Breaking News

ಸುಳ್ಯ ಯುವ ಬ್ರಿಗೇಡ್ ಸದಸ್ಯರಿಂದ ರಸ್ತೆ ದುರಸ್ತಿ ಶ್ರಮದಾನ – ಹುಸಿಯಾಗಿದೆ ಅಧಿಕಾರಿಗಳ ಭರವಸೆ

Advt_Headding_Middle
Advt_Headding_Middle

ಸುಳ್ಯದಿಂದ ಆಲೆಟ್ಟಿ ಕಡೆಗೆ ಸಂಚರಿಸುವ ನ.ಪಂಚಾಯತ್ ವ್ಯಾಪ್ತಿಯ ರಸ್ತೆಯ ನಾಗಪಟ್ಟಣ ಸೇತುವೆ ಬಳಿಯಿಂದ ಕಲ್ಲುಮುಟ್ಲು ತಿರುವಿನ ವರೆಗೆ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತುಂಬಾ ತ್ರಾಸದಾಯಕವಾಗಿದೆ.

ವಾಹನ ಸವಾರರು ಹಿಡಿ ಶಾಪ ಹಾಕಿಕೊಂಡು ಸಂಚರಿಸುತ್ತಿದ್ದಾರೆ. ಈ ಹಿಂದೆ ಆಲೆಟ್ಟಿ ಭಾಗದ ನಾಗರೀಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ನ.ಪಂ.ಅಧಿಕಾರಿಗಳು 15 ದಿನದಲ್ಲಿ ಕಾಮಗಾರಿ ಕೆಲಸ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಭರವಸೆ ಹುಸಿಯಾಗಿದೆ. ರಸ್ತೆ ತುಂಬಾ ದೊಡ್ಡ ಗಾತ್ರದ ಹೊಂಡ ನಿರ್ಮಾಣವಾಗಿ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮನಗಂಡು ಗಮನಿಸಿದ ಸುಳ್ಯ ಯು ವ ಬ್ರಿಗೇಡ್ ತಂಡದ ಸದಸ್ಯರು ಸ್ವಂತ ಖರ್ಚಿನಿಂದ ಟಿಪ್ಪರ್ ನಲ್ಲಿ ಕೆಂಪು ಕಲ್ಲು ತಂದು ಹೊಂಡಕ್ಕೆ ತುಂಬಿಸಿ ಶ್ರಮದಾನದ ಮೂಲಕ ಕೆಲಸ ನಿರ್ವಹಿಸಿದರು. ಯುವ ಬ್ರಿಗೇಡ್ ಸದಸ್ಯರ ಕೆಲಸವನ್ನು ಈ ರಸ್ತೆ ಯಲ್ಲಿ ಸಂಚರಿಸುವ ವಾಹನ ಸವಾರರು ಶ್ಲಾಘಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.