರಸಾದ ವಿತರಣೆ,ಅನ್ನಸಂತರ್ಪಣೆ ಜರುಗಲಿದೆ.ರಾತ್ರಿ ಗಂಟೆ ೯ ರಿಂದ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ,ಹನುಮಗಿರಿ ಇವರಿಂದ ಸತ್ಯಾಂತರಂಗ ಕನ್ನಡ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.