Breaking News

ದೇವರ ಝರಿಯಲ್ಲಿ ಬ್ರಹ್ಮಕಲಶದ ಸಿರಿ-ನಾಗರಾಜ ಶ್ರೀ ರಕ್ತೇಶ್ವರಿ ಸಾನಿಧ್ಯ ನವೀಕರಣ

Advt_Headding_Middle
Advt_Headding_Middle

ದೇವಚಳ್ಳ ಗ್ರಾಮದ ಕಂದ್ರ ಪ್ಪಾಡಿ ಬಳಿಯ ಕುಂಬಾರಕೇರಿ ದೇವರ ಝರಿ ಎಂಬಲ್ಲಿ ನಾಗರಾಜ, ನಾಗರಾಣಿ ಶ್ರೀ ರಕ್ತೇಶ್ವರಿ ಹಾಗೂ ಕುಂಬಾರಕೇರಿಯ ಅಣ್ಣಪ್ಪ ಪಂಜುರ್ಲಿ, ಗುಳಿಗ ದೈವ ಗಳ ಜೀರ್ಣೋದ್ಧಾರ ಮತ್ತು ಬ್ರಹ್ಮ ಕಲಶೋತ್ಸವು ಜರಗಲಿದೆ.
ಕುಂಬಾರಕೇರಿಯ ದೇವರ ಝರಿ ಎದುರು ಭಾಗ ರೆಂಕಿಲ್ ಪಣೆಯೆಂಬ ಗುಡ್ಡವಿದೆ. ರೆಂಕಿಲ್ ಪಣೆಯಲ್ಲಿ ಗುಹೆಯೊಂದು ಇದ್ದು ಹಿಂದಿನ ಕಾಲದಲ್ಲಿ ಇದರಲ್ಲಿ ರೆಂಕಿಮುನಿ ತಪಸ್ಸು ಮಾಡುತ್ತಿದ್ದು ಅದೇ ಮುಂದೆ ರೆಂಕಿಲ್ ಪಣೆಯಾಯಿತು ಎಂಬ ಕಥೆಯಿದೆ. ರೆಂಕಿಲ್ ಪಣೆಯ ಅಡಿ ಭಾಗದಲ್ಲಿರುವ ಈ ತೀರ್ಥ ಗುಂಡಿಯಿಂದ ಜೈನರ ಕಾಲದಲ್ಲಿ ಬಸದಿಗೆ ನೀರು ತೆಗೆದು ಕೊಂಡು ಹೋಗಿ ತೀರ್ಥವಾಗಿ ಉಪಯೋಗಿಸುತ್ತಿದ್ದರು, ಅಲ್ಲದೆ ವರ್ಷಕೊಮ್ಮೆ ಆಟಿ ತಿಂಗಳ ಆಟಿ ಅಮಾವಾಸ್ಯೆ ದಿನ ಈ ನೀರಿನಲ್ಲಿ ಸ್ನಾನ ಮಾಡುವ ಪದ್ಧತಿ ಬೆಳೆದಿತ್ತು . ಇದೇ ಸ್ಥಳ ದೇವರ ಝರಿ ಕರೆಯಲ್ಪಡುತ್ತಿದೆ.
ಕುಂಬಾರ ಕೇರಿಯ ವೆಂಕಪ್ಪ ಗೌಡ ಎಂಬವರು ಎಂಬವರು 55 ವರ್ಷಗಳ ಹಿಂದೆ ತನ್ನ ಜಮೀನಿನ ಪಕ್ಕದಲ್ಲಿ ಸೊಪ್ಪು ಹೆರೆಯುತ್ತಿರುವಾಗ ಆಕರ್ಷಕ ನಾಗನ ಕಲ್ಲು ಝರಿಯ ಹತ್ತಿರ ಕಂಡು ಬಂದಿತ್ತು. ಈ ಬಗ್ಗೆ ಚಿಂತನೆಯಲ್ಲಿ ಕೇಳಿದಾಗ ಇಲ್ಲಿ ಪ್ರಬಲ ಶಕ್ತಿಯ ನಾಗನ ಸಾನ್ನಿಧ್ಯವಿದೆ ಎಂದು ಕಂಡುಬಂದಿತ್ತು. ಆ ಬಳಿಕ ಇಲ್ಲಿ ನಾಗಾರಾಧನೆ ಆರಂಭಗೊಂಡಿತು. ಕಳೆದ ಮೂವತ್ತೈದು ವರ್ಷಗಳಿಂದ ಇಲ್ಲಿ ಈಶ್ವರ ಭಟ್ ದೊಡ್ಡಕ್ಕ ಎಂಬವರಿಂದ ಪ್ರತಿ ವರ್ಷ ನಾಗರ ಪಂಚಮಿಯ ದಿನ ನಾಗನಿಗೆ ಹಾಲೆರೆಸುತ್ತಿದ್ದರು. ಅವರ ನಿಧನ ನಂತರ ಬೇರೆಯವರನ್ನು ಕರೆಸಿ ಪೂಜೆ ನೆರವೇರಿಸಲಾಗುತ್ತಿದೆ. ಕುಂಬಾ ರಕೇರಿ ಭಾಗದ ಕೆಲ ಮನೆಗಳಲ್ಲಿ ಸಮಸ್ಯೆಗಳು ಕಂಡು ಬಂದಾಗ ಪ್ರಶ್ನೆ ಚಿಂತನೆಗೆ ತೆರಳಿದ್ದರೆ ಆಗ ಕಂಡು ಬಂದಿzನೆಂದರೆ ದೇವರ ಝರಿ ಎಂಬಲ್ಲಿ ನಾಗರಾಜನ ಸಾನ್ನಿಧ್ಯ ಹಾಗೂ ಈ ಭಾಗದಲ್ಲಿರುವ ಅಣ್ಣಪ್ಪ ಪಂಜುರ್ಲಿ ಇವುಗಳಿಗೆ ಪೂರ್ಣ ಆರಾಧನೆ ನಡೆಯುತ್ತಿಲ್ಲ ಅದರಿಂದಾಗಿಯೇ ಈ ಭಾಗದ ಜಾಗದಲ್ಲಿ ಸರಿಯಾದ ಫಸಲು ಬರುತ್ತಿಲ್ಲ. ಹಾಗೂ ತೊಂದರೆಗಳು ಕಾಣಿಸುತ್ತಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಈ ಭಾಗದ ಮನೆಯವರು ಅದನ್ನು ಜೀರ್ಣೋದ್ಧಾರ ಗೊಳಿಸಲು ಪ್ರಯತ್ನಿಸಿದರೂ ಅದಕ್ಕೆ ಕಾಲ ಕೂಡಿಬರಲಿಲ್ಲ.
ಕುಂಬಾರ ಕೇರಿಯವರಾಗಿದ್ದು ನಿವೃತ್ತ ಪಿಎಸ್‌ಐ ಬಾಲಕೃಷ್ಣ ಮಾಡಬಾಗಿಲು ಎಂಬವರು ತಮ್ಮ ಗೆಳೆಯನ ಒತ್ತಾಯದ ಮೇರೆಗೆ ಕಾಕತಾಳೀ ಯವೊ ಎಂಬಂತೆ ಬಿ.ಸಿ ರೋಡ್ ನ ವರದರಾಜ ಪ್ರಭು ಎಂಬ ದೈವಜ್ಞರ ಬಳಿ ತೆರಳಿದ್ದರು. ಅಲ್ಲಿ ಬಂದವರೆಲ್ಲಾ ತಮ್ಮ ಸಮಸ್ಯೆ ಹೇಳಿ ಕೊಳ್ಳುತಿದ್ದರು. ಈ ವೇಳೆ ಬಾಲಕೃಷ್ಣ ಅವರು ಕೂಡ ದೈವಜ್ಞರ ಬಳಿ ತಮ್ಮ ಕುಂಬಾರಕೇರಿ ಭಾಗದ ಜಾಗದಲ್ಲಿ ಭೂಮಿಯು ಫಸಲನ್ನು ಸರಿಯಾಗಿ ನೀಡುತ್ತಿಲ್ಲ, ಊರ ಜನರಿಗೆ ಹಲವು ತಾಪತ್ರಯಗಳು ಸುತ್ತಿಕೊಳ್ಳುತ್ತಿವೆ ಎಂದು ತಮ್ಮ ಅಳಲು ತೋಡಿಕೊಂಡರು. ಅದಕ್ಕವರು ಪ್ರಥಮವಾಗಿ ಹೇಳಿದ್ದು ನಿಮ್ಮ ಆ ಭೂಮಿಯಲ್ಲಿ ಹಿಂದಿನಕಾಲದಲ್ಲಿ ಜೈನರಿದ್ದರು. ಅದು ದಾನ ಧರ್ಮ ನಡೆಯುತಿದ್ದ ಜಾಗ ಅಲ್ಲಿ ಪ್ರಬಲವಾದ ನಾಗನ ಸನ್ನಿಧಿಗೆ ಇದ್ದು ದೇವರ ಝರಿ ಇದೆ. ಅದರ ಜೀರ್ಣೋದ್ಧಾರ ಮಾಡಬೇಕು ಎಂದರು. ಈ ಬಗ್ಗೆ ಏನೂ ತಿಳಿಯದ ಬಾಲಕೃಷ್ಣ ಅವರು ಬಳಿಕ ಊರಲ್ಲಿ ಈ ವಿಷಯ ಪ್ರಸ್ತಾಪಿಸಿದರು. ಬಳಿಕ ಕುಲ್ಕುಂದದ ಅಭಿಲಾಷ್ ಜೋತಿಷ್ಯರನ್ನು ಭೇಟಿ ಮಾಡಿ ಪ್ರಶ್ನೆ ಇಡಲಾಯಿತು. ಅವರ ಸೂಚನೆ ಮೇರೆಗೆ ಕುಂಬಾರ ಕೇರಿಯ ಭಾಗದ ಕುಂಬಾರ ಕೇರಿ, ಅಂಬೆಕಲ್ಲು, ಮಾಡಬಾಗಿಲು, ದೇವರ ಝರಿ ಸೇರಿ 45 ಮನೆಯವರು ರತೀಶ್ ಕುಮಾರ್ ಎಂಬವರನ್ನು ಅಷ್ಟಮಂಗಳ ಪ್ರಶ್ನೆಗೆ ಕರೆಸಿದರು. ಆಗ ಕಂಡಂತೆ ದೇವರ ಝರಿ ಎಂಬಲ್ಲಿ ಶಕ್ತಶಾಲಿ ನಾಗರಾಜ, ನಾಗ ರಾಣಿ ಇದ್ದು ಇದರೊಂದಿಗೆ ಶ್ರೀ ರಕ್ತೇಶ್ವರಿ ಸಾನಿಧವಿರುವುದಾಗಿ ಕಂಡು ಬಂತು. ಹಿಂದೊಮ್ಮೆ ರಾಜವೈಭವದಿಂದ ಆಚ ರಣೆ ನಡೆಸಲಾಗುತ್ತಿತ್ತು. ಹಾಗೂ ಈ ಭಾಗದ ಕುಂಬಾರಕೇರಿಯ ಅಣ್ಣಪ್ಪ ಪಂಜುರ್ಲಿ, ಗುಳಿಗ ಇದ್ದು ಅದು ಜೀರ್ಣಾವಸ್ಥೆಯಲ್ಲಿ ಇರುವುದು. ಇದರಿಂದ ಈ ಭಾಗದವರಿಗೆ ತೊಂದರೆ ಕಾಣಿಸಿಕೊಳ್ಳುತ್ತಿರುವುದಾಗಿಯೂ, ಅದನ್ನು ಜೀರ್ಣೋದ್ಧಾರ ಮಾಡಿ ಬ್ರಹ್ಮಕಲಶ ಮಾಡಬೇಕು ಎಂದು ತಿಳಿಸಿದ್ದರು. ಅಣ್ಣಪ್ಪ ಪಂಜುರ್ಲಿ ದೈವಸ್ಥಾನವು ಕಮಲ ಮೋಂಟಡ್ಕರವವರ ಜಾಗದಲ್ಲಿದೆ.

