ಕುಕ್ಕೆಶ್ರೀ ಸುಬ್ರಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಕಾಣಿಸಿಕೊಂಡ ಬೆಂಕಿ : ತಪ್ಪಿದ ಅನಾಹುತ

Advt_Headding_Middle
Advt_Headding_Middle
Advt_Headding_Middle

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಭೋಜನಶಾಲೆಯಲ್ಲಿ ಫೆ.೧೩ ರಂದು ತಡರಾತ್ರಿ ಹುರಿದಿಟ್ಟ ಮಸಾಲೆ ಕಟಾರಕ್ಕೆ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಸ್ಥಳೀಯ ನಾಗರಿಕರು ಬೆಂಕಿ ನಂದಿಸಿ ಸಂಭವಿಸಬಹುದಾದ ಭಾರಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.

ಬೆಂಕಿ ಅವಘಡ ಸಂಭವಿಸುವ ವೇಳೆ ಸ್ಥಳೀಯರು ಪಕ್ಕದ ನೂಚಿಲದಲ್ಲಿ ದೈವದ ನೇಮೋತ್ಸವದಲ್ಲಿ ಸೇರಿದ್ದರು. ವಿಷಯ ತಿಳಿದ ಕೂಡಲೇ ದೇವಸ್ಥಾನದ ಭೋಜನ ಶಾಲೆಗೆ ಬಂದು ಬೆಂಕಿ ನಂದಿಸಿದ್ದಾರೆ. ಕ್ಷೇತ್ರದ ಭೋಜನಶಾಲೆಯಲ್ಲಿ ಸುಮಾರು ೩೦ ಗ್ಯಾಸ್ ತುಂಬಿದ ಸಿಲಿಂಡರ್‌ಗಳಿದ್ದವು ಎಂದು ತಿಳಿದುಬಂದಿದೆ. ಬೆಂಕಿಯನ್ನು ನಂದಿಸಿ ಕಟಾರಗಳನ್ನು ಮಸಾಲೆ ಸಹಿತ ಭೋಜನಶಾಲೆಯಿಂದ ಹೊರಗೆ ತರಲಾಗಿದೆ. ಬೆಂಕಿ ಹಿಡಿದ ಕಠಾರವನ್ನು ನಂದಿಸಲು ಬಟ್ಟೆ ಸಿಗದೆ ಇದ್ದಾಗ ಗ್ರಾ.ಪಂ ಸದಸ್ಯ ಮಣಿಕಂಠ ಎಂಬವರು ಧರಿಸಿದ ಅಂಗಿ ಕಳಚಿ ಅದರ ಸಹಾಯದಿಂದ ಬೆಚ್ಚಗಿನ ಕಠಾರವನ್ನು ಹೊರಹಾಕಿದರು. ಅಂತೂ ಭಾರಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.