ಕಳಂಜದ ಕಿಲಂಗೋಡಿ ಎಂಬಲ್ಲಿ ಮಹಿಳೆಯೋರ್ವರು ತನಗೆ ಮತ್ತು ಮಗಳಿಗೆ ಬೆದರಿಕೆಯೊಡ್ಡಿರುವುದಾಗಿ ಪೊಲೀಸು ದೂರು ನೀಡಿದ ಘಟನೆ ಫೆ.13 ರಂದು ನಡೆದಿದೆ.
ಕಿಲಂಗೋಡಿಯ ಅಪ್ಪಿ ಎಂಬವರು ತನ್ನ ಮಗಳು ಜ್ಯೋತಿ ಎಂಬವರನ್ನು ದೇಲಂಪಾಡಿಯ ಪ್ರಶಾಂತ್ ಎಂಬವರಿಗೆ ಮದುವೆ ಮಾಡಿಕೊಟ್ಟಿದ್ದು ಮಗಳಿಗೆ 9 ತಿಂಗಳ ಮಗುವಿದ್ದು ತಾಯಿ ಮಗು ದೇಲಂಪಾಡಿ ಗಂಡನ ಮನೆಯಲ್ಲಿ ವಾಸವಾಗಿದ್ದರು.
ಫೆ.13 ರಂದು ಮಗಳು ಮತ್ತು ಮಗು ಗಂಡನ ಮನೆಯಲ್ಲಿ ಮಗುವಿನ ಆರೈಕೆ ಮಾಡಲು ಸರಿಯಾದ ವ್ಯವಸ್ಥೆ ಇಲ್ಲವೆಂದು ತಾಯಿ ಮನೆಗೆ ಬಂದಿದ್ದರೆನ್ನಲಾಗಿದೆ.
ಇದರಿಂದ ಕೋಪಗೊಂಡ ಗಂಡ ಪ್ರಶಾಂತನು ಕಳಂಜದ ಕಿಲಂಗೋಡಿ ಪತ್ನಿ ಮನೆಗೆ ಬಂದು ತನಗೆ ಮತ್ತು ಮಗಳಿಗೆ ಬೆದರಿಕೆಯೊಡ್ಡಿರುವುದಾಗಿ ಅಪ್ಪಿ ಎಂಬವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ.