Breaking News

ಪಂಜ:  ದೈವಗಳ ಮೂಲ ಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವದ ಮೂಲ ಸ್ಥಾನ ಗರಡಿ ಬೈಲಿಲ್ಲಿ ದೈವಸ್ಥಾನದ ಜೀರ್ಣೋದ್ಧಾರದ ಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜ.೨೬.ರಿಂದ ಜ. ೨೭ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಿತು.ಜ.೨೬.ರಂದು ರಾತ್ರಿ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಆಚಾರ್ಯವರಣೆ, ಸ್ವಸ್ತೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ,ನೂತನ ಬಿಂಬಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜರುಗಿತು.

ಜ.೨೭.ರಂದು ಮುಂಜಾನೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ, ಆಶ್ಲೇಷಾ ಬಲಿ, ಅಷ್ಟಪಟು ಆರಾಧನೆ.ಪೂ.೯.೫೦ ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ನಾಗ ಶಿಲಾ ಪ್ರತಿಷ್ಠೆ, ಶ್ರೀ ಕಾಜುಕುಜುಂಬ ಮತ್ತು ಉಳ್ಳಾಕುಲು ದೈವಗಳ ಪ್ರತಿಷ್ಠೆ ,ಬ್ರಹ್ಮಕಲಶಾಭಿಷೇಕ,ತಂಬಿಲ ಸೇವೆ,ಮಂಗಳಾತಿ,ಪ್ರಸಾದ ವಿತರಣೆ, ಜರುಗಿತು.ಫೆ.೭.ರಂದು ಸಂಜೆ ದೈವದ ಮೂಲ ಸ್ಥಾದಲ್ಲಿ ಧ್ವಜಾರೋಹಣ ಗೊಂಡು ಶ್ರೀ ಕಾಜುಕುಜುಂಬ ದೈವದ ನೇಮ ಜರುಗಲಿದೆ.ಫೆ.೮.ರಂದು ಮುಂಜಾನೆ ಮೂಲ ನಾಗನ ಕಟ್ಟೆಯಲ್ಲಿ ತಂಬಿಲ ಸೇವೆ.ಶ್ರೀ ಉಳ್ಳಾಕುಲು ದೈವದ ಸಿರಿಮುಡಿ ನೇಮೋತ್ಸವ ನಡೆದು,ಧ್ವಜಾವರೋಹಣ,ಅನ್ನಸಂತರ್ಪಣೆ ಜರುಗಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.