Breaking News

ಚಿಲ್ತಡ್ಕ ಉಳ್ಳಾಕುಲು ದೈವಸ್ಥಾನದ ಬ್ರಹ್ಮಕಲಶೋತ್ಸವದ ಬಗ್ಗೆ ಪೂರ್ವಭಾವಿ ಸಭೆ

Advt_Headding_Middle
Advt_Headding_Middle

ಪುರಾತನ ಪ್ರಸಿದ್ಧವಾದನಾಲ್ಕೂರು ಗ್ರಾಮದ ಚಿಲ್ತಡ್ಕ ಉಳ್ಳಾಕುಲು ದೈವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ದೈವಸ್ಥಾನದ ಆಡಳಿತಕ್ಕೆ ಒಳಪಟ್ಟ ಊರಿನವರ ಪೂರ್ವಾಭಾವಿ ಸಭೆಯು ಜ.25 ರಂದು ಉಳ್ಳಾಕುಲು ದೈವಸ್ಥಾನ ವಠಾರದಲ್ಲಿ ನಡೆಯಿತು. ಶ್ರೀ ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನ ಮತ್ತು ಪನಿವಾರಡ್ಕದಲ್ಲಿರುವ ಮಾಡದ ಕಟ್ಟಡಗಳು ಈಗಾಗಲೇ 60ಲಕ್ಷ ವೆಚ್ಚದಿಂದ ಜೀರ್ಣೋದ್ಧಾರವಾಗಿದ್ದು ಬ್ರಹ್ಮಕಲಶ ಮತ್ತು ಇತರ ದೇವತಾ ಕಾರ್ಯಗಳನ್ನು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಜೂ.10 ರಂದು ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ಸಭೆಯಲ್ಲಿ ಬ್ರಹ್ಮಕಲಶೋತ್ಸವ ಸೂತ್ರವಾಗಿ ನಡೆಯಲು ಬ್ರಹ್ಮಕಲಶ ಸಮಿತಿ ರಚಿಸಲಾಯಿತು ಸಮಿತಿ ಅಧ್ಯಕ್ಷರಾಗಿ ದಿನೇಶ್ ಹಾಲೆಮಜಲು, ಉಪಾಧ್ಯಕ್ಷರಾಗಿ ಶಿವರಾಮ ಚಿಲ್ತಡ್ಕ, ಕಾರ್ಯದರ್ಶಿಯಾಗಿ ಉಣ್ಣಿಕೃಷ್ಣನ್ ಇವರನ್ನು ನೇಮಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪರಶುರಾಮ ಚಿಲ್ತಡ್ಕ ರವರನ್ನು ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ ಮತ್ತು ಭರತ್ ಕಾಡುಕೋಲ್ಯ ಇವರನ್ನು ಉಪಾಧ್ಯಕ್ಷರಾಗಿ ಆಯ್ಕೆಮಾಡಲಾಯಿತು. ಚಪ್ಪರ ಸಮಿತಿಯ ಅಧ್ಯಕ್ಷರಾಗಿ ಹರಿಶ್ಚಂದ್ರ ಕುಜುಂಬಾರು, ವೈಧಿಕ ಸಮಿತಿಯ ಅಧ್ಯಕ್ಷರಾಗಿ ಭುವನೇಶ್ವರ ಹುಲ್ಲುಕುಮೇರಿ, ಸ್ವಚ್ಛತೆ ಸಮಿತಿಯ ಅಧ್ಯಕ್ಷರಾಗಿ ವೆಂಕಪ್ಪ ನಾಯ್ಕ ಬೊಂಬುಲಿ, ಸ್ವಯಂ ಸೇವಕ ಸಮಿತಿಯ ಅಧ್ಯಕ್ಷರಾಗಿ ದಿನೇಶ್ ಕುಕ್ಕುಜೆ, ಅಲಂಕಾರ ಸಮಿತಿಯ ಅಧ್ಯಕ್ಷರಾಗಿ ಅಯ್ಯಪ್ಪ ಹಾಲೆಮಜಲು, ಹಸಿರು ಕಾಣಿಕೆ ಸಮಿತಿಯ ಅಧ್ಯಕ್ಷರಾಗಿ ರೋಹಿತಾಕ್ಷ ಚಿಲ್ತಡ್ಕ ಇವರನ್ನು ಆಯ್ಕೆಮಾಡಲಾಯಿತು. ಗೌರವ ಸಲಹೆಗಾರರಾಗಿ ಚಿಲ್ತಡ್ಕ ಜತ್ತಪ್ಪ ಮಾಸ್ಟರ್, ಪೂಜಾರಿಕೋಡಿ ಆನಂದ ಗೌಡ, ಶಶಿಧರ ಕೋಲ್ಯ, ಚನಿಯ ಗುಂಡಡ್ಕ, ಬಾಬು ಗೌಡ ಸಾಲ್ತಾಡಿ ಮತ್ತು ಸಮಿತಿಯ ಸದಸ್ಯರಾಗಿ ಹೊನ್ನಪ್ಪ ಗೌಡ ಪೂಜಾರಿಕೋಡಿ, ಲೋಕೇಶ್ ಗುಂಡಡ್ಕ, ಕೊಲ್ಯ ದುಗ್ಗಪ್ಪ ಗೌಡ, ಪುರುಷೋತ್ತಮ ಬಳ್ಳಡ್ಕ, ಕೊರಗಪ್ಪ ಸಾಲ್ತಾಡಿ, ಶಿವರಾಮ ಮಾಲೆಂಗ್ರಿ, ಭರತ್ ಕುಚ್ಚಾಲ, ಪೊಡಿಯ ಸಾಲ್ತಾಡಿ, ಕುಮಾರ ಸಾಲ್ತಾಡಿ, ಲೋಕೇಶ್ ಕುಚ್ಚಾಲ, ಚಂದ್ರಶೇಖರ ಗುಂಡಡ್ಕ ಇವರನ್ನು ನೇಮಿಸಲಾಯಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯರಾಮ್ ಚಿಲ್ತಡ್ಕ ಎಲ್ಲರನ್ನೂ ಸ್ವಾಗತಿಸಿ, ಆಡಳಿತ ಮಂಡಳಿ ಕಾರ್ಯದರ್ಶಿಯವರಾದ ಕೇಶವ ಚಿಲ್ತಡ್ಕ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.