ಗೂನಡ್ಕ :ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ “ಸಂಭ್ರಮ ೨೦೨೦”

Advt_Headding_Middle
Advt_Headding_Middle

ಮಾರುತಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ “ಸಂಭ್ರಮ ೨೦೨೦”ನ್ನು ಜ. ೨೫ರಂದು ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ವಿಮಲಾನೀ ಕನ್ಸಲ್ಟೆನ್ಸಿ ಮಂಗಳೂರು ಇದರ ಆಡಳಿತ ನಿರ್ದೇಶಕರಾದ ಅನಿಲ್ ಹೆಗ್ಡೆಯವರು ಬ್ಯಾಂಡ್ ಬಾರಿಸುವುದರ ಮೂಲಕ ಉದ್ಘಾಟಿಸಿದರು. ಎಸ್‌ಎಲ್ ವಿ ಬುಕ್ ಏಜೇನ್ಸಿಯ ಆಡಳಿತ ನಿರ್ದೇಶಕರಾದ ದಿವಾಕರ್ ದಾಸ್‌ರವರು ಮಾತನಾಡಿ ಒಂದು “ಸಂಸ್ಥೆಯ ಬೆಳವಣಿಗೆಗೆ ಅಲ್ಲಿನ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಪರಿಶ್ರಮವೇ ಕಾರಣ, ಪೋಷಕರು ತಮ್ಮ ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಟ್ಟು ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಬೇಕು ಹಾಗೂ ಮಕ್ಕಳಿಗೆ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ಆಸ್ತಿಯನ್ನಾಗಿಸಿ” ಎಂದರು.

ಫಾರ್ಮೆಡ್ ಲಿಮಿಟೆಡ್ ಬೆಂಗಳೂರಿನ ಉಪಾಧ್ಯಕ್ಷರಾದ ಉಮ್ಮರ್ ಬೀಜದ ಕಟ್ಟೆ ಯವರು ಮಾತನಾಡಿ “ರಾಷ್ಟ್ರಪತಿ , ಪ್ರಧಾನಮಂತ್ರಿ ಅಥವಾ ಯಾವುದೇ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಯನ್ನು ರೂಪಿಸುವುದು ಶಿಕ್ಷಕರು” ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಆಗಮಿಸಿದ ಅನಿಲ್ ಹೆಗ್ಡೆಯವರು ಮಾತನಾಡಿ, “ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯವಿದೆ. ಆದ್ದರಿಂದ ಅದು ಪರೀಕ್ಷೆಯಲ್ಲ, ಮೌಲ್ಯಮಾಪನ ಎಂದು ತಿಳಿಸುವ ಜವಾಬ್ದಾರಿ ನಮ್ಮದಾಗಿದೆ ಹಾಗೂ ಪೋಷಕರು ತಮ್ಮ ಮಕ್ಕಳಿಗೆ ದಿನನಿತ್ಯದ ಸಾಮಾನ್ಯ ಕೆಲಸಗಳನ್ನು ಕಲಿಸುವ ಅವಶ್ಯಕತೆ ಇದೆ” ಎಂದು ನುಡಿದರು.

ಮತ್ತೋರ್ವ ಮುಖ್ಯ ಅತಿಥಿ ಜಗದೀಶ್ ಹುದೇರಿಯವರು ಮಾತನಾಡಿ, “ಸಮಾಜದಲ್ಲಿ ಎಲ್ಲಾ ಹುದ್ದೆಗಳಿಗೂ ಅತ್ಯಂತ ಮಹತ್ವದ ಸ್ಥಾನವಿದೆ ಆದುದರಿಂದ ಮಕ್ಕಳಿಗೆ ಯಾವುದೇ ಒತ್ತಡವನ್ನು ಹೇರದೆ ಅವರ ಇಚ್ಛೆಗೆ ಅನುಸಾರವಾಗಿ ವಿಷಯವನ್ನು ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಬೇಕು” ಎಂದು ತಿಳಿಸಿದರು. ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯ ದಾಸ್ ರವರು ಮಾತನಾಡಿ, ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ಅವರು ಶಾಲಾ ವರದಿಯನ್ನು ವಾಚಿಸಿದರು. ಮುಖ್ಯ ಅತಿಥಿ ಅನಿಲ್ ಹೆಗ್ಗಡೆಯವರು ಶಾಲಾ ಪತ್ರಿಕೆ MIND ನ್ನು ಬಿಡುಗಡೆಗೊಳಿಸಿದರು. ಉಮ್ಮರ್ ಬೀಜದ ಕಟ್ಟೆ ಅವರು ಶಾಲಾ ಛಾಯಾ ಕಿರುಚಿತ್ರವನ್ನು ಬಿಡುಗಡೆಗೊಳಿಸಿದರು. ಸಂಸ್ಥೆಯ ವತಿಯಿಂದ ಅನಿಲ್ ಹೆಗ್ಡೆ, ಕುಮಾರ್ ಬಿದರಕಟ್ಟೆ ಹಾಗೂ ಜಗದೀಶ್ ಹುದೇರಿಯವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಕುಮಾರ್‌ರವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಸ್ತುವಾರಿ ಉಪಪ್ರಾಂಶುಪಾಲರಾದ ಶ್ರೀಮತಿ ಪುನೀತಾ ವಂದಿಸಿದರು. ಸಹಶಿಕ್ಷಕ ಧನರಾಜ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪೋಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶಿವಪ್ರಸಾದ್ ಉಪಾಧ್ಯಕ್ಷರಾದ ಅಬುಸಾಲಿ, ಕೃಷ್ಣಪ್ಪ ನಡುಬೆಟ್ಟು, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ಭರತನಾಟ್ಯ ಸೇರಿದಂತೆ ವಿವಿಧ ರೀತಿಯ ನೃತ್ಯ ಪ್ರಕಾರಗಳು ಮೂಡಿಬಂದವು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.