ಜ.31: ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವ

Advt_Headding_Middle
Advt_Headding_Middle

ಕಟ್ಟ ಕೊಚ್ಚಿಲ ಶ್ರೀ ಮಯೂರವಾಹನ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಮಹೋತ್ಸವವು ಜ.31ರಂದು ಕೋಡಿಯಡ್ಕ ವೇದಮೂರ್ತಿ ತಂತ್ರಿ ಕಿಳಿಂಗಾರು ಶ್ರೀ ಶಿವರಾಮ ಭಟ್‌ರವರ ನೇತೃತ್ವದಲ್ಲಿ ನಡೆಯಲಿದೆ. ಜ.30ರಂದು ಸಂಜೆ ಹಸಿರುವಾಣಿ ಸಮರ್ಪಣೆ, ಜ.31ರಂದು ಬೆಳಿಗ್ಗೆ 7.೦೦ರಿಂದ ಶ್ರೀ ಗಣಪತಿಹವನ, ಕಲಾಭಿಷೇಕ, ನಾಗತಂಬಿಲ, ಮಧ್ಯಾಹ್ನ ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಸಂಜೆ6.೦೦ರಿಂದ ಭಜನಾ ಕಾರ್ಯಕ್ರಮ, ರಾತ್ರಿ ವಿಶೇಷ ಕಾರ್ತಿಕ ಪೂಜೆ ನಡೆದು ರಾತ್ರಿ 8.೦೦ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಸಂಭ್ರಮ ಹಾಗೂ ಅನ್ನಸಂತರ್ಪಣೆ, ನಂತರ ರಾತ್ರಿ 9.೦೦ರಿಂದ ಲಾಸ್ಯ ಕಲಾ ತಂಡ ಗುತ್ತಿಗಾರು ಇವರಿಂದ `ನೃತ್ಯಾರ್ಪಣಂ` ಕಾರ್ಯಕ್ರಮ ನಡೆಯಲಿದೆ. ಫೆ.೧ರಂದು ಪೂರ್ವಾಹ್ನ ೯.೦೦ರಿಂದ ದೈವಗಳ ನೇಮ, ಅಪರಾಹ್ನ ಅನ್ನಸಂತರ್ಪಣೆ, ರಾತ್ರಿ 9.30ರಿಂದ ಅಗ್ನಿಗುಳಿಗರಾಜ ದೈವದ ನೇಮೋತ್ಸವ ನಡೆಯಲಿದೆ. ಫೆ.2ರಂದು ಪೂರ್ವಾಹ್ನ 8.೦೦ರಿಂದ ಮಿತ್ತೋಡಿಯಲ್ಲಿ ದೈವಗಳ ನೇಮ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.