HomePage_Banner
HomePage_Banner
Breaking News

ರೋಟರಿ ಕ್ಲಬ್ ಸುಳ್ಯ : ಇಂಟರ್ ಕ್ಲಬ್ ಫೆಲೋಶಿಪ್ ಕಾರ್ಯಕ್ರಮ

ಸ್ನೇಹ ರಶ್ಮಿ 2019-20  ಇಂಟರ್ ಕ್ಲಬ್ ಫೆಲೋಶಿಪ್ ಕಾರ್ಯಕ್ರಮವು ರೊ| ಸವಣೂರು ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ನಡೆಯಿತು.


ಸುಳ್ಯ ರೋಟರಿಯ ಅಧ್ಯಕ್ಷರಾದ ಡಾ. ಪುರುಷೋತ್ತಮ ಇವರು ಅಧ್ಯಕ್ಷತೆಯನ್ನು ವಹಿಸಿ ರೋಟರಿಯ ಧ್ಯೇಯವು ಮನುಕುಲದ ಸೇವೆ, ಗಾಂಧೀಜಿಯವರು ಹಾಗೂ ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸುತ್ತಾ ಜನರ ಸೇವೆಯೇ ದೇವರ ಸೇವೆ, ಇದನ್ನು ಸವಣೂರು ಸೀತಾರಾಮ ರೈಯವರು ಮಾಡುತ್ತಿದ್ದಾರೆ ಎಂದರು.

ಮುಖ್ಯ ಅತಿಥಿಗಳಾದ ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ಜೋಸೆಫ್ ಮ್ಯಾಥ್ಯೂರವರು ಹಾಗೂ ಲಯನ್ಸ್ ಗವರ್ನರ್ ರೋನಾಲ್ಡ್ ಗೇಮ್ಸ್‌ರವರು ಸಹ ಇಂಥಹ ಕುಟುಂಬ ಸಮ್ಮಿಲನವನ್ನು ಆಚರಿಸುವುದರಿಂದ ನಮ್ಮಲ್ಲಿ ಪರಸ್ಪರ ಬಾಂಧವ್ಯವು ವೃದ್ಧಿಸುತ್ತದೆ ಹಾಗೂ ಇನ್ನು ಹೆಚ್ಚು ಸೇವೆ ಮಾಡಲು ಸ್ಫೂರ್ತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ಗವರ್ನರ್ ನೋಮಿನಿ ರವೀಂದ್ರ ಭಟ್, ಅಸಿಸ್ಟೆಂಟ್ ಗವರ್ನರ್ ವಲಯ ೫ರ ಡಾ. ಕೇಶವ ಪಿ.ಕೆ., ರೋಟರಿ ಸುಳ್ಯ ಸಿಟಿಯ ಅಧ್ಯಕ್ಷ ಭಾನುಪ್ರಕಾಶ್, ಲಯನ್ಸ್ ಸುಳ್ಯದ ಅಧ್ಯಕ್ಷ ಗಂಗಾಧರ ರೈ, ಇನ್ನರ್‌ವ್ಹೀಲ್ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ, ರೋಟರಿ ಕ್ಲಬ್ ಸುಬ್ರಹ್ಮಣ್ಯದ ಅಧ್ಯಕ್ಷ ಭರತ್ ನೆಕ್ರಾಜೆ, ಬೆಳ್ಳಾರೆ ರೋಟರಿ ಅಧ್ಯಕ್ಷ ನರಸಿಂಹ ಜೋಶಿ, ಲಯನ್ಸ್ ಕ್ಲಬ್ ಪುತ್ತೂರು ಅಧ್ಯಕ್ಷ ಶಿವಪ್ರಕಾಶ್ ಹಾಗೂ ಎಲ್ಲಾ ಸಂಸ್ಥೆಗಳ ಕಾರ್‍ಯದರ್ಶಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಸೀತಾರಾಮ ರೈಯವರನ್ನು ರೋಟರಿ, ಇನ್ನರ್‌ವ್ಹೀಲ್ ಹಾಗೂ ಲಯನ್ಸ್ ಕ್ಲಬ್‌ನ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ವಸಂತಿ ಶಿವರಾಮ ಗೌಡ ಹಿರಿಯ ರಾಷ್ಟ್ರೀಯ ಕ್ರೀಡಾಪಟು ಹಾಗೂ ಸಂಧ್ಯಾಕುಮಾರಿ ಭೂ ವಿಜ್ಞಾನಿ ಇವರನ್ನು ಸಹ ಸನ್ಮಾನಿಸಲಾಯಿತು. ಸಭಾ ಕಾರ್‍ಯಕ್ರಮದ ಮೊದಲು ಸತೀಶ ಪಟ್ಲ ನೇತೃತ್ವದಲ್ಲಿ ಯಕ್ಷಗಾನ-ವೈಭವ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.