ಪಂಜದ ಪ್ರಶಾಂತ ಪರಿಸರದಲ್ಲಿ ನಿರ್ಮಾಣಗೊಂಡಿತು ಅಪೂರ್ವ ದೈವ ಸಾನಿಧ್ಯ

Advt_Headding_Middle
Advt_Headding_Middle

 

ಉಳ್ಳಾಕುಲು ಮತ್ತು ಕಾಜುಕುಜುಂಬ ದೈವಗಳಿಗೆ ಮೂಲಸ್ಥಾನದಲ್ಲಿಯೇ ನೆಲೆ

ಗರಡಿಬೈಲಿನಲ್ಲಿ ನಡೆಯಿತು ಸಂಭ್ರಮದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಂಬ ದೈವಗಳ ದೈವಸ್ಥಾನವು ಮೂಲಸ್ಥಾನವಾದ ಗರಡಿ ಬೈಲಿನಲ್ಲಿ ಜೀರ್ಣೋದ್ಧಾರಗೊಂಡಿದ್ದು ಇಂದು ಬ್ರಹ್ಮಕಲಶೋತ್ಸವ ನಡೆಯಿತು.

ಪಂಜ ದೇವಳದಿಂದ ಸುಮಾರು 1 ಕಿ.ಮೀ.ದೂರದಲ್ಲಿ ಗರಡಿ ಬೈಲು ಎಂಬಲ್ಲಿ ಪ್ರಕೃತಿ ಸೌಂದರ್ಯತೆಯ ರಮಣೀಯ ಪರಿಸರದಲ್ಲಿ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವದ ಮೂಲ ಸ್ಥಾನವಿದ್ದು, ಇಲ್ಲಿ ಈಗ ಈ ದೈವಸ್ಥಾನ ಅಪೂರ್ವ ಸಾನಿಧ್ಯದಿಂದ ಕಂಗೊಳಿಸುತ್ತಿದೆ.

ಬಹಳ ಪ್ರಾಚೀನ ಕಾಲದಿಂದಲೇ ಇಲ್ಲಿ ದೈವಗಳ ಆರಾಧನೆ ನಡೆಯುತ್ತಿದ್ದುದಕ್ಕೆ ಅನೇಕ ಸಾಕ್ಷಿ ಹಾಗೂ ಕುರುಹುಗಳಿತ್ತು.

ಕೆಂಪು ಕಲ್ಲಿನಿಂದ ನಿರ್ಮಿಸಲಾದ ಶ್ರೀ ಉಳ್ಳಾಕುಲು ಮತ್ತು ಶ್ರೀ ಕಾಜುಕುಜುಂಬ ದೈವಸ್ಥಾನದ ಕುರುಹುಗಳು ಉಳಿದಿತ್ತು.

ಶಿಲೆ ಕಲ್ಲಿನಿಂದ ಕೆತ್ತನೆ ಗೊಂಡಿರುವ ಧ್ವಜದ ಕಟ್ಟೆ, ಕಂಚಿ ಕಲ್ಲು, ಬಲಿ ಕಲ್ಲು ಇತ್ತು. ಆದರೆ ಇಲ್ಲಿನ ದೈವಸ್ಥಾನ, ನಾಗನ ಕಟ್ಟೆ ಸಂಪೂರ್ಣ ಶಿಥಿಲಗೊಂಡು ನೆಲಗಚ್ಚಿತ್ತು.

ಪ್ರತಿ ವರ್ಷ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಧ್ವಜ ಇಳಿದ ಬಳಿಕ ಗರಡಿ ಬೈಲಿನಲ್ಲಿ ಧ್ವಜಾರೋಹಣಗೊಂಡು ಉಳ್ಳಾಕುಲು ಮತ್ತು ಕಾಜುಕುಜುಂಬ ನೇಮೋತ್ಸವವು ನಡೆಯುತ್ತಿತ್ತು. ಈ ಸಾನಿಧ್ಯ ಜೀರ್ಣೋದ್ಧಾರಗೊಳಿಸಬೇಕೆಂಬ ಚಿಂತನೆ ಅನೇಕ ವರ್ಷಗಳಿಂದಲೂ ಇತ್ತು.

ಆದರೆ ಹಲವು ಕಾರಣಗಳಿಗಾಗಿ ಜೀರ್ಣೋದ್ಧಾರ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಕೆಲವು ವರ್ಷಗಳ ಹಿಂದೆ ದೇಗುಲದ ಎದುರು ಭಾಗದಲ್ಲಿ ಉಳ್ಳಾಕುಲು ಹಾಗೂ ಕಾಜುಕುಜುಂಬ ದೈವಗಳ ಚಾವಡಿ ನಿರ್ಮಾಗೊಂಡು ಬ್ರಹ್ಮಕಲಶೋತ್ಸವವು ನಡೆದಿತ್ತು.

