ಅರೆಕಲ್ಲು ಅಯ್ಯಪ್ಪ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ

Advt_Headding_Middle
Advt_Headding_Middle


ಸಂಪಾಜೆ ಗ್ರಾಮದ ಅರೆಕಲ್ಲು ಅಯ್ಯಪ್ಪ ದೇವಸ್ಥಾನದ ಬ್ರಹ್ಮಕಲಶೋತ್ಸವವು ಫೆ. ೫ ರಿಂದ ೭ರ ತನಕ ನಡೆಯಲಿದ್ದು. ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಸಿದ್ದತೆಗಳು ನಡೆಯುತ್ತಿದೆ. ಅಯ್ಯಪ್ಪ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಪೂರ್ಣವಾಗಿ ಮುಗಿದು ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿದೆ. ದೇವಳದ ಎದುರು ಭಾಗದ ಕೆಳಗೆ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲು ಶಾಮಿಯಾನ ಚಪ್ಪರ ಅಳವಡಿಸಿ ಸಮರ್ಪಕವಾಗಿ ಅಡಚನೆಯಿಲ್ಲದೆ ಅನ್ನಸಂತರ್ಪಣೆ ಮತ್ತು ಬೆಳಗಿನ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

೫೦ಜನ ಸ್ವಯಂ ಸೇವಕರು ಶ್ರಮದಾನ ಮಾಡುತ್ತಿದ್ದಾರೆ. ದೇವಳದ ಹಿಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಫೆ.೭ರಂದು ನಡೆಯುವ ಧಾರ್ಮಿಕ ಸಭೆಗೆ ತೆಂಗಿನ ಗರಿಗಳಿಂದ ರಚಿಸಿದ ವೇದಿಕೆ ಹಾಗೂ ಸುಮಾರು ೫೦೦ ಜನ ಕುಳಿತುಕೊಳ್ಳುವ ಸ್ಥಳಕ್ಕೆ ಶಾಮಿಯಾನ ಚಪ್ಪರ ಹಾಕಲು ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಸುತ್ತಲು ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಗಾಳಿಬೀಡಿನಿಂದ ೪೦೦ಕ್ಕೂ ಅಧಿಕ ಭಕ್ತಾಧಿಗಳು ಬರುವವರಿದ್ದು ೩ ದಿನ ಕಾಲ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಸುತ್ತಲು ಪ್ರದೇಶಗಳಲ್ಲಿ ವಾಹನ ನಿಲುಗಡೆ ಬೇಕಾದ ಕೆಲಸಗಳನ್ನು ಶ್ರಮದಾನದ ಮೂಲಕ ಸ್ವಯಂ ಸೇವಕರು ಮಾಡುತ್ತಿದ್ದಾರೆ.

ಬ್ರಹ್ಮಕಲಶೋತ್ಸವಕ್ಕೆ ಸುಮಾರು ೭ ಲಕ್ಷ ರೂ ಖರ್ಚಾಗಲಿದ್ದು, ಆರ್ಥಿಕ ವೆಚ್ಚದ ಕ್ರೋಢೀಕರಣಕ್ಕೆ ಆರ್ಥಿಕ ಸಮಿತಿ ಮತ್ತು ಪ್ರಚಾರಸಮಿತಿ ರಚಿಸಿಕೊಂಡು ಸಂಪಾಜೆ, ಚೆಂಬು, ದ.ಕ. ಸಂಪಾಜೆ ಗ್ರಾಮಗಳಲ್ಲಿ ಧನ ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ ಧ್ವನಿ ವರ್ಧಕದ ಮೂಲಕವೂ ಪ್ರಚಾರ ಕಾರ್ಯ ಕೈಗೊಳ್ಳಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.