ಸುಳ್ಯ: ಗೌಡ ಮಹಿಳಾ ಘಟಕ ಪುನರ್‌ರಚನೆ

Advt_Headding_Middle
Advt_Headding_Middle

 

ಗೌಡರ ಯುವ ಸೇವಾ ಸಂಘ (ರಿ.) ದಿಂದ ಪ್ರಾಯೋಜಿಸಲ್ಪಟ್ಟ ಗೌಡ ಮಹಿಳಾ ಘಟಕವನ್ನು ಪುನರ್‌ರಚಿಸಿದ್ದು, ನೂತನ ಅಧ್ಯಕ್ಷರಾಗಿ ಪುಷ್ಪಾವತಿ ಮಾಣಿಬೆಟ್ಟು, ಪ್ರಧಾನ ಕಾರ್ಯದರ್ಶಿ ಚಂಚಲಾಕ್ಷಿ ಕತ್ಲಡ್ಕ, ಕೋಶಾಧಿಕಾರಿ ಪಿ.ಜಿ. ಪುಷ್ಪಾ ಪೂಂಬಾಡಿರವರುಗಳನ್ನು ಸರ್ವಾನುಮತದಿಂದ ಆಯ್ಕೆ  ಮಾಡಿದೆ.


ಘಟಕದ ಉಪಾಧ್ಯಕ್ಷರುಗಳಾಗಿ ಹೇಮಲತಾ ದೇಂಗೋಡಿ-ಸುಳ್ಯ ವಲಯ, ವಾರಿಜ ಕುರುಂಜಿ-ಅರಂತೋಡು, ವಿನುತಾ ಪಾತಿಕಲ್ಲು- ಜಾಲ್ಸೂರು ವಲಯ, ಚಂದ್ರಾವತಿ ಚಿದ್ಗಲ್ಲು-ಬೆಳ್ಳಾರೆ ವಲಯ, ಉಷಾ ಕಿರಿಭಾಗ? ಗುತ್ತಿಗಾರು ವಲಯ, ಜತೆಕಾರ್ಯದರ್ಶಿಯಾಗಿ ರೇಷ್ಮಾ ಪ್ರಕಾಶ್ ಕಟ್ಟೆಮನೆ ನಿರ್ದೇಶಕರುಗಳಾಗಿ ಪುಷ್ಪಾ ಮೇದಪ್ಪ, ಜಯಲಕ್ಷ್ಮಿ ಜನಾರ್ಧನ, ಮಾಲತಿ ಭೋಜಪ್ಪ, ವೇದಾವತಿ ಮುಳುಬಾಗಿಲು, ಪ್ರವೀಣ ಯತೀಂದ್ರನಾಥ್, ರತಿದೇವಿ ಜಾಕೆ, ಹರ್ಷ ಕರುಣಾಕರ, ರಾಧಾ ಚಿನ್ನಪ್ಪ ಕುತ್ತಿಮುಂಡ, ಶೀಲಾ ಅರುಣ ಕುರುಂಜಿ, ಲತಾ ಕುದ್ಪಾಜೆ, ಮಧು ಯತೀಶ ಪಾಲೋಳಿ, ಗುಣವತಿ ಕೊಲ್ಲಂತ್ತಡ್ಕರವರುಗಳು ಆಯ್ಕೆಯಾದರು.
ಮಾತೃ ಸಂಘದ ಅಧ್ಯಕ್ಷರಾದ ಮೋಹನ್‌ರಾಂ ಸುಳ್ಳಿರವರ ಅಧ್ಯಕ್ಷತೆಯಲ್ಲಿ ಜನವರಿ ೨೮ ರಂದು ಶ್ರೀ ವೆಂಕಟರಮಣ ಸೊಸೈಟಿ ಸಭಾಂಗಣದಲ್ಲಿ ನಡೆದ ಮಹಿಳಾ ಘಟಕದ ಪುನರ್‌ರಚನೆ ಸಭೆ ನಡೆಯಿತು. ಗೌಡ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ದಿನೇಶ್ ಮಡಪ್ಪಾಡಿ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಸಂಘದ ಪ್ರಧಾನ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಮಹಿಳಾ ಘಟಕದ ಸ್ಥಾಪಕಾಧ್ಯಕ್ಷೆ ರೇಣುಕಾ ಸದಾನಂದ ಜಾಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.