Breaking News

ಸುಳ್ಯ ತಾಲೂಕು ಬಂಟರ ಸಂಘದ ಸುಳ್ಯ ನಗರ ವಲಯದ ಪದಾಧಿಕಾರಿಗಳ ಆಯ್ಕೆ- ಅಧ್ಯಕ್ಷರಾಗಿ ನಾಗೇಶ ರೈ ಯನ್, ಕಾರ್ಯದರ್ಶಿಯಾಗಿ ಕುಸುಮಾಧರ ರೈ ಬೂಡು

Advt_Headding_Middle
Advt_Headding_Middle

ಸುಳ್ಯ ತಾಲೂಕು ಬಂಟರ ಸಂಘದ ಸುಳ್ಯ ನಗರ ವಲಯದ ಸರ್ವ ಸದಸ್ಯರ ಸಭೆಯು ವಲಯಾಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು ಇವರ ಅಧ್ಯಕ್ಷತೆಯಲ್ಲಿ ಕೇರ್ಪಳದ ಸಂಘದ ಕಚೇರಿಯಲ್ಲಿ ಜ.೨೫ರಂದು ಜರುಗಿತು.
ವಲಯದ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈಯವರು ಸಭೆಗೆ ಎಲ್ಲರನ್ನೂ ಸ್ವಾಗತಿಸಿ, ಕಳೆದ 3ವರ್ಷಗಳ ಅವಧಿಯಲ್ಲಿ ನಿರ್ವಹಿಸಿದ ವಲಯದ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ವಿವರವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಪ್ರಕಾಶ ರೈಯವರು ಮಾತನಾಡಿ ಸಂಘದ ಸದಸ್ಯರೆಲ್ಲರೂ ತಾಲೂಕು ಬಂಟಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥ ಮನೋಭಾವನೆಯಿಂದ  

ತೊಡಗಿಸಿಕೊಳ್ಳಬೇಕು ಹಾಗೂ ಸಂಘದ ಸಭಾಭವನ ನಿರ್ಮಾಣ ಕಾರ್ಯದ ಬಗ್ಗೆ ಆರ್ಥಿಕ ಕ್ರೋಢೀಕರಣಕ್ಕೆ ಹೆಚ್ಚಿನ ಮುತುವರ್ಜಿ ವಹಿಸಬೇಕೆಂದು ತಿಳಿಸಿ ಸದಸ್ಯರಿಗೆ ಕೆಲವೊಂದು ಕಿವಿಮಾತುಗಳನ್ನು ತಿಳಿಸಿದರು.
ನಂತರ ಮುಂದಿನ ಮೂರು ವರ್ಷಗಳ ಅವಧಿಗೆ ಸುಳ್ಯ ನಗರ ವಲಯದ ಹೊಸ ಕಾರ್ಯಕಾರಿ ಸಮಿತಿಗೆ ಸರ್ವಾನುಮತಿಯಿಂದ ಈ ಕೆಳಗಿನವರನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷರಾಗಿ ನಾಗೇಶ ರೈ ಯನ್, ಕಾರ್ಯದರ್ಶಿಯಾಗಿ ಕುಸುಮಾಧರ ರೈ ಬೂಡು, ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಉಮಾ ವಿ. ರೈ ಮತ್ತು ಕಾರ್ಯದರ್ಶಿಯಾಗಿ ಮೀರಾ ಯಂ. ರೈ, ಯುವ ಘಟಕದ ಅಧ್ಯಕ್ಷರಾಗಿ ಮಹಾಬಲ ರೈ ಬೂಡು ಹಾಗೂ ಕಾರ್ಯದರ್ಶಿಯಾಗಿ ರಾಜೇಶ್ ರೈ ಜಟ್ಟಿಪಳ್ಳ ಇವರುಗಳು ಆಯ್ಕೆಗೊಂಡರು. ನಿರ್ಗಮನಾಧ್ಯಕ್ಷ ಶಶಿಧರ ಶೆಟ್ಟಿ ಪಡ್ಪು ತಮ್ಮ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಅರ್ಪಿಸಿ, ಮಹಿಳಾ ಘಟಕದ ಕಾರ್ಯದರ್ಶಿ ಸುನಂದಾ ಶೆಟ್ಟಿ ಧನ್ಯವಾದ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.