ಆದರೆ ಮೂಲಸ್ಥಾನದಲ್ಲಿ ಜೀರ್ಣೋದ್ಧಾರ ಆಗದ ಹಿನ್ನಲೆಯಲ್ಲಿ ಪರಿಸರದಲ್ಲಿ ಕೆಲವು ದೋಷಗಳು ಕಂಡು ಬಂದಿತ್ತು. ನವರಾತ್ರಿ ಸಂದರ್ಭದಲ್ಲಿ ದೇಗುಲದಲ್ಲಿ ಘಟಿಸಿದ ವಿದ್ಯಮಾನದ ಹಿನ್ನಲೆಯಲ್ಲಿ ನಡೆದ ಪ್ರಶ್ನಾ ಚಿಂತನೆಯ ಸಂದರ್ಭದಲ್ಲೂ ಇದೇ ವಿಚಾರ ಪ್ರಸ್ತಾಪವಾಗಿತ್ತು.

 

ದೇವಸ್ಥಾನಕ್ಕೆ ಕೆಲವು ತಿಂಗಳ ಹಿಂದೆ ಆಡಳಿತಾಧಿಕಾರಿಯಾಗಿ ಬಂದ ಡಾ. ದೇವಿಪ್ರಸಾದ್ ಕಾನತ್ತೂರು ಅವರು ಭಕ್ತರ ಕೋರಿಕೆಯ ಮೇರೆಗೆ ಈ ಸಾನಿಧ್ಯದ ಜೀರ್ಣೋದ್ಧಾರಕ್ಕೆ ಆಸಕ್ತಿ ವಹಿಸಿ ಮುಂದಾಗಿ ಜೀರ್ಣೋದ್ಧಾರ ಸಮಿತಿಯನ್ನೂ ರಚಿಸಲಾಯಿತು.

ಇದೀಗ ಈ ಸಾನಿಧ್ಯದಲ್ಲಿ ದೈವ ಸ್ಥಾನ ಮತ್ತು ನಾಗನ ಕಟ್ಟೆ ಜೀರ್ಣೋದ್ಧಾರಗೊಂಡಿದ್ದು, ಇಂದು ಬೆಳಿಗ್ಗೆ ಬ್ರಹ್ಮಕಲಶೋತ್ಸವವು ನಡೆಯಿತು.

ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಜರುಗಿತು. ನಿನ್ನೆ ರಾತ್ರಿ ದೇವತಾ ಪ್ರಾರ್ಥನೆ, ಪ್ರಾಸಾದ ಪರಿಗ್ರಹ, ಆಚಾರ್ಯವರಣೆ, ಸ್ವಸ್ತೀ ಪುಣ್ಯಾಹ ವಾಚನ, ಸ್ಥಳ ಶುದ್ಧಿ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬಜಲಾಧಿವಾಸ, ಪ್ರಾಕಾರ ಬಲಿ, ಪ್ರಸಾದ ವಿತರಣೆ ಜರುಗಿತು.

ಇಂದು ಮುಂಜಾನೆ ಮಹಾಗಣಪತಿ ಹೋಮ, ಪ್ರತಿಷ್ಠಾ ಹೋಮ, ಬ್ರಹ್ಮಕಲಶ ಪೂಜೆ, ಆಶ್ಲೇಷಾ ಬಲಿ, ಅಷ್ಟಪಟು ಆರಾಧನೆ ನಡೆದು ಪೂ.9.5೦ ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ನಾಗಶಿಲಾ ಪ್ರತಿಷ್ಠೆ ಆ ಬಳಿಕ ಶ್ರೀ ಕಾಜುಕುಜುಂಬ ಮತ್ತು ಉಳ್ಳಾಕುಲು ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

 

ವಾಸ್ತು ಶಿಲ್ಪಿ ಕೃಷ್ಣಪ್ರಸಾದ ಮುನಿಯಂಗಳ , ದೇಗುಲದ ಆಡಳಿತಾಧಿಕಾರಿ ಡಾ. ದೇವಿಪ್ರಸಾದ್ ಕಾನತ್ತೂರು, ಜೀರ್ಣೋದ್ದಾರ ಸಮಿತಿ
ಗೌರವಾಧ್ಯಕ್ಷ ಆನಂದ ಗೌಡ ಕಂಬಳ, ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಕಾರ್ಯದರ್ಶಿ ಪವಿತ್ರ ರಾಜೇಶ್ ಕುದ್ವ ಮಲ್ಲೆಟ್ಟಿ, ಖಜಾಂಜಿ ಪದ್ಮಾವತಿ , ಶ್ರೀಮತಿ ಪುಷ್ಪಾ ಡಿ. ಪ್ರಸಾದ್, ಬಾಲಕೃಷ್ಣ ಕುದ್ವ, ರಜಿತ್ ಭಟ್, ಸಂತೋಷ್ ಜಾಕೆ, ಗಣೇಶ್ ಭೀಮಗುಳಿ ಸೇರಿದಂತೆ ನೂರಾರು ಭಕ್ತರು ಭಾಗವಹಿಸಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.