HomePage_Banner
HomePage_Banner
HomePage_Banner
HomePage_Banner

ಪ್ರಾಚೀನ ಆದರ್ಶಗಳನ್ನು ಯುವ ಜನತೆಗೆ ತಿಳಿಸುವ ಜೀವಂತ ಕಲೆ ಯಕ್ಷಗಾನ: ಚಂದ್ರಶೇಖರ ಪೇರಾಲ್

ಪ್ರಾಚೀನ ಆದರ್ಶಗಳನ್ನು ಆಧುನಿಕ ಯುಗದ ಜನತೆಗೆ ಪ್ರಚುರಪಡಿಸುವ ಜೀವಂತ ಕಲೆ ಯಕ್ಷಗಾನ. ಇದು ದೃಶ್ಯ ಕಾವ್ಯ ಹಾಗೂ ಭಾರತೀಯ ಸಂಸ್ಕೃತಿಯನ್ನು ಉಚ್ಚ್ರಾಯ ಸ್ಥಿತಿಗೆ ಕೊಂಡೊಯ್ದ ಜೀವಂತ ಕಲೆ.ಭಾರತೀಯ ಸಂಸ್ಕಾರಗಳನ್ನು ಯುವ ಜನತೆಗೆ ಅಭಿವ್ಯಕ್ತಿ ಮೂಲಕ ತಿಳಿಸುವ ಶ್ರೇಷ್ಠವಾದ ಮಾದ್ಯಮ ಯಕ್ಷಗಾನವಾಗಿದೆ ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್ ಹೇಳಿದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದ ಶ್ರೀ ವಿದ್ಯಾಸಾಗರ ಭಜನಾ ಸಂಗಮ ಮತ್ತು ಶ್ರೀ ವಿದ್ಯಾಸಾಗರ ಸಂಗೀತ ಶಾಲೆಯ ಆಶ್ರಯದ ಶ್ರೀ ವಿದ್ಯಾಸಾಗರ ಯಕ್ಷಗಾನ ಕಲಾಶಾಲೆಯ ಎಂಟನೇ ವರ್ಷದ ವಾರ್ಷಿಕೋತ್ಸವದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು. ಕಲೆಗೆ ಪ್ರೋತ್ಸಾಹ ನೀಡುವುದರಿಂದ ಮಾನಸಿಕ ನೆಮ್ಮದಿ ಪ್ರಾಪ್ತವಾಗುತ್ತದೆ. ಕಲಾಪೋಷಕರು ಮತ್ತು ಕಲಾವಿದರ ಸಮ್ಮಿಲನದಿಂದ ಕಲೆಯು ತನ್ನ ಜೀವಂತಿಕೆಯನ್ನು ಉಳಿಸಿಕೊಳ್ಳುತ್ತಿದೆ.ವಿದ್ಯಾರ್ಥಿಗಳಿಗೆ ಎಳವೆಯಲ್ಲಿಯೇ ಕಲೆಗಳ ಅಭಿರುಚಿಯನ್ನು ಮೈಗೂಡಿಸಿಕೊಳ್ಳುವ ಶಿಕ್ಷಣ ಅಗತ್ಯವಿದೆ. ಇದರಿಂದ ಅವರ ಸರ್ವತೋಮುಖ ಪ್ರಗತಿ ಸಾಧ್ಯ ಎಂದರು.


