ಅರಂತೋಡು ನೀರಿನ ಸಮಸ್ಯೆ ಬಗೆ ಹರಿಸದಿದ್ದರೆ ಮುಂದಿನ ಚುನಾವಣೆಯನ್ನು ಬಹಿಷ್ಕಾರಕ್ಕೆ ತಿರ್ಮಾನ

Advt_Headding_Middle
Advt_Headding_Middle

ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾರೆಮಜಲು, ಅಂಗಡಿಮಜಲು, ಮಂಟಮೆಗುಡ್ಡೆ ಹರಿಒಜನ ಕಾಲನಿಗೆ ಕುಡಿಯುವ ನೀರಿನ ಸಮಸ್ಯೆಯು ಸುಮಾರು ೨೦ ವರ್ಷಗಳಿಂದ ಸಮಸ್ಯೆಯು ಕಾಡುತ್ತಿದ್ದು ಈ ಬಗ್ಗ ಪಂಚಾಯತ್‌ಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನ ಕಾಣಲಿಲ್ಲ. ಈ ಭಾಗದ ಜನರಿಗೆ ಅರಂತೋಡು ತೋಡಿಕಾನ ಪ್ರಾ.ಕೃ.ಸ.ಸಂಘದ ಉಪಾಧ್ಯಕ್ಷರಾದ ದಯಾನಂದ ಕುರುಂಜಿಯವರು ಉದಾರತೆಯಿಂದ ತನ್ನ ತೋಟದ ಪಂಪ್‌ಸೆಟ್‌ನಿಂದ ನೀರಿನ ಸಂಪರ್ಕವನ್ನು ಕಲ್ಪಸಿಕೊಟ್ಟು ತಮ್ಮ ಬದುಕಿನ ಬವಣೆಗೆ ಸ್ಪಂದಿಸಿರುತ್ತಾರೆ.

ಅಲ್ಲದೆ ಎಪ್ರಿಲ್ ಮೇ ತಿಂಗಳಲ್ಲಿ ನದಿಯ ನೀರಿನ ಹರಿವು ಬತ್ತಿ ಹೋಗುತ್ತದೆ. ಈ ಬಗ್ಗೆ ಮನವಿಯನ್ನು ಶಾಸಕರಿಗೆ. ಜಿ.ಪಂ ಸದಸ್ಯ ಹರೀಶ್ ಕಂಜಿಪಿಲಿಯವರಿಗೆ, ದ.ಕ.ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ, ಗ್ರಾ.ಪಂ ಅರಂತೋಡು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗೆ ಮನವಿಯನ್ನು ನೀಡಿ ಈ ಸಮಸ್ಯೆಗೆ ಸ್ಪಂದಿಸದಿದ್ದರೆ ಮುಂದಿನ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸಲು ತಿರ್ಮಾನಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.