HomePage_Banner
HomePage_Banner

ಐವರ್ನಾಡು ಶಾಲೆಯಲ್ಲಿ ಗಣರಾಜ್ಯೋತ್ಸವ ಮತ್ತು ಪ್ರತಿಭಾ ದಿನಾಚರಣೆ

ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಮತ್ತು ಪ್ರತಿಭಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಶಾಲಾ ಹಿರಿಯ ವಿದ್ಯಾರ್ಥಿ ಯಾದ ಪಿ .ವಿಲ್ಸನ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ರಿಸರ್ವ್ ಬ್ಯಾಂಕ್ ಆಫ್ ಮೈಸೂರ್ ಇವರು ನೆರವೇರಿಸಿದರು. ನಂತರ ಮಕ್ಕಳಿಂದ ವಿವಿಧ ಕವಾಯತು ಗಳು ಮತ್ತು ಘೋಷಣೆಗಳು ಮೊಳಗಿದವು. ಲಘು ಉಪಾಹಾರದ ಬಳಿಕ ಸಭಾಕಾರ್ಯಕ್ರಮ ಮುಂದುವರೆಯಿತು. ಸಭಾಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷರಾದ  ನಾಗಪ್ಪ ಗೌಡ ಪಾಲೆ ಪ್ಪಾಡಿ ಇವರು ವಹಿಸಿದ್ದರು.
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ  ದಿನೇಶ್ ಮಡ್ತಿಲ ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮ ಉದ್ಘಾಟಿಸಿದರು . ಶಾಲೆಗೆ ಶಾಶ್ವತ ಕೊಡುಗೆಗಳನ್ನು ನೀಡಿದಂತಹ  ವಿಲ್ಸನ್ ಮತ್ತು ಅವರ ಧರ್ಮಪತ್ನಿ ರೋಸ್ ವಿಲ್ಸ್ , ಶಾಂತರಾಮ ಕೆಎಸ್ ನಿವೃತ್ತ ಮುಖ್ಯ ಶಿಕ್ಷಕರು  ಜಗದೀಶ ಉದ್ದಂಪಾಡಿ ಅತಿಥಿಗಳಾದ  ತಿರುಮಲೇಶ್ವರ ಆರ್ತಾಜೆ , ಸಣ್ಣ ಮನೆ ನಿವೃತ್ತ ಯೋಧರು ,  ವೀರಪ್ಪಗೌಡ ನಿವೃತ್ತ ಮುಖ್ಯ ಶಿಕ್ಷಕರು,  ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ ಹಾಗೂ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಶ್ವತ ಕೊಡುಗೆ ಗಳನ್ನು ನೀಡಿದಂತಹ ದಾನಿಗಳನ್ನು ಸನ್ಮಾನಿಸಲಾಯಿತು. ದಾನಿಗಳ ಹಿತನುಡಿಗಳ ,ಶುಭ ಹಾರೈಕೆಯ ಬಳಿಕ ಗಣಿತ ಮೆಟ್ರಿಕ್ ಮೇಳದಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಗೌರವಿಸಲಾಯಿತು. ಬಹುಮಾನದ ಪ್ರಾಯೋಜಕರಾಗಿ ಗಣಿತ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಅವರು ನೀಡಿ ಸಹಕರಿಸಿದರು ನಂತರ ಗಣರಾಜ್ಯೋತ್ಸವ ಮತ್ತು ಪ್ರತಿಭಾ ದಿನಾಚರಣೆಯ ಪ್ರಯುಕ್ತ ನಡೆಸಿದ ಪಠ್ಯಾಧಾರಿತ ಸ್ಪರ್ಧೆಗಳು ಕ್ರೀಡಾ ಸ್ಪರ್ಧೆಗಳು ಹಾಗೂ ಪೋಷಕರಿಗೆ ನಡೆಸಿದ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು. ಬಹುಮಾನದ ಪಟ್ಟಿಯನ್ನು ಗೌರವ ಶಿಕ್ಷಕಿ ಶ್ರೀಮತಿ ಹೇಮಲತಾ ಮತ್ತು ಸಹಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಯವರು ವಾಚಿಸಿದರು. ಸಭಾಧ್ಯಕ್ಷರು ಗಣರಾಜ್ಯೋತ್ಸವದ ಮಹತ್ವ ಹಾಗೂ ಕೊಡುಗೆ ನೀಡಿದವರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು ಶ್ರೀಮತಿ ಹರಿಣಾಕ್ಷಿ ಜೆ ಸಹಶಿಕ್ಷಕಿ ಎಲ್ಲರನ್ನೂ ಸ್ವಾಗತಿಸಿದರು. ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಳಿನಾಕ್ಷಿ ಎ ಶೈಕ್ಷಣಿಕ ವರ್ಷದ ಸಮಗ್ರ ವರದಿಯನ್ನು ಮಂಡಿಸಿದರು.ಶ್ರೀಮತಿ ಸರಸ್ವತಿ ಸಹಶಿಕ್ಷಕಿ ಎಲ್ಲರಿಗೂ ಧನ್ಯವಾದಗಳನ್ನು ನೀಡಿದರು. ಶ್ರೀಮತಿ ಮಾಲತಿ ಬಿ ಕಾರ್ಯಕ್ರಮ ನಿರೂಪಿಸಿದರು ಭೋಜನದ ಬಳಿಕ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.