ಕಲೆಯಿಂದ ಮನಸಂತೃಪ್ತಿ: ಸುದರ್ಶನ ಜೋಯೀಸ
ಕಲೆಯು ಮನಸನ್ನು ಸಂತಸಗೊಳಿಸುವ ಮಹೋನ್ನತ ಕಾರ್ಯವನ್ನು ಮಾಡುತ್ತದೆ.ಯಕ್ಷಗಾನವು ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ತನ್ನದೆ ಆದ ಪಾತ್ರವನ್ನು ನೀಡಿದೆ. ಆದುದರಿಂದ ಯಕ್ಷಗಾನ ಅಜರಾಮರವಾಗಿ ಉಳಿಯಬೇಕು.ಪೋಷಕರು ತಮ್ಮ ಮಕ್ಕಳಿಗೆ ಯಕ್ಷಗಾನದ ಬಗ್ಗೆ ಹೆಚ್ಚಿನ ಆಸಕ್ತಿ ಬರುವಂತೆ ಮಾಡಬೇಕು ಎಂದು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ ಹೇಳಿದರು.
ಕನ್ನಡದ ಶ್ರೇಷ್ಠತೆಗೆ ಯಕ್ಷಗಾನದ ಪಾತ್ರ ಅನನ್ಯ: ನಿತ್ಯಾನಂದ ಮುಂಡೋಡಿ
ಕನ್ನಡ ಭಾಷೆಯನ್ನು ಶ್ರೇಷ್ಠವಾಗಿಸುವಲ್ಲಿ ಯಕ್ಷಗಾನದ ಪಾತ್ರ ಅನನ್ಯ. ನಮ್ಮ ಮಾತೃಭಾಷೆಯನ್ನು ಬಿಟ್ಟು ಒಂದೇ ಒಂದು ಇತರ ಭಾಷೆಯ ಪದವನ್ನು ಯಕ್ಷಗಾನದಲ್ಲಿ ಬಳಸಲಾಗುವುದಿಲ್ಲ. ಮಾತೃಬಾಷೆಯ ಅಭ್ಯುದಯಕ್ಕೆ ಯಕ್ಷಗಾನವು ತನ್ನದೇ ಆದ ಪಾತ್ರ ವಹಿಸಿದೆ.ಇಂತಹ ಕಲೆಯನ್ನು ಎಳವೆಯಲ್ಲಿ ಅಭ್ಯಸಿಸಲು ನೀಡುವ ನೀಡುವ ಪ್ರೋತ್ಸಾಹ ಅಧಮ್ಯವಾದುದು ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.
ಕಲಾಶಾಲೆಯ ಅಧ್ಯಕ್ಷ ಹಾಗೂ ಕಲಾವಿದ ಎಂ.ಹರೀಶ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ದಿವಾನ ಸುದರ್ಶನ ಜೋಯೀಸ, ವೈದ್ಯೆ ಡಾ.ವೀಣಾ ಫಾಲಚಂದ್ರ, ಸುಬ್ರಹ್ಮಣ್ಯ ಗ್ರಾ.ಪಂ. ಪಿಡಿಓ ಮುತ್ತಪ್ಪ ಮುಖ್ಯಅತಿಥಿಗಳಾಗಿದ್ದರು. ಯಕ್ಷ ಗುರು ದಯಾನಂದ ಪಿಲಿಕೂರು, ಸಂಘದ ಉಪಾಧ್ಯಕ್ಷ ಎಂ.ಕೃಷ್ಣ ಭಟ್, ಸಂಚಾಲಕ ಗಣೇಶ್ ಪರ್ವತಮುಖಿ ವೇದಿಕೆಯಲ್ಲಿದ್ದರು.
ಸನ್ಮಾನ:
ಸಮಾರಂಭದಲ್ಲಿ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರಿಗೆ ಗೌರವಾರ್ಪಣೆ ಸಮರ್ಪಿಸಲಾಯಿತು. ಕಲಾ ಶಾಲೆಯ ಪ್ರತಿಭಾವಂತ ಹಿರಿಯ ವಿದ್ಯಾರ್ಥಿನಿ ಛಾಯಾ ಪಡ್ರೆ ಅವರಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಯಿತು.
ಯಕ್ಷ ಭಾಗವತ ಹಾಗೂ ಬಿಳಿನೆಲೆ ಗ್ರಾ.ಪಂ.ಪಿಡಿಓ ಪದ್ಮನಾಭ ಪಳ್ಳಿಗದ್ದೆ ಸ್ವಾಗತಿಸಿದರು. ಜೇಸಿಸ್‌ನ ಪೂರ್ವ ವಲಯಾಧಿಕಾರಿ ಪ್ರಭಾಕರ ಪಡ್ರೆ ವಂದಿಸಿದರು. ಅಧ್ಯಾಪಕ ಸತ್ಯಶಂಕರ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ಕಾರ್ತಿಕೇಯ ಕಲ್ಯಾಣ ಪ್ರದರ್ಶಿತವಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.