ಪೈಂದೋಡಿ-ನೇರಳ-ಅಡ್ಕ ಕಾಂಕ್ರಿಟ್ ರಸ್ತೆ ಶಾಸಕರಿಂದ ಉದ್ಘಾಟನೆ

Advt_Headding_Middle
Advt_Headding_Middle

 

ಪಂಜದ ಪೈಂದೋಡಿ ,ನೇರಳ, ಅಡ್ಕ ರಸ್ತೆಯು ಶಾಸಕರ ಶಿಪಾರಸ್ಸಿನ ಮೇರೆಗೆ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 1 ಕೋಟಿ 31.ಲಕ್ಷ ರೂ.ವಿನ ವೆಚ್ಚದಲ್ಲಿ 1.4ಕಿ.ಮೀ ಕಾಂಕ್ರಿಟ್‌ಕರಣ ಗೊಂಡ ರಸ್ತೆಯನ್ನು ಜ.3೦.ರಂದು ಶಾಸಕ ಎಸ್ ಅಂಗಾರ ರವರು ಉದ್ಘಾಟಿಸಿದರು.


ಅಂತರ್ಜಲ ವೃದ್ಧಿಗಾಗಿ ಡ್ಯಾಮ್‌ಗಳ ನಿರ್ಮಿಸಲು ಸುಳ್ಯ ತಾಲೂಕಿಗೆ ಸುಮಾರು ೧೫ ಪ್ರಸ್ತಾವನೆಯನ್ನು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಟ್ಟಿದ್ದೇವೆ. ಅದರಲ್ಲಿ ಇಲ್ಲಿನ ಹೊಳೆಯ ಅಡ್ಕ ಎಂಬ ಸ್ಥಳ ಕೂಡ ಇರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭ ಗ್ರಾ.ಪಂ.ಅಧ್ಯಕ್ಷ ಕಾರ್‍ಯಪ್ಪ ಗೌಡ ಚಿದ್ಗಲ್ಲು, ಗ್ರಾ.ಪಂ. ಸದಸ್ಯರಾದ ಲಿಗೋಧರ ಆಚಾರ್ಯ, ಲೋಕೇಶ್ ಬರೆಮೇಲು , ಜಗಧೀಶ ಪುರಿಯ, ಪಂಜ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಚಿನ್ನಪ್ಪ ಚೊಟ್ಟೆಮಜಲು, ಡಾ.ರಾಮಯ್ಯ ಭಟ್ ಶಿವರಾಮಯ್ಯ ಕರ್ಮಾಜೆ, ರಘುರಾಮ ಭಟ್ ಅಡ್ಕ, ಗುತ್ತಿಗೆದಾರರ ಪರವಾಗಿ ಅಭಿಷೇಕ್ ,ಪ್ರಾಂಶುಪಾಲ ರಾಘವ ನೆಕ್ಕಿಲ, ನಿವೃತ್ತ ಶಿಕ್ಷಕ ಸದಾನಂದ ತೋಟ, ಪುರುಷೋತ್ತಮ ನೆಕ್ಕಿಲ, ಮೋನಪ್ಪ ಗೌಡ ಬರೆಮೇಲು, ನವೀನ್ ಕೋಲ್ಚಾರ್ ,ಗಣೇಶ್ ಅಡ್ಕ, ಮೋಹನ್ ಅಡ್ಕ, ಧರ್ಮಪಾಲ,ವಸಂತ ಬರೆಮೇಲು, ಚೆನ್ನಕೇಶವ ಆಚಾರ್ಯ, ಗೋಪಾಲಕೃಷ್ಣ ಕಂಡೂರು ಮೊದಲಾದವರು ಉಪಸ್ಥಿತರಿದ್ದರು. ಇದೇ ರಸ್ತೆಗೆ ೧೨೦ ಮೀಟರ್ ಕಾಂಕ್ರಿಟ್‌ಕರಣಕ್ಕೆ ಸಂಸzರ ನಿಧಿಯಿಂದ ಸಂಸದ ನಳೀನ್‌ಕುಮಾರ್ ಕಟೀಲ್‌ರವರು ೬ ಲಕ್ಷ ರೂ.ಅನುದಾನ ನೀಡಿದ್ದರು. ಕಾರ್‍ಯಕ್ರಮದಲ್ಲಿ ಉದಯಶಂಕರ ಅಡ್ಕ ನಿರೂಪಿಸಿದರು.ಲೋಕೇಶ್ ಬರೆಮೇಲು ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.