HomePage_Banner
HomePage_Banner

ಮಾ.1; ದುಗಲಡ್ಕದಲ್ಲಿ ಮಿತ್ರ -ಕುರಲ್ ಸಾಂಸ್ಕೃತಿಕ ಸಂಭ್ರಮ, ರಾಷ್ಟ್ರೀಯ ಗೌರವ ಅವಾರ್ಡ್ ಗೆ ಭಾಜನರಾದ ಕೆ.ಟಿ.ವಿಶ್ವನಾಥರಿಗೆ ಸನ್ಮಾನ

ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳು ಕೂಟ ದುಗಲಡ್ಕ ಇದರ ಆಶ್ರಯದಲ್ಲಿ ಮಿತ್ರ – ಕುರಲ್ ಸಾಂಸ್ಕೃತಿಕ ಸಂಭ್ರಮ ಹಾಗೂ ಇಂಡಿಯಾ ಇಂಟರ್ನ್ಯಾಷನಲ್ ಫ್ರೆಂಡ್ ಶಿಪ್ ಸೊಸೈಟಿ ನವದೆಹಲಿ ಇವರಿಂದ ರಾಷ್ಟ್ರೀಯ ಗೌರವ ಅವಾರ್ಡ್ ಗೆ ಭಾಜನರಾದ ಕೆ.ಟಿ.ವಿಶ್ವನಾಥ ರಿಗೆ ಸನ್ಮಾನ ಕಾರ್ಯಕ್ರಮ ಮಾ.1ರಂದು ದುಗಲಡ್ಕ ಪ್ರೌಢಶಾಲಾ ವಠಾರದಲ್ಲಿ ನಡೆಯುಲಿದೆ ಎಂದು ಸಂಘಟನಾ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಕೆ.ಎನ್.ತಿಳಿಸಿದರು.


ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.ಸವಣೂರು ವಿದ್ಯಾರಶ್ಮಿ ವಿದ್ಯಾಲಯಗಳ ಸಂಚಾಲಕ ಸೀತಾರಾಮ ರೈ ಸವಣೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ರಾಷ್ಟ್ರೀಯ ಗೌರವ ಅವಾರ್ಡ್ ಪುರಸ್ಕೃತರಾದ ಕೆ.ಟಿ‌.ವಿಶ್ವನಾಥರನ್ನು ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ನ ಅಧ್ಯಕ್ಷ ರಾದ ಡಾ.ಕೆ.ವಿ.ಚಿದಾನಂದರು ಸನ್ಮಾನಿಸಲಿದ್ದಾರೆ.ವಿಶ್ರಾಂತ ಪ್ರಾಂಶುಪಾಲರಾದ ಡಾ‌.ಪ್ರಭಾಕರ ಶಿಶಿಲ ಅಭಿನಂದನಾ ಭಾಷಣ ಮಾಡಲಿದ್ದಾರೆ. ಮಿತ್ರ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಪುರುಷೋತ್ತಮ ಗೌಡ ಮಾಣಿಬೆಟ್ಟು ಅಧ್ಯಕ್ಷ ತೆ
ವಹಿಸಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಜಿ.ಪಂ.ಸದಸ್ಯ ರಾದ ಎಸ್.ಎನ್.ಮನ್ಮಥ,ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ನಿತ್ಯಾನಂದ ಮುಡೋಡಿ,ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ.ಜಯರಾಮ್,ದೆಹಲಿ ಕನ್ನಡ ಎಜುಕೇಶನ್ ಸೊಸೈಟಿ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ,ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನ.ಪಂ.ಸದಸ್ಯರುಗಳಾದ ಶಶಿಕಲಾ ನೀರಬಿದಿರೆ, ಬಾಲಕೃಷ್ಣ ರೈ ದುಗಲಡ್ಕ, ದುಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಎ.ಯು. ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.ಸಾಂಸ್ಕತಿಕ ಕಾರ್ಯಕ್ರಮವನ್ನು ಸಾಹಿತಿ ಭೀಮರಾವ್ ವಾಷ್ಠರ್ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ಸಂಜೆ 5 ರಿಂದ ದುಗಲಡ್ಕ ಅಂಗನವಾಡಿ ಕೇಂದ್ರದ ಮಕ್ಕಳಿಂದ ನೃತ್ಯ ವೈಭವ,ದುಗಲಡ್ಕ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿದ್ಯ, ಖ್ಯಾತ ಗಾಯಕರಾದ ಶಶಿಧರ ಮಾವಿನಕಟ್ಟೆ ಮತ್ತು ಬಾಲಕೃಷ್ಣ ನೆಟ್ಟಾರು ಇವರಿಂದ ಸಂಗೀತ ರಸಮಂಜರಿ ನಡೆಯಲಿದೆ.ರಾತ್ರಿ 8 ರಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಲ.ದೇವದಾಸ್ ಕಾಪಿಕಾಡ್ ರವರ ಚಾಪರ್ಕ ಕಲಾವಿದರಿಂದ ನಮಸ್ಕಾರ ಮಾಸ್ಟ್ರೆ ವಿಭಿನ್ನ ಶೈಲಿಯ ಹಾಸ್ಯ ನಾಟಕ ನಡೆಯಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನಾ ಸಮಿತಿಯ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ,ಕೋಶಾಧಿಕಾರಿ ಮನೋಜ್ ಪಾನತ್ತಿಲ,ಕುರಲ್ ತುಳು ಕೂಟದ ಅಧ್ಯಕ್ಷ ನಾರಾಯಣ ಟೈಲರ್, ಪದಾಧಿಕಾರಿಗಳಾದ ರಮೇಶ್‌ ನೀರಬಿದಿರೆ, ಭಾಗೀಶ್ ಕೆ.ಟಿ.,ಕೃಷ್ಣ ಸ್ವಾಮಿ,ಸುರೇಶ್ ನಾಯಕ್ ಉಪಸ್ಥಿತರಿದ್ದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.