Breaking News

ಇಂದಿರಾ ಕ್ಯಾಂಟೀನ್ ಆರಂಭದ ಬೆನ್ನಿಗೆ ಸರಳಾಯರ ಹೊಟೇಲ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

Advt_Headding_Middle
Advt_Headding_Middle

5 ರೂಪಾಯಿಗೆ ತಿಂಡಿ ಮತ್ತು 1೦ ರೂಪಾಯಿಗೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಆರಂಭಗೊಂಡ ಬೆನ್ನಿಗೆ ಸುಳ್ಯದಲ್ಲಿ ಈ ಹಿಂದಿನಿಂದಲೇ ಕಡಿಮೆ ಹಣಕ್ಕೆ ಊಟ ಹಾಗೂ ಉಪಾಹಾರ ನೀಡುತ್ತಿರುವ ಸರಳಾಯ ಹೋಡೆಲ್‌ನ ಸುಂದರ ಸರಳಾಯರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯಿತು.


“ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್ ಬಹಳ ಸುದ್ದಿಯಾಗುತ್ತಿದೆ. ಸ್ವಾಗತಾರ್ಹ. ಮಾಜಿ ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆ ಶ್ಲಾಘನೀಯ. ಅದಕ್ಕಾಗಿ ಅವರಿಗೆ ಧನ್ಯವಾದಗಳು. ಆದರೆ ಸುಳ್ಯದಲ್ಲಿ ಕಳೆದ ೪೦ ವರ್ಷಗಳಿಂದ ವಿದ್ಯಾರ್ಥಿಗಳಿಗೆ ಬಡ ಕೂಲಿ ಕಾರ್ಮಿಕರಿಗೆ, ಸಾರ್ವಜನಿಕರಿಗೆ ರೂ. ೫, ೭, ರೂ. ೧೦ ರೂಪಾಯಿಗಳಿಗೆ ನಿರಂತರವಾಗಿ ಊಟವನ್ನು ಬಡಿಸುತ್ತಿರುವ ಸುಳ್ಯದ ಸುಂದರ ಸರಳಾಯರು ಸುದ್ದಿಯಾಗಲೇ ಇಲ್ಲ. ಸುದ್ದಿಯಾಗುವುದು ಅವರಿಗೆ ಇಷ್ಟವೂ ಇರಲಿಲ್ಲ. ಆ ಮಹಾನ್ ಅನ್ನದಾತರಿಗೆ ನನ್ನದೊಂದು ಸಲಾಂ” ಎಂಬ ಬರಹವೊಂದು ಸುಂದರ ಸರಳಾಯರ ಫೊಟೋದೊಂದಿಗೆ ಫೇಸ್‌ಬುಕ್ ಹಾಗೂ ವಾಟ್ಸಾಪ್‌ಗಳಲ್ಲಿ ಹರಿದಾಡತೊಡಗಿತು.
ಇದನ್ನು ಗಮನಿಸಿದ ಸುಳ್ಯದ ಪತ್ರಕರ್ತರು ಇದಕ್ಕೆ ಅಲ್ಲಿಯೇ ಪ್ರತಿಕ್ರಿಯೆಯನ್ನೂ ನೀಡಿದರು. “ಸುಂದರ ಸರಳಾಯರು ಸುದ್ದಿಯಾಗಲಿಲ್ಲ ಎಂಬುದು ನಿಜವಲ್ಲ. ಇವರ ಸೇವೆ ಮತ್ತು ಸಾಧನೆ ಕುರಿತು ಸುಳ್ಯದ ಎಲ್ಲಾ ಪತ್ರಕರ್ತರು ಸಾಕಷ್ಟು ಬಾರಿ ಬರೆದಿದ್ದಾರೆ. ದೃಶ್ಯಮಾಧ್ಯಮದಲ್ಲೂ ಪ್ರಸಾರವಾಗಿದೆ. ಇಂಗ್ಲಿಷ್ ಹಾಗೂ ಮಲೆಯಾಳಂ ಪತ್ರಿಕೆಗಳಲ್ಲೂ ಪ್ರಕಟವಾಗಿದೆ” ಎಂದು ನೆನಪಿಸಿದರು. ಇದಾದ ಬಳಿಕ ಕೆಲವರು ತಾವು ಬರೆದಿದ್ದನ್ನು ತಿದ್ದಿ ಬೇರೆ ಪೋಸ್ಟ್ ಹಾಕಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.