ಪಂಜ ಕೃಷ್ಣನಗರದಲ್ಲಿ ಶ್ರೀ ದೇವಿ ವೆಲ್ ವಿಷರ್ಸ್ ಶುಭಾರಂಭ

Advt_Headding_Middle
Advt_Headding_Middle


ಶ್ರೀಮತಿ ಪೂರ್ಣಿಮಾ ಮತ್ತು ದೇವಿಪ್ರಸಾದ್ ಜಾಕೆ ಮಾಲೀಕತ್ವದ
ಕಟ್ಟಡ ಸಾಮಾಗ್ರಿಗಳ ಕಮಿಷನ್ ಆಧಾರಿತ ಆನ್‌ಲೈನ್ ಹೋಲ್ ಸೇಲ್ ವ್ಯಾಪಾರದ ಮಳಿಗೆ ಶ್ರೀ ದೇವಿ ವೆಲ್ ವಿಷರ್ಸ್ ಜ. 29 ರಂದು ಪಂಜದ ಕೃಷ್ಣನಗರದಲ್ಲಿ ಉದ್ಘಾಟನೆಗೊಂಡಿತು. ಬೆಳಿಗ್ಗೆ ಶಿವಕುಮಾರ ಸುಬ್ರಹ್ಮಣ್ಯರವರಿಂದ ಗಣಪತಿ ಹೋಮ ನಡೆಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಜ ಗ್ರಾ.ಪಂ. ಅಧ್ಯಕ್ಷ ಕಾರ್ಯಪ್ಪ ಗೌಡ ವಹಿಸಿದ್ದರು.

ಹಾಸನಡ್ಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಶಶಿಧರ್ ಹಾಸನಡ್ಕ ಸಂಕೀರ್ಣವನ್ನು ಉದ್ಘಾಟಿಸಿ ಶುಭ ಹಾರಿಸಿದರು. ಶ್ರೀಮತಿ ಹೇಮಾವತಿ ಮತ್ತು ಮುತ್ತಯ್ಯ ಅಂಬೆಕಲ್ಲು ಅಂಗಡಿಯನ್ನು ಉದ್ಘಾಟಿಸಿದರು. ಗೋದಾಮು ಕಟ್ಟಡವನ್ನು ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಾಗಿ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಪದ್ಮಾವತಿ, ಸ್ಥಳದ ಮಾಲಕರಾದ ಯೋಗೀಶ್ ಚಿದ್ಗಲ್, ವಿಶ್ವನಾಥ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಭಾರತದಲ್ಲಿ ಪ್ರಥಮ ಬಾರಿಗೆ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಬಿಸಿ ರಹಿತ, ಶಬ್ದರಹಿತ ಮತ್ತು ದೀರ್ಘ ಬಾಳಿಕೆಯ 4 ಲೇಯರ್ ಯು.ಪಿ.ವಿ.ಸಿ. ರೂಫಿಂಗ್ ಶೀಟ್ ಮತ್ತು ಜೆ.ಎಸ್.ಡಬ್ಲ್ಯೂ ಪ್ರೈಮರಿ ಕಬ್ಬಿಣದ ಸಾಕ್ಷ್ಯಚಿತ್ರ ಪ್ರದರ್ಶನ, ಕಟ್ಟಡ ಸಾಮಾಗ್ರಿಗಳ ಪ್ರದರ್ಶನ ಮತ್ತು ಮಾಹಿತಿ, ವಿನೂತನ ತಾಂತ್ರಿಕತೆ ಮೂಲಕ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಲಿದೆ. ದೇವಿಪ್ರಸಾದ್ ಜಾಕೆ ಪ್ರಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ತೀರ್ಥಾನಂದ ಕೊಡೆಂಕಿರಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.