HomePage_Banner
HomePage_Banner

ಗುತ್ತಿಗಾರು ಸಹಕಾರಿ ಸಂಘ ಚುನಾವಣೆ ಎಲ್ಲ 13 ಸ್ಥಾನಗಳಲ್ಲಿ ಬಿಜೆಪಿ ಜಯ

 

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಫೆ.23 ರಂದು ನಡೆದ ಚುನಾವಣೆಯಲ್ಲಿ ಎಲ್ಲ 13 ಗಳನ್ನು ಬಿಜೆಪಿ ಗೆದ್ದುಕೊಂಡಿದೆ.


ಕಳೆದ ಸಾಲಿನಲ್ಲಿ ಮುಳಿಯ ಕೇಶವ ಭಟ್ ಅವರ ನೇತೃತ್ವದ ಬಿಜೆಪಿ ಆಡಳಿತವಿದ್ದಿದ್ದು ೬ ಬಿಜೆಪಿ ೩ ಕಾಂಗ್ರೆಸ್ ನಿರ್ದೇಶಕರುಗಳಿದ್ದರು ಈ ಬಾರಿ ೪ ನಿರ್ದೇಶಕರ ಸಮಕ್ಯೆ ಹೆಚ್ಚಾಗಿ ೧೩ ಸ್ಥಾನವಾಗಿತ್ತು.
ಈ ೧೩ ಸ್ಥಾನಗಳಲ್ಲಿ ಸಾಲಗಾರರಲ್ಲದ ಕ್ಷೇತ್ರಕ್ಕೆ ಹಾಲಿ ಅಧ್ಯಕ್ಷ ಮುಳಿಯ ಕೇಶವ ಭಟ್, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಕುಂಞ ಬಳ್ಳಕ್ಕ , ಪರಿಶಿಷ್ಟ ಪಂಗಡದಿಂದ ಆನಂದ ಹಲಸಿಡ್ಕ ಅವಿರೋಧವಾಗಿ ಆಯ್ಕೆಯಾಗಿದ್ದರು.
ಉಳಿದ ೧೦ ಸ್ಥಾನಕ್ಕೆ ೧೯ ಮಂದಿ ಕಣದಲ್ಲಿದ್ದರು. ಫೆ.೨೩ರಂದು ಚುನಾವಣೆ ನಡೆದು ಸಂಜೆ ಫಲಿತಾಂಶ ಪ್ರಕಟಗೊಂಡಿತು. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿಯ ಬೆಳ್ಯಪ್ಪ ಗೌಡ ಕಡ್ತಲ್ ಕಜೆ(೬೩೭), ವೆಂಕಟ್ ದಂಬೆಕೋಡಿ (೫೯೬), ರವಿಪ್ರಕಾಶ್ ಬಳ್ಳಡ್ಕ, (೫೪೦), ಕಿಶೋರ್ ಕುಮಾರ್ ಅಂಬೆಕಲ್ಲು (೫೩೨), ನವೀನ್ ಬಾಳುಗೋಡು (೫೩೧), ತೀರ್ಥರಾಮ ಎ. ವಿ (೪೪೫), ಇವರುಗಳು ಆಯ್ಕೆಯಾದರೆ. ಸಾಲಗಾರರ ಮಹಿಳಾ ಕ್ಷೇತ್ರದಿಂದ ಮಂಜುಳಾ ಮುತ್ಲಾಜೆ (೫೮೫) ಮತ್ತು ಚಂದ್ರಾವತಿ ಮುಂಡೋಡಿ (೫೩೧) ಆಯ್ಕೆಯಾದರು. ಹಿಂದುಳಿದ ಪ್ರವರ್ಗ ಎ ಯಿಂದ ಕೃಷ್ಣಯ್ಯ ಮೂಲೆ ತೋಟ (೫೭೫) ಹಿಂದುಳಿದ ಪ್ರವರ್ಗ ಬಿ ಯಿಂದ ಜಯಪ್ರಕಾಶ್ ಮೊಗ್ರ (೪೧೩) ಮತ ಪಡೆದು ವಿಜಯಿಯಾದರು.
ಸಾಲಗಾರರ ಸಾಮಾನ್ಯ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ನಾಯಕ ಭರತ್ ಮುಂಡೋಡಿ ಯವರು ೪೦೮ ಮತ ಪಡೆದು ಪರಾಭವಗೊಂಡಿದ್ದರೆ, ಕಾಂಗ್ರೆಸ್ ಬೆಂಬಲಿರಾಗಿ ಸ್ಪರ್ಧಿಸಿದ್ದ ಇತರರಾದ ಕೇಶವ ಗೌಡ ಹೊಸೊಳಿಕೆ (೩೦೨), ಜನಾರ್ದನ ಡಿ.ಜೆ (೧೩೧), ಭುವನೇಶ್ವರ ಹುಲ್ಲುಕುಮೇರಿ (೧೪೦), ಸಾಲಗಾರರ ಮಹಿಳಾ ಕ್ಷೇತ್ರದಿಂದ ಶಶಿಕಲಾ ದೇರಪಜ್ಜನಮನೆ (೨೮೬), ಪ್ರೇಮಲತಾ ಮುಂಡೋಡಿ (೧೯೦), ಹಿಂದುಳಿದ ಪ್ರವರ್ಗ ಎ ಯಿಂದ ದಿನೇಶ್ ಸಾಲ್ತಾಡಿ (೨೨೦) ಮತಗಳನ್ನು ಪಡೆದು ಪರಾಭವಗೊಂಡರು. ಪಕ್ಷೇತರರಾಗಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಉದಯಕುಮಾರ್ ಡಿ ಆರ್ (೨೮೩), ಹಿಂದುಳಿದ ವರ್ಗ ಬಿ ಯಿಂದ ಪಕ್ಷೇತರರಾಗಿ ಸ್ಪರ್ಧಿಸಿದ್ದ ಶೈಲೇಶ್ ಅಂಬೆಕಲ್ಲು (೩೭೮) ಮತಗಳನ್ನು ಪಡೆದು ಪರಾಜಿತರಾದರು.
ಮೂರು ಮಹಾಸಭೆಗೆ ಹಾಜರಾಗದೆ ಮತದಾನ ವಂಚಿತರ ಪರವಾಗಿ ಬಿಜೆಪಿಯವರು ಕೋರ್ಟಿಗೆ ಹೋಗಿ ೫೭೩ ಸದಸ್ಯರಿಗೆ ಮತದಾನ ಹಕ್ಕನ್ನು ಪಡೆದಿದ್ದರು. ಅದರಲ್ಲಿ ೫೩೯ ಮಂದಿಗೆ ಮತದಾನ ಅವಕಾಶ ಪಡೆದಿದ್ದಾರೆ. ಕಾಂಗ್ರೆಸ್ ಪರವಾ ಯಾರೂ ಮತದಾನದ ಹಕ್ಕಿಗಾಗಿ ಕೋರ್ಟಿಗೆ ಹೋಗಿರಲಿಲ್ಲ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.