ಜ.29ರಿಂದ ಜ.31ಪ್ರತಿಷ್ಠಾಪನೆ
ಹಾಗೂ ಬ್ರಹ್ಮಕಲಶೋತ್ಸವ
ಶ್ರೀ ನಾಗರಾಜ, ನಾಗರಾಣಿ – ರಕ್ತೇಶ್ವರೀ ಹಾಗೂ ಅಣ್ಣಪ್ಪ ಪಂಜುರ್ಲಿ ಮತ್ತು ಉಪ ದೈವಗಳ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವವು, ದೈವಜ್ಞರಾದ ರಮೇಶ್‌ಕುಮಾರ್ ಹಾಗೂ ಅಭಿಲಾಷ್ ಇವರ ದೂತ ವಾಕ್ಯದಂತೆ ಪೆರಾಜೆ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿರುವುದು. ಜ. 29 ರ ಸಂಜೆ ತಂತ್ರಿಗಳ ಆಗಮನವಾದ ಬಳಿಕ ಸಾಮೂಹಿಕ ಪ್ರಾರ್ಥನೆ, ಬಳಿಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8.00ಕ್ಕೆ – ಸಭಾಕಾರ್ಯಕ್ರಮ ನಡೆಯಲಿದ್ದು ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಾಡಬಾಗಿಲು ಅಧ್ಯಕ್ಷತೆ ವಹಿಸಲಿದ್ದಾರೆ. ಪೈಂದೋಡಿ ಸುಬ್ರಾಯ ದೇವಸ್ಥಾನದ ಪ್ರಧಾನ ಅರ್ಚಕ ವಿಷ್ಣು ಭಟ್ ಧಾರ್ಮಿಕ ಪ್ರವಚನ ಮಾಡಲಿದ್ದು, ದಿಕ್ಸೂಚಿ ಭಾಷಣವನ್ನು ಪ್ರಜ್ವಲ್ ಪಿ.ಆರ್ ಪೊಯ್ಯಮಜಲು ಮಾಡಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಜ. 30 ರಂದು ಗಣಪತಿ ಹೋಮ, ಬ್ರಹ್ಮಕಲಶ ಪೂಜೆ ಬೆ. ಗಂ.7.52ಕ್ಕೆ – ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾಗರಾಜ, ನಾಗರಾಣಿ, ರಕ್ತೇಶ್ವರಿ ಬ್ರಹ್ಮರಕ್ಕಸು ಹಾಗೂ ಗುಳಿಗ ದೈವದ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ನಡೆದು ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಶ್ರೀ ದೇವಿ ಭಜನಾ ಮಂಡಳಿ, ಕಂದ್ರಪ್ಪಾಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಜ. 31. ರ ಬೆ. ಗಂ. 7.48ರ ಕುಂಭ ಲಗ್ನ ಸುಮುಹೂರ್ತದಲ್ಲಿ ಗುಳಿಗ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.

ವರದಿ: ಶಿವರಾಮ ಕಜೆಮೂಲೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.