ಬೇಡಿಕೆಗಳಿಗೆ ವಾರದೊಳಗೆ ಸ್ಪಂದಿಸದಿದ್ದರೆ ಶಾಸಕರ ಕಚೇರಿ ಎದುರು ಪ್ರತಿಭಟನೆ

Advt_Headding_Middle
Advt_Headding_Middle

 

ದಲಿತ್ ಸೇವಾ ಸಮಿತಿ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಕೆ

“ನಮ್ಮ ಬೇಡಿಕೆಗಳಿಗೆ ಇಂದಿನಿಂದ ಒಂದು ವಾರದೊಳಗೆ ಶಾಸಕರು ಸ್ಪಂದನೆ ನೀಡದಿದ್ದರೆ ಅವರ ಕಚೇರಿ ಎದುರು ಪ್ರತಿಭಟಿಸುವುದಾಗಿ ದಲಿತ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಎಚ್ಚರಿಕೆ ನೀಡಿದ್ದಾರೆ.


ಸುಳ್ಯ ತಾಲೂಕು ಕಚೇರಿ ಎದುರು ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ದಲಿತ್ ಸೇವಾ ಸಮಿತಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ, ಅಂಬೇಡ್ಕರ್ ಪ್ರತಿಮೆ, ಡಿ.ಸಿ. ಮನ್ನಾ ಜಮೀನು ಅರ್ಹರಿಗೆ ನೀಡಬೇಕು ಎಂದು ಕೇಳುವುದು ನಮ್ಮ ಬೇಡಿಕೆ. ಅದಕ್ಕಾಗಿ ಇಂದು ಪ್ರತಿಭಟಿಸುತ್ತಿದ್ದೇವೆ. ನಾವು ಪುತ್ತೂರಿನಲ್ಲಿ ಪ್ರತಿಭಡಿಸಿದಾಗ ಅಲ್ಲಿನ ಶಾಸಕರು, ಬಂಟ್ವಾಳ ದಲ್ಲಿ ಪ್ರತಿಭಟಿಸಿದಾಗ ಅಲ್ಲಿಯ ಶಾಸಕರು ತುರ್ತು ಕಾರ್ಯದಲ್ಲಿದ್ದರೂ ಬಂದು ಮನವಿ ಸ್ವೀಕಾರ ಮಾಡಿದ್ದಾರೆ. ಆದರೆ ಸುಳ್ಯ ಶಾಸಕ ಅಂಗಾರರು ಮಾತ್ರ ಇಲ್ಲಿಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ನಾವು ಅವರ ಬಂಧುಗಳು. ನಮ್ಮನ್ನು ಅವರೇ ಕಡೆಗಣಿಸಿ ದರೆ ಹೇಗೆ ಎಂದು ಪ್ರಶ್ನಿಸಿದ ಅವರು ಒಂದು ವಾರ ಕಾಯುತ್ತೇವೆ
ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕ ವಾಗಿ ಸ್ಪಂದನ ನೀಡದಿದ್ದರೆ ಅವರ ಕಚೇರಿ ಎದುರು ಪ್ರತಿಭಟಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನಾ ಸ್ಥಳಕ್ಕೆ ಬಂದ ತಹಶೀಲ್ದಾರ್ ಕುಂಞಿ ಅಹಮ್ಮದ್ ರು ಮನವಿ ಸ್ವೀಕರಿಸಿದರು.

ದಲಿತ್ ಸೇವಾ ಸಮಿತಿ ಜಿಲ್ಲೆ, ತಾಲೂಕು ಪದಾಧಿಕಾರಿಗಳು, ಹಾಗೂ ಜನರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.