ಸುಳ್ಯ ಲಯನ್ಸ್ ಕ್ಲಬ್‌ಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ  

Advt_Headding_Middle
Advt_Headding_Middle


ಸುಳ್ಯ ಲಯನ್ಸ್ ಕ್ಲಬ್‌ಗೆ ವಲಯಾಧ್ಯಕ್ಷರ ಅಧಿಕೃತ ಭೇಟಿ  ಜ.25 ರಂದು ಜರುಗಿತು. ಕಾರ್ಯಕ್ರಮವನ್ನು ಪ್ರಾಂತ್ಯ 7 ವಲಯ  1 ರ ವಲಯಾಧ್ಯಕ್ಷೆ ಲ.ರೇಣುಕಾ ಸದಾನಂದ ಜಾಕೆಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಹೋಂಗಾರ್ಡ್ ಹೂವಪ್ಪ ಗೌಡ ಕಣ್ಕಲ್ ಹಾಗೂ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಪುಷ್ಪಾವತಿಯವರನ್ನು ಸುಳ್ಯ ಲಯನ್ಸ್ ಕ್ಲಬ್ ಪರವಾಗಿ ವಲಯಾಧ್ಯಕ್ಷೆಯವರು ಸನ್ಮಾನಿಸಿದರು.  ಈ ಕಾರ್ಯಕ್ರಮದ ಅಂಗವಾಗಿ ಅರಂಬೂರು – ಇಡ್ಯಡ್ಕ ಸರಕಾರಿ ಪ್ರಾಥಮಿಕ ಶಾಲೆಗೆ 15೦೦ ಲೀಟರ್‌ನ ನೀರಿನ ಟ್ಯಾಂಕ್ ಕೊಡುಗೆಯಾಗಿ ನೀಡಿದರು.

ಹಾಗೂ ಇತ್ತೀಚೆಗೆ ಬೈಕ್ ಅಪಘಾತಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಿರುವ, ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಉಬರಡ್ಕ ಸಮೀಪದ ಸುಧಾಕರ ರೈ ಯವರಿಗೆ ೫೦೦೦ ರೂ. ನೀಡಲಾಯಿತು. ಪರಿವಾರಕಾನದ ಬಾಲ ಪ್ರತಿಭೆ ಕುಮಾರಿ ವೈಷ್ಣವಿ ಪ್ರಕಾಶ್ ಎಂಬವರಿಗೆ ಜೀ ಮಲಯಾಳಂನ ಸ್ಪರ್ಧೆಯಲ್ಲಿ ಭಾಗವಹಿಸಲು ರೂ.೧೦,೦೦೦ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ  ಲ| ಗಂಗಾಧರ ರೈಯವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಲ| ರಾಮಕೃಷ್ಣ ರೈ , ಖಜಾಂಜಿ ಲ| ಎಂ.ಎಂ. ತಮ್ಮಯ್ಯ, ಸಂಪಾಜೆ ಲಯನ್ಸ್ ಅಧ್ಯಕ್ಷ ಲ| ಕಿಶೋರ್ ಕುಮಾರ್, ಜಾಲ್ಸೂರು ಲಯನ್ಸ್ ಅಧ್ಯಕ್ಷ ಲ| ದಿನೇಶ್ ಮಾಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಲಯಾಧ್ಯಕ್ಷರ ಭೇಟಿ ಕಾರ್ಯಕ್ರಮದಲ್ಲಿ ವಿಟ್ಲ, ಪುತ್ತೂರು,  ಪುತ್ತೂರು ಕಾವು, ಜಾಲ್ಸೂರು, ಸಂಪಾಜೆ, ಪಂಜ, ಗುತ್ತಿಗಾರು, ಕಡಬ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.