ಕೆವಿಜಿ ಪಾಲಿಟೆಕ್ನಿಕ್ : ಸೃಜನಶೀಲ ನಾಯಕತ್ವ ತರಬೇತಿ

Advt_Headding_Middle
Advt_Headding_Middle

ಸುಳ್ಯದ ಕುರುಂಜಿ ವೆಂಕಟ್ರಮಣಗೌಡ ಪಾಲಿಟೆಕ್ನಿಕ್ ಗುತ್ತಿಗಾರು ಗ್ರಾಮದ ಕಮಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿರುವ ದಕ್ಷಿಣಕರ್ನಾಟಕ ವಿಭಾಗಿಯ ಮಟ್ಟದ ಅಂತರ್ ಪಾಲಿಟೆಕ್ನಿಕ್ ಎನ್ನೆಸ್ಸೆಸ್ ಶಿಬಿರದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್‌ಕ್ರಾಸ್ ವಿಭಾಗದ ಸಹಯೋಗದೊಂದಿಗೆ ಸೃಜನಶೀಲ ನಾಯಕತ್ವ ವಿಷಯದಲ್ಲಿತರಬೇತಿ ಕಾರ್ಯಕ್ರಮ ನಡೆಯಿತು. ಜೇಸೀಸ್ ತರಬೇತುದಾರ ಸೋಮಶೇಖರ ನೇರಳ ತರಬೇತಿ ನೀಡಿದರು.


ಕೆ.ವಿ.ಜಿ ಪಾಲಿಟೆಕ್ನಿಕ್‌ನ ಸಿವಿಲ್ ವಿಭಾಗದ ಮುಖ್ಯಸ್ಥ ಚಿಕ್ಕಪುಟ್ಟೆ ಗೌಡರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿಕರಾದ ಚಂದ್ರಶೇಖರತುಪ್ಪದ ಮನೆ, ನಿವೃತ್ತಅರಣ್ಯಾಧಿಕಾರಿ ಧರ್ಮಪಾಲ, ಅಂಗನವಾಡಿ ಜಿಲ್ಲಾಒಕ್ಕೂಟದ ಅಧ್ಯಕ್ಷೆ ಲತಾ ಅಂಬೆಕಲ್ಲು, ಗ್ರಾಮ ಪಂಚಾಯತ್ ಉಪಾದ್ಯಕ್ಷೆ ಸವಿತಾ ಕುಳ್ಳಂಪಾಡಿ, ಸದಸ್ಯೆ ಮಿತ್ರಕುಮಾರಿ ಚಿಕ್ಮುಳಿ, ಬಾಗೀರಥಿ ಕಾಜಿಮಡ್ಕ, ಶ್ರಿದೇವಿ ಕೊಂಬೆಟ್ಟು, ಉದ್ಯಮಿ ದೇವಿಪ್ರಸಾದ್ ಚಿಕ್ಮುಳಿ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಬ್ಬ ಆಚಳ್ಳಿ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಶಿಬಿರಾಧಿಕಾರಿ ಚಂದ್ರಶೇಖರ ಬಿಳಿನೆಲೆ, ಶಿಬಿರಾಧಿಕಾರಿಗಳಾದ ರಾಮ್‌ಪ್ರಸಾದ್ ಎಂ, ಪ್ರಶಾಂತ್, ಸುಜಿತ್‌ಎಂ.ಎಸ್ ಮೊದಲಾದವರು ನೇತೃತ್ವ ವಹಿಸಿದ್ದರು. ಶಿಬಿರಾರ್ಥಿಗಳಾದ ನಿಶ್ಮಿತಾ ಸ್ವಾಗತಿಸಿ, ರಚನಾ ವಂದಿಸಿದರು, ದೀಕ್ಷಿತ್ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.