HomePage_Banner
HomePage_Banner

ಸಂಪಾಜೆ ಗ್ರಾಮಸಭೆಯು ವಿವಿಧ ಇಲಾಖಾಧಿಕಾರಿಗಳ ಅನುಪಸ್ಥಿತಿಯಲ್ಲಿ ಮುಂದೂಡಿಕೆ

ಸಂಪಾಜೆ ಗ್ರಾಮ ಪಂಚಾಯತ್‌ನ ಗ್ರಾಮಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಂದರಿ ಮುಂಡಡ್ಕರವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಆರಂಭದಲ್ಲಿಯೇ ಶಾಜಿ ಮಾಧವನ್‌ರವರು ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ಪ್ರಶ್ನಿಸಿದರು. ಸಭೆಯಲ್ಲಿ ನಂತರ ಸೇರಿದ ಗಣಪತಿ ಭಟ್, ಮಹಮ್ಮದ್ ಕುಂಞಿ, ಜಗದೀಶ್ ರೈ, ಕೇಶವ ಬಂಗ್ಲೆಗುಡ್ಡೆ, ಪ್ರಕಾಶ್ ರೈ ಮೊದಲಾದವರು ಅಧಿಕಾರಿಗಳ ಅನುಪಸ್ಥಿತಿಯನ್ನು ಪ್ರಶ್ನಿಸಿದರು. ಕೆ.ಪಿ ಜಗದೀಶ್‌ರವರು ಮಾತನಾಡಿ ಗ್ರಾಮಸಭೆ ಮಾಡುವ ನೋಡೆಲ್ ಅಧಿಕಾರಿಯವರು ಉತ್ತರ ಕೊಡಿ ಎಂದರು. ಗಣಪತಿ ಭಟ್‌ರವರು ಗ್ರಾಮಕರಣಿಕರು ಸಂತತಿ ನಕ್ಷೆಗೆ ೩,೦೦೦-೦೦ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪ್ರಸ್ತಾಪ ಮಂಡಿಸಿದರು. ಮತ್ತು ಗ್ರಾಮಸಭೆಗೆ ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಹಾಜರಾತಿಗೆ ಒತ್ತಾಯಿಸಿದರು. ಪ್ರತೀ ಗ್ರಾಮಸಭೆಗೆ ಅಧಿಕಾರಿಗಳು ಬಾರದೇ ನಿರ್ಣಯಗಳು ಅನುಷ್ಟಾನ ಆಗುತ್ತಿಲ್ಲ, ಅಧಿಕಾರಿಗಳು ಬಾರದೇ ಗ್ರಾಮಸಭೆ ಮಾಡುವುದು ಬೇಡ, ಅಧಿಕಾರಿಗಳನ್ನು ಕರೆಸಿ ಗ್ರಾಮಸಭೆ ಮಾಡಿ ಎಂದರು ಅದಕ್ಕೆ ಸೋಮಶೇಖರ್ ಕೊಂಗಾಜೆ ಗ್ರಾಮಸಭೆ ಮುಂದೂಡುವ ಎಂದರು. ನೋಡೆಲ್ ಅಧಿಕಾರಿಯವರು ಗ್ರಾಮಸಭೆ ಮುಂದೂಡುವಂತೆ ಶಿಫಾರಸ್ಸು ಮಾಡಿದರು.
ತಾಲೂಕು ಪಂಚಾಯತ್ ಸದಸ್ಯರಾದ ಪುಷ್ಪಾ ಮೇದಪ್ಪರವರು ತಾಲೂಕು ಪಂಚಾಯತ್ ಸಭೆಗೆ ವಿವಿಧ ಇಲಾಖಾಧಿಕಾರಿಗಳು ಪದೇ ಪದೇ ಗೈರು ಹಾಜರಾಗಿ ಸಭೆ ಮುಂದೂಡಿದ ಉದಾಹರಣೆ ಈ ಬಗ್ಗೆ ಕ್ರಮ ಆಗಬೇಕು. ಮಹಮ್ಮದ್ ಕುಂಞಿಯವರು ಗ್ರಾಮಸಭೆಗೆ ಅಧಿಕಾರಿಗಳು ಬಾರದೇ ಇರುವ ಬಗ್ಗೆ ಶಾಸಕರ ಗಮನಕ್ಕೆ ತಂದು ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಬೇಕು ಮತ್ತು ಈ ಬಗ್ಗೆ ಕಾಯ್ದೆ ರೂಪಿಸಬೇಕು ಎಂದರು. ಒಟ್ಟಿನಲ್ಲಿ ಸಂಪಾಜೆ ಗ್ರಾಮಸಭೆ ಅಧಿಕಾರಿಗಳ ಬೇಜವ್ದಾರಿಯಿಂದ ಮುಂದೂಡಲ್ಪಟ್ಟಿತ್ತು.

ಫೆಬ್ರವರಿ 29 ರ ಒಳಗೆ ಸುಳ್ಯ- ಸಂಪಾಜೆ ಎಕ್ಸ್‌ಪ್ರೆಸ್  ಲೈನ್ ಸಂಪರ್ಕ ಆಗದಿದ್ರೆ ಬ್ರಹತ್ ಪ್ರತಿಭಟನೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು. ಅಲ್ಲದೆ ಮೆಸ್ಕಾಂ ಅಧಿಕಾರಿಗಳು ಫೋನ್ ಮಾಡಿ ಕೇಳಿದರೆ ಬೇಜವಾಬ್ದಾರಿ ಯಿಂದ ಮಾತಾಡುತಾರೆ ಎಂದು ಸೋಮಶೇಖರ್ ಕೊಯಿಂಗಾಜೆ ತಿಳಿಸಿದ್ದಾರೆ.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.