ಎಸ್.ಎನ್.ಮನ್ಮಥ, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ ಶಾಸ್ತ್ರಿ, ವಿಷ್ಣು ಭಟ್ ಮೂಲೆತೋಟ ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ

Advt_Headding_Middle
Advt_Headding_Middle

 

*ಈ ನಾಯಕರನ್ನು ಪಕ್ಷದಿಂದ ದೂರಗೊಳಿಸಿ ನಿರ್ಣಯ, ಬಿಜೆಪಿ ಮಂಡಲ ಸಮಿತಿ ಪ್ರಕಟಣೆ*

ಇತ್ತೀಚೆಗೆ ನಡೆದ ಸಹಕಾರಿ ಸಂಘಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಸೂಚನೆಗಳನ್ನು ಮೀರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಗ್ರಾಮದಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಕಾರಣದಿಂದ ಎಸ್.ಎನ್.ಮನ್ಮಥ, ಚಂದ್ರಶೇಖರ ಶಾಸ್ತ್ರಿ, ಸಂತೋಷ್ ಕುತ್ತಮೊಟ್ಟೆಯವರನ್ನು ಹಾಗೂ ಪಾರ್ಟಿಯ ನಿರ್ಣಯಕ್ಕೆ ವಿರುದ್ಧವಾಗಿ ನಿಂತ ವಿಷ್ಣು ಭಟ್ ಮೂಲೆತೋಟ ರನ್ನು ಭಾರತೀಯ ಜನತಾ ಪಾರ್ಟಿಯಿಂದ ದೂರಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸುಳ್ಯ ಮಂಡಲ ಸಮಿತಿಯ ನೇತೃತ್ವದಲ್ಲಿ ಜ. 23 ರಂದು ಸುಳ್ಯ ವೆಂಕಟರಮಣ ದೇವಮಂದಿರದ ಸಭಾಭವನದಲ್ಲಿ ಮಂಡಲ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದನ್ನು ಜಿಲ್ಲಾ ಸಮಿತಿಗೆ ತಿಳಿಸಲಾಗುತ್ತದೆ. ಆದ್ದರಿಂದ ಬಿಜೆಪಿಗೂ ಅವರಿಗೂ ಯಾವುದೇ ಸಂಬಂಧವಿರುವುದಿಲ್ಲ‌ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ
ವೆಂಕಟ್ ವಳಲಂಬೆ ಮತ್ತು ಸುಬೋಧ್ ಶೆಟ್ಟಿ ಮೇನಾಲ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.