HomePage_Banner
HomePage_Banner
HomePage_Banner
HomePage_Banner

ಕಾಂಚೋಡು ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರಿಂದ ಗುದ್ದಲಿಪೂಜೆ


ಕರ್ನಾಟಕ ಸರಕಾರದ 2019-20ನೇ ಸಾಲಿನ 5054 ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾದ ರೂ. 50 ಲಕ್ಷ ಅನುದಾನದಲ್ಲಿ ಬಾಳಿಲ ಕಾಂಚೋಡು ರಸ್ತೆ ಕಾಂಕ್ರಟೀಕರಣಕ್ಕಾಗಿ ಶಾಸಕ ಎಸ್. ಅಂಗಾರರಿಂದ ಫೆ. 14 ರಂದು ಗುದ್ದಲಿ ಪೂಜೆ ನೆರವೇರಿತು. ಗುದ್ದಲಿ ಪೂಜೆ ನೆರವೇರಿಸಿದ ಶಾಸಕರು ಸರಕಾರದ ಗ್ರಾಮಾಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದರು. ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಬಾಳಿಲ ಗ್ರಾ.ಪಂ. ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ಮೂಲೆಮಜಲು, ಮಾಜಿ ಅಧ್ಯಕ್ಷೆ ಶ್ರೀಮತಿ ಮಾಲಿನಿ ಪ್ರಸಾದ್, ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎ.ಎಂ. ಸುಧಾಕರ ರೈ ಬಾಳಿಲ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ್ದ ಪಿ.ಜಿ.ಎಸ್.ಎನ್. ಪ್ರಸಾದ್, ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಪರಮೇಶ್ವರಯ್ಯ ಕಾಂಚೋಡು ಶುಭ ಹಾರೈಸಿದರು. ಉಪನ್ಯಾಸಕರಾದ ರಾಮ್ ಪ್ರಸಾದ್ ಕಾಂಚೋಡು ಸ್ವಾಗತಿಸಿ, ಬಾಳಿಲ ಗ್ರಾ.ಪಂ. ಸದಸ್ಯ ರಾಧಾಕೃಷ್ಣ ರಾವ್ ಯು. ವಂದಿಸಿದರು. ಶ್ರೀನಾಥ್ ರೈ ದೋಳ್ತೋಡಿ, ಕಿರಣ್ ರೈ ಅಗಲ್ಪಾಡಿ, ಸತ್ಯಮೂರ್ತಿ ಬಾಳಿಲ, ಗಂಗಾಧರ ಕಾಯಾರ, ಮಾಧವ ಗೌಡ ಕುಯಿಂತೋಡು, ಅಯ್ಯನಕಟ್ಟೆ, ರಾಮಚಂದ್ರ ಕಾಯಾರ, ಶೇಷಪ್ಪ ಪರವ, ವಿಘ್ನೇಶ್ವರ ಭಟ್ ವಡ್ಯ, ಈಶ್ವರಚಂದ್ರ ಮುಂಡುಗಾರು, ರವಿಶಂಕರ್ ಕಾಂಚೋಡು, ಈಶ್ವರ ಗೌಡ, ಜಿ.ಪಂ. ಇಂಜಿನಿಯರ್ ಮಣಿಕಂಠ ಸೇರಿದಂತೆ ರಸ್ತೆಯ ಫಲಾನುಭವಿಗಳು ಈ ಸಂದರ್ಭದಲ್ಲಿ ಭಾಗಿಗಳಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.