ಚೆಂಬು,ಅನ್ಯಾಳ: ಕೊಡಗು ಜಿಲ್ಲಾ ಸ್ವಜಾತಿ ಬಾಂಧವರಿಗೆ ಹಾಗೂ ಚೆಂಬು ಗ್ರಾಮಸ್ಥರಿಗೆ ಸೀಮಿತವಾದ ಸೌಹಾರ್ಧಯುತ ಕ್ರೀಡಾಕೂಟ

Advt_Headding_Middle
Advt_Headding_Middle

ಅಜಿಲ ಯಾನೆ ನಲಿಕೆ ಸೇವಾ ಸಮಿತಿ(ರಿ) ಮಡಿಕೇರಿತಾಲೂಕು, ಕೊಡಗು ಇವರ ವತಿಯಿಂದ ಕೊಡಗು ಜಿಲ್ಲಾ ಸ್ವಜಾತಿ ಬಾಂಧವರಿಗೆ ಹಾಗೂ ಚೆಂಬು ಗ್ರಾಮಸ್ಥರಿಗೆ ಸೀಮಿತವಾದ ಸೌಹಾರ್ಧಯುತ ಕ್ರೀಡಾಕೂಟ  ಜ.25ರಂದು ಚೆಂಬು ಆನ್ಯಾಳದ ಶ್ರೀ ಮಹಾವಿಷ್ಣುಮೂರ್ತಿ ಮೈದಾನದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷದೇವಪ್ಪ ಕೊಯನಾಡು ಅವರ ಉಪಸ್ಥಿತಿಯಲ್ಲಿ, ಸ್ಥಳದಾನಿಗಳಾದ ಅಡಿಗಾರಜಯರಾಮ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಸ್ಥಾಪಕಾಧ್ಯಕ್ಷ ಬಿ ತುಕ್ರಅಜಿಲ, ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ಕೆ ಕೆ, ಚಂದಪ್ಪ ಕಾಂತುಬೈಲು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಾಬು ಜೋಡುಪಾಲ, ನಗರಸಭೆ ಮಡಿಕೇರಿಯ ಮಾಜಿ ಉಪಾಧ್ಯಕ್ಷ ಶ್ರೀಮತಿ ಲೀಲಾ ಶೇಷಮ್ಮ, ಊರವರಾದ ಅರಂಬೂರು ನಾಗಪ್ಪಗೌಡ, ಚೆನ್ನಪ್ಪಗೌಡ ಬಂಗಾರಕೋಡಿ, ಜಯರಾಮ ಕಾಚೇಲು, ಸೋಮಣ್ಣ ಬಾಲೆಂಬಿ ವೇದಿಕೆಯಲ್ಲಿದ್ದರು.
ಕಬಡಿ ಅಂಕಣದ ಉದ್ಘಾಟನೆಯ ನಂತರ ಪಂದ್ಯಾಟಗಳು ಆರಂಭಗೊಂಡವು. ಪುರುಷರಿಗೆ ಕಬಡ್ಡಿ, ಹಗ್ಗಜಗ್ಗಾಟ, ಮಹಿಳೆಯರಿಗೆ ಲಕ್ಕಿ ಗೇಮ್, ಹಗ್ಗಜಗ್ಗಾಟ, ಅಂಗನವಾಡಿ ೧ ರಿಂದ ೧೦ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಿವಿಧ ಆಟೋಟಗಳು, ಸ್ವಜಾತಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಪಂದ್ಯಾಟವನ್ನುಏರ್ಪಡಿಸಲಾಗಿತ್ತು.
ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಗೆಳೆಯರ ಬಳಗ ಚೆಂಬು ಪ್ರಥಮ, ಶ್ರೀರಾಮ ದಬ್ಬಡ್ಕ ದ್ವಿತೀಯ, ಊರುಬೈಲು ತೃತೀಯ ಹಾಗೂ ಎಕೆಎಪ್ಸಿ ಆನ್ಯಾಳ ಚತುರ್ಥ ಸ್ಥಾನಿಗಳಾದರು.
