ಯುವ ಜನಾಂಗದ ಮನೋನೆಮ್ಮದಿಯ ಔನತ್ಯಕ್ಕೆ ಕ್ರೀಡೆ ತಳಹದಿ :ಸಾವಿತ್ರಿ ಕೆ.

Advt_Headding_Middle
Advt_Headding_Middle

ಕ್ರೀಡೆಯು ಸೈರ್ಯ, ಧೈರ್ಯ ಮತ್ತು ಮನೋನೆಮ್ಮದಿಯ ಉದ್ಧಾರಕ್ಕೆ ತಳಹದಿಯಾಗಿದೆ. ಕ್ರೀಡಾಸ್ಪೂರ್ತಿ, ಆರೋಗ್ಯವಂತ ಜೀವನಕ್ಕೆ ಇದು ಪ್ರೇರಣೆ ನೀಡುವುದರೊಂದಿಗೆ ಸಮಾಜದಲ್ಲಿ ಏಕತೆಯ ಭವ್ಯತೆಯನ್ನು ಎತ್ತಿಹಿಡಿಯುತ್ತದೆ. ಯುವ ಜನಾಂಗವು ಚಟುವಟಿಕೆಯುಕ್ತವಾಗಿ ಪ್ರಗತಿ ಸಾಧಿಸಲು ವಾಲಿಬಾಲ್‌ನಂತಹ ಕ್ರೀಡೆಗಳು ಮೂಲವಾಗಿದೆ. ಗ್ರಾಮೀಣ ಭಾಗದ ಕ್ರೀಡಾಳುಗಳು ರಾಷ್ಟ್ರ ಮಟ್ಟದಲ್ಲಿ ಪ್ರಗತಿ ಸಾಧಿಸಲು ಇಂತಹ ಕ್ರೀಡಾಸ್ಪರ್ಧೆಗಳು ಪೂರಕ. ಕ್ರೀಡಾಸ್ಪೂರ್ತಿ, ಆರೋಗ್ಯವಂತ ಜೀವನಕ್ಕೆ ಇದು ಪ್ರೇರಣೆ ನೀಡುವುದರೊಂದಿಗೆ ಸಮಾಜದಲ್ಲಿ ಏಕತೆಯ ಭವ್ಯತೆಯನ್ನು ಎತ್ತಿಹಿಡಿಯುತ್ತದೆ. ಸ್ವಾರ್ಥರಹಿತವಾಗಿ ಕ್ರೀಡಾಕ್ಷೇತ್ರವನ್ನು ವಿಜೃಂಭಿಸುವ ಕಾರ್ಯವನ್ನು ಯುವಕರು ನಡೆಸಬೇಕು ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲೆ ಸಾವಿತ್ರಿ.ಕೆ ಹೇಳಿದರು.


ಎಸ್‌ಎಸ್‌ಪಿಯು ಕಾಲೇಜು ಸುಬ್ರಹ್ಮಣ್ಯ ಹಾಗೂ ದೇವರಾಜ್ ಸ್ಮಾರಕ ವಾಲಿಬಾಲ್ ಪಂದ್ಯಾಟ ದತ್ತಿನಿಧಿ ಸಮಿತಿ ಸುಬ್ರಹ್ಮಣ್ಯ ಇದರ ಆಶ್ರಯದಲ್ಲಿ ಶನಿವಾರ ನಡೆದ ೨೯ನೇ ವರ್ಷದ ದೇವರಾಜ್ ಸ್ಮಾರಕ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯಿಂದ ಅವರು ಮಾತನಾಡಿದರು.ಕ್ರೀಡಾಕ್ಷೇತ್ರವು ಗ್ರಾಮೀಣ ಭಾಗದಲ್ಲಿ ಅನನ್ಯವಾಗಿ ಅಭಿವೃದ್ದಿಗೊಂಡಿದೆ.ಗ್ರಾಮೀಣ ಕ್ರೀಡಾಳುಗಳು ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿದ್ದಾರೆ.ಇದಕ್ಕೆ ಕ್ರೀಡಾಸಂಘಟನೆಗಳು ಮತ್ತು ವಿದ್ಯಾಲಯಗಳು ತುಂಬುತ್ತಿರುವ ಸ್ಪೂರ್ತಿ ಕಾರಣೀಭೂತವಾಗಿದೆ. ಸರ್ವತೋಮಖ ಬೆಳವಣಿಗೆಗೆ ಕ್ರೀಡೆ ಪೂರಕ. ಕ್ರೀಡಾಕ್ಷೇತ್ರವು ಗ್ರಾಮೀಣ ಭಾಗದಲ್ಲಿ ಅನನ್ಯವಾಗಿ ಅಭಿವೃದ್ದಿಗೊಂಡಿದೆ.ಗ್ರಾಮೀಣ ಕ್ರೀಡಾಳುಗಳು ರಾಷ್ಟ್ರಮಟ್ಟದಲ್ಲಿ ಮಿನುಗುತ್ತಿದ್ದಾರೆ.ಇದಕ್ಕೆ ಕ್ರೀಡಾಸಂಘಟನೆಗಳು ಮತ್ತು ವಿದ್ಯಾಲಯಗಳು ತುಂಬುತ್ತಿರುವ ಸ್ಪೂರ್ತಿ ಕಾರಣೀಭೂತವಾಗಿದೆ ಎಂದರು.


ಪಂದ್ಯಾಟವನ್ನು ಆರ್‌ಎನ್‌ಎಸ್ ಸಂಸ್ಥೆಯ ಜನರಲ್ ಮೆನೇಜರ್ ಸ್ಮಿತಾ ಹೆಗ್ಡೆ ಉದ್ಘಾಟಿಸಿದರು. ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜಯರಾಮ ಕಡ್ಲಾರ್ ಮುಖ್ಯಅತಿಥಿಗಳಾಗಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ದತ್ತಿನಿಧಿ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಕಾಯಾಧ್ಯಕ್ಷ ಶಿವರಾಮ್ ಏನೆಕಲ್, ಸಂಘಟನಾ ಕಾರ್ಯದರ್ಶಿ ವಿಶ್ವನಾಥ ನಡುತೋಟ ವೇದಿಕೆಯಲ್ಲಿದ್ದರು. ರೋಟರಿ ವಲಯ ಸೇನಾನಿ ಗಿರಿಧರ ಸ್ಕಂಧ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಲೋಕೇಶ್ ಬಿ.ಎನ್, ನಿರ್ದೇಶಕ ದೀಪಕ್ ನಂಬಿಯಾರ್, ಸುಬ್ರಹ್ಮಣ್ಯ-ಐನೆಕಿದು ಸಹಕಾರಿ ಸಂಘದ ನಿರ್ದೇಶಕರಾದ ವೆಂಕಟೇಶ್ ಎಚ್.ಎಲ್, ಜಯಪ್ರಕಾಶ್ ಕೂಜುಗೋಡು, ಉಪಸ್ಥಿತರಿದ್ದರು.
ಕಿಶೋರ್‌ಕುಮಾರ್ ಕೂಜುಗೋಡು ಸ್ವಾಗತಿಸಿದರು.ಶಿವರಾಮ ಏನೆಕಲ್ ಪ್ರಸ್ತಾಪಿಸಿದರು.ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.