HomePage_Banner
HomePage_Banner
Breaking News

ಫೆ. 20-22 : ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ

 

ಹರಿಹರ ಪಲ್ಲತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು ಫೆ. ೨೦ರಿಂದ ೨೨ರವರೆಗೆ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ ಉಚ್ಚಿಲ ಇವರ ನೇತೃತ್ವದಲ್ಲಿ ನಡೆಯಲಿರುವುದು.
 ಫೆ. ೨೦ರಂದು ಬೆಳಿಗ್ಗೆ ಗಂಟೆ ೮.೦೦ರಿಂದ ಹಸಿರು ಕಾಣಿಕೆ ಪ್ರಾರಂಭ
ಮಧ್ಯಾಹ್ನ ಗಂಟೆ ೧೨.೦೦ಕ್ಕೆ ಮಹಾಪೂಜೆ, ಮಧ್ಯಾಹ್ನ ಗಂಟೆ ೧೨.೩೦ರಿಂದ ಅನ್ನಸಂತರ್ಪಣೆ, ಸಾಯಂಕಾಲ ತಂತ್ರಿಗಳ ಆಗಮನ, ರಾತ್ರಿ ಗಂಟೆ ೮.೦೦ಕ್ಕೆ ಮಹಾಪೂಜೆ, ರಾತ್ರಿ ಗಂಟೆ ೮.೧೫ರಿಂದ ಅನ್ನಸಂತರ್ಪಣೆ, ಫೆ. ೨೧ರಂದು ಬೆಳಿಗ್ಗೆ ಗಂಟೆ ೬.೩೦ರಿಂದ ಗಣಪತಿ ಹವನ, ಮಧ್ಯಾಹ್ನ ಗಂಟೆ ೧೨.೦೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಸಾಯಂಕಾಲ ೬.೩೦ಕ್ಕೆ ದೀಪಾರಾಧನೆ, ಚೆಂಡೆವಾದನ, ರಾತ್ರಿ ಗಂಟೆ ೭.೩೦ಕ್ಕೆ ಮಹಾಪೂಜೆ, ರಾತ್ರಿ ಗಂಟೆ ೮.೦೦ರಿಂದ ದೇವರಬಲಿ ಉತ್ಸವ ಹೊರಡುವುದು, ವಸಂತಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ನಂತರ ಯಕ್ಷಗಾನ ಬಯಲಾಟ, ಫೆ. ೨೨ರಂದು ಸಾಯಂಕಾಲ ತನಕ ಉಳ್ಳಾಗುಳು ಮತ್ತು ಪರಿವಾರ ದೈವಗಳ ನೇಮೋತ್ಸವ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮ
ಫೆ. ೨೦ರಂದು ಸಂಜೆ ಗಂಟೆ ೪.೩೦ರಿಂದ ಸ್ಥಳೀಯ ಭಜನಾ ತಂಡಗಳಿಂದ ಭಜನೆ, ಅಂಗನವಾಡಿ, ಎಲ್.ಕೆ.ಜಿ., ಸ.ಹಿ.ಪ್ರಾ.ಶಾಲೆ ಹರಿಹರಪಲ್ಲತಡ್ಕ, ಐನೆಕಿದು, ಬಾಳುಗೋಡು ಮತ್ತು ಕರಂಗಲ್ಲು ಇಲ್ಲಿಯ ಶಾಲಾ ಮಕ್ಕಳಿಂದ ಮತ್ತು ಆರ್ಟ್ ಇನ್ ಮೋಶನ್ ಡ್ಯಾನ್ಸ್ ಸ್ಟುಡಿಯೋ ಹರಿಹರಪಲ್ಲತಡ್ಕ ಮತ್ತು ಫ್ಯೂಶನ್ ಕಲಾ ತಂಡ ಕರಂಗಲ್ಲು ಮಕ್ಕಳಿಂದ ವಿವಿಧ ವಿನೋದಾವಳಿಗಳು,
ಕೆ.ಎಸ್.ಎಸ್. ಕಾಲೇಜು ಸುಬ್ರಹ್ಮಣ್ಯ ಇದರ ರಂಗ ಘಟಕ ಕುಸುಮ ಸಾರಂಗ ಅಭಿನಯಿಸುವ ನಾಟಕ ‘ಅಭಿಯಾನ’ ನಡೆಯಲಿರುವುದು.
ಫೆ. ೨೧ರಾತ್ರಿ ಗಂಟೆ ೧೨.೦೦ರಿಂದ ಯಕ್ಷಗಾನ ಬಯಲಾಟ ನಡೆಯಲಿರುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.