ಪುರುಷರ ಹಗ್ಗಜಗ್ಗಾಟದಲ್ಲಿ ಶ್ರೀ ವಿಷ್ಣು ಆನ್ಯಾಳ ಪ್ರಥಮ, ಗೆಳೆಯರ ಬಳಗ ಚೆಂಬು ದ್ವಿತೀಯ ಸ್ಥಾನವನ್ನು ಪಡೆದರು. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಶ್ರೀ ವಿಷ್ಣು ಬಿ ಪ್ರಥಮ, ಶ್ರೀ ವಿಷ್ಣು ಎ ದ್ವಿತೀಯ ಸ್ಥಾನವನ್ನು ಪಡೆದರು.
ಸ್ವ-ಜಾತಿ ಪುರುಷರ ಹಗ್ಗಜಗ್ಗಾಟದಲ್ಲಿ ಕೃಷ್ಣಪ್ಪ ಆನ್ಯಾಳ ತಂಡ ಪ್ರಥಮ, ಗೋಪಾಲ ಆನ್ಯಾಳ ತಂಡ ದ್ವಿತೀಯ ಹಾಗೂ ಸ್ವಜಾತಿ ಮಹಿಳೆಯರ ಹಗ್ಗಜಗ್ಗಾಟದಲ್ಲಿ ಅಶ್ವಿನಿ ಸಿ ತಂಡ ಪ್ರಥಮ, ರಾಧಾ ಚಂದಪ್ಪ ತಂಡ ದ್ವಿತೀಯ ಸ್ಥಾನ ಪಡೆದರು.
ಅರಂಬೂರು ನಾಗಪ್ಪ ಗೌಡರು ಮಧ್ಯಾಹ್ನದ ಅನ್ನದಾನದ ಪ್ರಾಯೋಜಕರಾಗಿದ್ದರು. ಕಬಡ್ಡಿ ಪಂದ್ಯಾಟದ ಪ್ರಥಮಕ್ಯಾಶ್ ಫ್ರೈಝ್‌ನ್ನು ದಿ. ಜಾನಕಿ ಆನ್ಯಾಳ ಅವರ ಸ್ಮರಣಾರ್ಥ, ಅವರ ಮಕ್ಕಳು, ದ್ವಿತೀಯ ಕ್ಯಾಶ್ ಫ್ರೈಝ್‌ನ್ನು ದಿನೇಶ್ ಸಣ್ಣಮನೆ, ತೃತೀಯ ಕ್ಯಾಶ್ ಫ್ರೈಝ್‌ನ್ನು ದಿ. ಬಾಬು ಅಜಿಲ ಮತ್ತು ಚಿನ್ನಮ್ಮಅವರ ಸ್ಮರಣಾರ್ಥ ಅವರ ಮಕ್ಕಳು ನೀಡಿದರು. ಕಬಡ್ಡಿ ಪಂದ್ಯಾಟದ ವೈಯಕ್ತಿಕ ಬಹುಮಾನಗಳನ್ನು ಚರಿತ ಎಕ್ಕಡ್ಕ ನೀಡಿದರು. ಪುರುಷರ ಹಗ್ಗಜಗ್ಗಾಟದ ಪ್ರಥಮಕ್ಯಾಶ್ ಫ್ರೈಝ್‌ನ್ನು ದಿ. ಕಣ್ಣ ಬೆಳ್ಚಪ್ಪಾಡ ಅವರ ಸ್ಮರಣಾರ್ಥ, ಅವರ ಮಕ್ಕಳು, ದ್ವಿತೀಯದ ಕ್ಯಾಶ್ ಫ್ರೈಝ್ ನ್ನುಅಂಬಟೆಕಜೆ ದಿನೇಶ್ ಹಾಗೂ ವಾಸುದೆವ ನಿಡಿಂಜಿ, ಮಹಿಳಯರ ಹಗ್ಗಜಗ್ಗಾಟದ ಪ್ರಥಮಕ್ಯಾಶ್ ಫ್ರೈಝ್‌ನ್ನು ವಿಜಿ ಆಂಟೋನಿ & ಮನೆಯವರು, ದ್ವಿತೀಯ ಕ್ಯಾಶ್ ಫ್ರೈಝ್‌ನ್ನು ದಿ. ಸೂರ್ಯಕುಮಾರ್‌ಅವರ ಸ್ಮರಣಾರ್ಥ ಅವರ ತಂದೆ ಚೆನ್ನಪ್ಪ ಗೌಡ ಬಂಗಾರಕೋಡಿ ನೀಡಿದರು.
ಸ್ವಜಾತಿ ಪುರುಷರ ಹಗ್ಗಜಗ್ಗಾಟದ ಪ್ರಥಮಕ್ಯಾಶ್ ಫ್ರೈಝ್‌ನ್ನು ಪೂವಮ್ಮ& ಮಕ್ಕಳು ಕಿರಗೂರು & ದ್ವಿತೀಯಕ್ಯಾಶ್ ಫ್ರೈಝ್‌ನ್ನು ಲೋಹಿತ್ ಸುಳ್ಯ, ಮಹಿಳೆಯರ ಹಗ್ಗಜಗ್ಗಾಟದ ಪ್ರಥಮಕ್ಯಾಶ್ ಫ್ರೈಝ್‌ನ್ನು ಕವಿತಾರಜೀಶ್ ಕುಂಟಿಕಾನ & ದ್ವಿತೀಯಕ್ಯಾಶ್ ಫ್ರೈಝ್‌ನ್ನು ಸುಬ್ರಮಣಿ ಬಿಟ್ಟಂಗಾಲ ನೀಡಿದರು.
ಸಂಜೆ ಘಂಟೆ ೫.೦೦ಕ್ಕೆ ಸಮಾರೋಪ ಸಮಾರಂಭ ನಡೆಯಿತು. ದೇವಪ್ಪ ಕೆ.ಕೆ.ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಯು.ಕೆ.ದಿನೇಶ್, ಸದಸ್ಯರಾದ ಶ್ರೀಮತಿ ರೇಖಾಚಂದ್ರಶೇಖರ್, ಶ್ರೀ ಮಹಾವಿಷ್ಣುಮೂರ್ತಿದೈವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ಕಾಚೇಲು, ಪಯಸ್ವಿನಿ ಕೃಷಿಪತ್ತಿನ ನಿರ್ದೇಶಕರಾದ ದಿನೇಶ್ ಸಣ್ಣಮನೆ, ಕಾಚೇಲು ಪೊನ್ನಪ್ಪ ಮುಂತಾದವರಿದ್ದರು.
ಬಹುಮಾನ ವಿತರಣೆಯ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿಘಂಟೆ ೮.೦೦ರಿಂದ, ಕರ್ನಾಟಕ ಸರ್ಕಾರ ಕೊಡಗು ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಡಿಕೇರಿ ಕೊಡಗು ಇವರ ಪ್ರಾಯೋಜಕತ್ವದಲ್ಲಿಮಹಬಲೇಶ್ವರ ಭಟ್ ವಿಟ್ಲ ಮತ್ತು ತಂಡದವರು ಯಕ್ಷಗಾನ ಬಯಲಾಟ ಮಹಿಷಮರ್ದಿನಿ ಪ್ರಸಂಗವನ್ನು ನಡೆಸಿಕೊಟ್ಟರು.
ಸಮಿತಿಯ ಕೋಶಾಧಿಕಾರಿ ಕೃಷ್ಣಪ್ಪ ಬಿ ಸ್ವಾಗತಿಸಿದರು, ಕಾರ್ಯದರ್ಶಿ ಅರುಣ್ ಸಿ ವಂದಿಸಿದರು, ಸುಬ್ರಾಯ ನಲಿಕೆ ಕಲ್ಮಂಜಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.