HomePage_Banner
HomePage_Banner
HomePage_Banner
HomePage_Banner

ಇಂದು ಕೊಡಿಯಾಲಬೈಲ್ ಸ್ಮಶಾನದಲ್ಲಿ ಶಿವರಾತ್ರಿ ಪ್ರಯುಕ್ತ ಭಜನೆ, ತಾಳಮದ್ದಳೆ

ಸುಳ್ಯದ ಕೊಡಿಯಾಲಬೈಲಿನಲ್ಲಿರುವ ಹಿಂದೂ ರುದ್ರಭೂಮಿ ‘ವಿಮುಕ್ತಿಧಾಮ’ ದಲ್ಲಿ  ಇಂದು ರಾತ್ರಿ ಶಿವರಾತ್ರಿ ಪ್ರಯುಕ್ತ ಭಜನಾ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ತಾಳಮದ್ದಳೆ ಜರಗಲಿದೆ.

ಉಬರಡ್ಕ ಗ್ರಾಮ ಪಂಚಾಯತ್ , ಸುಳ್ಯ ಲಯನ್ಸ್ ಕ್ಲಬ್ ಹಾಗೂ ಸ್ಥಳೀಯ ಸಂಘಸಂಸ್ಥೆಗಳ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಜೆ 4.45 ರಂದ ಕೊಡಿಯಾಲಬೈಲಿನ ಶ್ರೀ ವಿಷ್ಣು ಯುವಕ ಮಂಡಲ, ವರಲಕ್ಷ್ಮಿ ಯುವತಿ ಮಂಡಲ, ಅಮೈಮಡಿಯಾರು ಶ್ರೀ ಮಿತ್ತೂರು ಉಳ್ಳಾಕುಲು ಮಹಿಳಾ ಭಜನಾ ಮಂಡಳಿ, ಶ್ರೀರಾಮ ಭಜನಾ ಮಂದಿರ ಸುಳ್ಯ, ಶ್ರೀ ಗುರು ರಾಘವೇಂದ್ರ ಮಠ ಸುಳ್ಯ ಇದರ ಸದಸ್ಯರುಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಬಳಿಕ ನಡೆಯುವ ಧಾರ್ಮಿಕ ಸಭೆಯಲ್ಲಿ ಡಾ.ಪ್ರಭಾಕರ ಶಿಶಿಲರು ಧಾರ್ಮಿಕ ಉಪನ್ಯಾಸ ನಡೆಯಲಿದೆ. ಗ್ರಾ.ಪಂ.ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ ಅಧ್ಯಕ್ಷತೆ ವಹಿಸಲಿದ್ದಾರೆ.

ಆ ಬಳಿಕ ಶಿಕ್ಷಕರ ಯಕ್ಷಗಾನ ಒಕ್ಕೂಟ ಸುಳ್ಯ ಇದರ ವತಿಯಿಂದ ನಚಿಕೇತ ಎಂಬ ಯಕ್ಷಗಾನ ತಾಳಮದ್ದಳೆ ನಡೆಯುವುದು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.