Breaking News

ಮಾಣಿಬೈಲು :ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವ

Advt_Headding_Middle
Advt_Headding_Middle

ಮಾಣಿಬೈಲು ಊರ ದೈವಗಳಾದ
ಶ್ರೀ ಉಳ್ಳಾಕುಲು, (ಪೂಮಾಣಿ-ಕಿನ್ನಿಮಾಣಿ), ಶ್ರೀ ರಕ್ತೇಶ್ವರಿ, ಶಿರಾಡಿ ದೈವ, ವರ್ಣಾರ ಪಂಜುರ್ಲಿ, ಪುರುಷ ದೈವ ಹಾಗೂ ಪರಿವಾರ ದೈವಗಳ
ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ನೇಮೋತ್ಸವವು ಜ. ೨೭ ರಿಂದ ಜ.೨೯ ರವರೆಗೆ
ಜರುಗಿತು.
ಜ.೨೭.ರಂದು ಬೆಳಗ್ಗೆ ಗಣಹೋಮ
ರಾತ್ರಿ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಭಂಡಾರ ತೆಗೆದು ಬಳಿಕ ಅನ್ನಸಂತರ್ಪಣೆ ನಡೆಯಿತು. ಜ.೨೮ ರ ಬೆಳಗ್ಗೆ ಪೂಮಾಣಿ ದೈವದ ನೇಮ ನಡೆದು ಮಧ್ಯಾಹ್ನ ಕಿನ್ನಿಮಾಣಿ ದೈವದ ನೇಮ ನಡೆದು ಅನ್ನಸಂತರ್ಪಣೆ ನಡೆಯಿತು.


ಅಪರಾಹ್ನ ಶ್ರೀ ರಕ್ತೇಶ್ವರಿ ಮತ್ತು ಗುಳಿಗ ದೈವದ ನೇಮ,
ರಾತ್ರಿ ವರ್ಣಾರ ಪಂಜುರ್ಲಿ ದೈವದ ನೇಮ ನಡೆದು ರಾತ್ರಿ
ಅನ್ನಸಂತರ್ಪಣೆ ಬಳಿಕ
ಪುರುಷ ದೈವದ ನೇಮ ನಡೆಯಿತು. ಜ.೨೯ ರ
ಬೆಳಗ್ಗೆ ಶಿರಾಡಿ ದೈವ ಮತ್ತು ಗಿಣಿರಾಮ ದೈವದ ನೇಮ.
ಮಧ್ಯಾಹ್ನ ಮಲೆಚಾಮುಂಡಿ, ಕೂಜಿಗ ಮತ್ತು ರಾಹುಗುಳಿಗ ದೈವಗಳಿಗೆ ತಂಬಿಲ ನಡೆದು ಅನ್ನಸಂತರ್ಪಣೆ ನಡೆಯಿತು .

ಕಾರ್ಯಕ್ರಮ ಯಶಸ್ವಿಯಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಲೋಕೇಶ್ ಬಿ.ಎನ್, ಕಾರ್ಯದರ್ಶಿ ಮಹೇಶ್ ಮಾಣಿಬೈಲು, ಕೋಶಾಧಿಕಾರಿ ರತನ್ ಮಾಣಿಬೈಲು, ಸುಬ್ರಾಯ ಗೌಡ ಮಾಣಿಬೈಲು, ಗಂಗಾಧರ ಉಪ್ಪಳಿಕೆ, ದಿನೇಶ್ ಕೇದಿಗೆಬನ, ಮೋನಪ್ಪ ಗೌಡ ಕಲ್ಕಜೆ, ಆನಂದ ಗೌಡ ದೊಡ್ಡಗುಂಡಿ, ಚಂದ್ರಶೇಖರ ಅಲೆಪ್ಪಾಡಿ ಹಾಗೂ ಊರ ಸಮಸ್ತರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.