ಬಾಳುಗೋಡು:  ಗೌಡ ಕ್ರೀಡಾಕೂಟ

Advt_Headding_Middle
Advt_Headding_Middle

ಲೆಟ್ಟಿ, ಏನೆಕಲ್ಲು, ಕಳಂಜ ಗ್ರಾಮಗಳು ಪ್ರಥಮ

ಗ್ರಾಮ ಗೌಡ ಸಮಿತಿ ಬಾಳುಗೋಡು, ಗೌಡರ ಯುವ ಸೇವಾ ಸಂಘ ಸುಳ್ಯ ತಾಲೂಕು ಆಶ್ರಯದಲ್ಲಿ ತಾಲೂಕು ಮಟ್ಟದ ಗೌಡರ ಕ್ರಿಕೆಟ್, ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾಟ ಬಾಳುಗೋಡಿನಲ್ಲಿ ಜ.೨೫ ಮತ್ತು ೨೬ ರಂದು ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗುತ್ತಿಗಾರು ವಲಯ ಗೌಡ ಸಮಿತಿಗಳ ಉಸ್ತುವಾರಿ ನಿರ್ದೇಶಕ ವಸಂತ ಕಿರಿಭಾಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗೌಡ ಯುವಸೇವಾ ಸಂಘ ಸುಳ್ಯ ತಾಲೂಕು ಇದರ ಅಧ್ಯಕ್ಷ ಮೋಹನ್ರಾಮ್ ಸುಳ್ಳಿ, ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರೆಮೇಲು, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ವಿಘ್ನೇಶ್ವರ ಬೆಂಡೋಡಿ, ಹರಿಹರ ಪಲ್ಲತಡ್ಕ ಗ್ರಾಮದ ಮಾಜಿ ಮಂಡಲ ಪ್ರಧಾನ ಸುಧೀರ್ ಕೆ.ವಿ, ತರುಣ ಘಟಕದ ಶ್ರೀಕಾಂತ್ ಮಾವಿನಕಟ್ಟೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಂದರ್ಭ ಸಿ.ಆರ್ .ಪಿ.ಎಫ್ ನ ನಿವೃತ್ತ ಯೋಧ ಜನಾರ್ಧನ ಬಾಳುಗೋಡು, ನಿವೃತ್ತ ಭೂಸೇನಾ ಯೋಧ ಧನಂಜಯ ಬಾಳುಗೋಡು, ಸಿ.ಆರ್.ಪಿ.ಎಪ್ ಯೋಧೆ ಯಶೋಧ ಧನಂಜಯ ಬಾಳುಗೋಡು, ನಿವೃತ್ತ ಶಿಕ್ಷಕ ಪದ್ಮಯ್ಯ ಗೌಡ ಕೂಜುಗೋಡು ಕಟ್ಟೆಮನೆ, ಹಿರಿಯ ದೈವ ಸೇವಕ ಹೊನ್ನಪ್ಪ ಗೌಡ ಕುಡುಮುಂಡೂರು, ಹಿರಿಯ ಊರು ಗೌಡ್ರು ಚಿದಾನಂದ ಗೌಡ ಉಪ್ಪುಕಳ, ಡಾಕ್ಟರೇಟ್ ಪದವೀಧರ ಡಾ. ಸೋಮಶೇಖರ ಕೂಜುಗೋಡು ಕಟ್ಟೆಮನೆ, ರಾಷ್ಟ್ರೀಯ ಕ್ರೀಡಾಪಟುಗಳಾದ ಭವಿತ್ ಬಾಳುಗೋಡು, ರಕ್ಷಾ ಬಾಳುಗೋಡು, ವನ್ಯಶ್ರೀ ಕಿರಿಭಾಗ, ಜಿಲ್ಲಾ ಮಟ್ಟದ ಕ್ರೀಡಾಪಟು ನಿಶ್ಮಿತಾ ಶಿವಾಲ ಅವರನ್ನು ಸನ್ಮಾನಿಸಲಾಯಿತು. ಲೋಹಿತ್ ಮುಚ್ಚಾರ ಸ್ವಾಗತಿಸಿ, ಸೋಮಶೇಖರ ಕಟ್ಟೆಮನೆ ವಂದಿಸಿದರು, ಅಜೇಯ ಪೊಯ್ಯೆಮಜಲು ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ
ಮಹಿಳೆಯರ ತ್ರೋಬಾಲ್ ಪಂದ್ಯದಲ್ಲಿ ಕಳಂಜ ಗ್ರಾಮ ಪ್ರಥಮ ಸ್ಥಾನ ಪಡೆದರೆ, ಹರಿಹರ ಪಲ್ಲತಡ್ಕ ದ್ವಿತೀಯ ಸ್ಥಾನ ಪಡೆಯಿತು, ಕಳಂಜದ ಯಶ್ವಿತಾ ಕಜೆಮೂಲೆ ಉತ್ತಮ ಎಸೆತಗಾರ್ತಿ ಯಾದರೆ ಹರಿಹರದ ಧನ್ಯಾ ರೇಗನ್ ಉತ್ತಮ ಹಿಡಿತಗಾರ್ತಿ ಯಾದರು, ಸರ್ವಾಂಗೀಣ ಆಟಗಾರ್ತಿಯಾಗಿ ಕಳಂಜದ ಭವಿತಾ ಬಹುಮಾನ ಪಡೆದರು. ಕ್ರಿಕೆಟ್ ಪಂದ್ಯಾಟದಲ್ಲಿ ಆಲೆಟ್ಟಿ ಗ್ರಾಮ ಪ್ರಥಮ ಸ್ಥಾನಿಯಾದರೆ ಹರಿಹರ ಪಲ್ಲತಡ್ಕ ದ್ವಿತೀಯ ಸ್ಥಾನಿಯಾಯಿತು. ಉತ್ತಮ ಬ್ಯಾಟ್ಸ್ಮನ್ ಆಗಿ ಆಲೆಟ್ಟಿಯ ಕಿರಣ್, ಬೌಲರ್ ಆಗಿ ಆಲೆಟ್ಟಿಯ ಗಿರಿಪ್ರಕಾಶ್ ಸರ್ವಾಂಗೀಣ ಆಟಗಾರನಾಗಿ ಹರಿಹರದ ಮನೀಶ್ ಮೂಡಿಬಂದರು. ವಾಲಿಬಾಲ್ ಪಂದ್ಯದಲ್ಲಿ ಏನೆಕಲ್ಲು ಗ್ರಾಮ ಪ್ರಥಮ ಸ್ಥಾನಿಯಾದರೆ, ಬಾಳುಗೋಡು ದ್ವಿತೀಯ ಸ್ಥಾನ ಪಡೆಯಿತು, ಬೆಸ್ಟ್ ಸ್ಮ್ಯಾಷರ್ ಆಗಿ ಏನೆಕಲ್ಲಿನ ಮಹೇಶ್, ಲಿಫ್ಟರ್ ಆಗಿ ಏನೆಕಲ್ಲಿನ ರಾಧಾಕೃಷ್ಣ, ಸರ್ವಾಂಗೀಣ ಆಟಗಾರನಾಗಿ ಲೋಹಿತ್ ಬಾಳುಗೋಡು, ಪ್ರೇಕ್ಷಕರ ಮೆಚ್ಚುಗೆಯ ಆಟಗಾರನಾಗಿ ಬಾಳುಗೋಡಿನ ಗೌತಮ್ ಕಿರಿಭಾಗ ಬಹುಮಾನ ಪಡೆದರು.

ಫೋಟೊ: ಉಲ್ಲಾಸ್ ಮುಚ್ಚಾರ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.