ಸಂಪಾಜೆ : ಪಯಸ್ವಿನಿ ಯುವಕ ಮಂಡಲದಲ್ಲಿ ಹುತಾತ್ಮ ದಿನಾಚರಣೆಯ ಮತ್ತು ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮ

Advt_Headding_Middle
Advt_Headding_Middle


ಪಯಸ್ವಿನಿ ಯುವಕ ಮಂಡಲ ಸಂಪಾಜೆ-ಕೊಡಗು, ಕೊಡಗು ಸಂಪಾಜೆ ಗ್ರಾಮ ವ್ಯಾಪ್ತಿಯಲ್ಲಿ ನೆಹರು ಯುವ ಕೇಂದ್ರ ಕೊಡಗು ಜಿಲ್ಲೆ, ಮಡಿಕೇರಿ (ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ) ಮತ್ತು ಪಯಸ್ವಿನಿ ಯುವಕ ಮಂಡಲ, ಸಂಪಾಜೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪಾಜೆ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಹುತಾತ್ಮ ದಿನಾಚರಣೆಯ ಮತ್ತು ಕುಷ್ಠ ರೋಗ ಅರಿವು ಆಂದೋಲನ ಕಾರ್ಯಕ್ರಮವು ಜ. ೩೦ ರಂದು ಸಂಪಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯೊಂದಿಗೆ ಪಯಸ್ವಿನಿ ಯುವಕ ಮಂಡಲದ ಉಪಾಧ್ಯಕ್ಷರಾದ ತೀರ್ಥ ಪ್ರಸಾದ್ ದುಗ್ಗಳರವರು ಅಧ್ಯಕ್ಷತೆ ವಹಿಸಿದ್ದರು. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಕುಮಾರ್ ಚೆದ್ಕಾರ್, ಉದ್ಘಾಟಿಸಿದರು.


ಮಡಿಕೇರಿ ರಾಷ್ಟ್ರೀಯ ಯುವ ಕಾರ್ಯಕರ್ತರಾದ ಸಂತೋಷ್ ಕುಮಾರ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸಂಪಾಜೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸಾವಿತ್ರಿ, ಸಂಪಾಜೆ ಗ್ರಾ.ಪಂ. ಸದಸ್ಯೆ ಶ್ರೀಮತಿ ರಮಾದೇವಿ ಕಳಗಿ, ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಆರ್ ವಿಠಲ್, ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಳಿತಾಧಿಕಾರಿU ಪಿ. ಮಲ್ಲಿಕಾರ್ಜುನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾರತೀಯ ಸೇನೆಯ ನಿವೃತ್ತ ಯೋಧ ಮಾಯಿಲಪ್ಪ ಮೂಲ್ಯ, ಭಾಗವಹಿಸಿದ್ದರು.


ಸಭೆಯಲ್ಲಿ ಸಂಪಾಜೆ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕ ಅನಂತ್ ಕುಮಾರ್ ರವರು ಹುತಾತ್ಮರ ದಿನಾಚರಣೆಯನ್ನು ಸ್ಮರಿಸುತ್ತಾ ಸ್ಪರ್ಶ್ ಕುಷ್ಠ ರೋಗ ಅರಿವು ಜಾಗೃತಿ ಆಂದೋಲನದ ಬಗ್ಗೆ ವಿವರಣೆ ನೀಡಿದರು, ಆರೋಗ್ಯ ಕೇಂದ್ರ ಅಡಳಿತಾಧಿಕಾರಿಗಳಾದ ಮಲ್ಲಿಕಾರ್ಜುನ್ ರವರು ಮಾತನಾಡಿ ಕುಷ್ಠರೋಗದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಮತ್ತು ಜನವರಿ ೩೦ ರಿಂದ ಫೆಬ್ರವರಿ ೧೩ನೇ ದಿನಾಂಕದ ವರೆಗೆ ನಡೆಯುವ ಜಾಗೃತಿ ಆಂದೋಲನದ ಬಗ್ಗೆ ಅರಿವು ಮೂಡಿಸಿದರು. ಪಯಸ್ವಿನಿ ಯುವಕ ಮಂಡಲ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ನಿವೃತ ಯೋಧರಾದ ಮಾಯಿಲಪ್ಪ ಮೂಲ್ಯ ರವರು ಭಾರತೀಯ ಸೇನೆಯಲ್ಲಿ ತನ್ನ ಸೇವಾ ಸಂಧರ್ಭದಲ್ಲಿ ಆದಂತಹ ಘಟನೆಗಳನ್ನು ವಿವರಿಸುತ್ತಾ ಯುವಕರಿಗೆ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಸಮಾರಂಭದಲ್ಲಿ ಚರಣ್ ಬಿ ಜೆ ಮತ್ತು ಮಿಥುನ್ ಎಂ.ಬಿ, ರಾಷ್ಟ್ರೀಯ ಯುವ ಕಾರ್ಯಕರ್ತರು, ಮಡಿಕೇರಿ ತಾಲೋಕು, ಹಾಗೂ ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ ವರ್ಗ, ಪಯಸ್ವಿನಿ ಯುವಕ ಮಂಡಲದ ಸರ್ವ ಸದಸ್ಯರುಗಳು, ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಾಲಾ ವಿದ್ಯಾರ್ಥಿ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀ ಚೇತನ್ ರವರು ಗಣ್ಯರನ್ನು ಸ್ವಾಗತಿಸಿ ವಂದಿಸುತ್ತಾ ಕಾರ್ಯಕ್ರಮವನ್ನು ನಿರೂಪಿಸಿದರು, ನಂತರ ಪಯಸ್ವಿನಿ ಯುವಕ ಮಂಡಲ ಸಂಪಾಜೆ ಇದರ ಸರ್ವ ಸದಸ್ಯರುಗಳು ಸೇರಿ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿಹಿ ತಿಂಡಿ ಹಂಚಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.