ಮಾ.‌ 2: ಸುಳ್ಯ ಲ್ಯಾಂಪ್ ಸೊಸೈಟಿಗೆ ಒಂದು ಕ್ಷೇತ್ರದಲ್ಲಿ ಚುನಾವಣೆ

Advt_Headding_Middle
Advt_Headding_Middle

ಸುಳ್ಯ ತಾಲೂಕು ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ ಆಡಳಿತ ಮಂಡಳಿಯ ಒಂದು ಕ್ಷೇತ್ರಕ್ಕೆ ಚುನಾವಣೆಯು ಮಾ. 2 ರಂದು ನಡೆಯಲಿದೆ, ಫೆ. 19 ರಂದು ನಾಮಪತ್ರ ಸಲ್ಲಿಕೆ ಪ್ರಾರಂಭಗೊಂಡು ಫೆ. 23 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು. ಒಟ್ಟು 9 ಕ್ಷೇತ್ರಗಳಿಗೆ 10 ನಾಮತ್ರಗಳು ಸಲ್ಲಿಕೆಯಾಗಿತ್ತು. ಅಜ್ಜಾವರ ಸಾಮಾನ್ಯ ಕ್ಷೇತ್ರಕ್ಕೆ ಮಾತ್ರ ಹಾಲಿ ಉಪಾಧ್ಯಕ್ಷೆ ಬಿ.ಜೆ.ಪಿ. ಬೆಂಬಲಿತ ಶ್ರೀಮತಿ ರೇವತಿ ದೊಡ್ಡೇರಿ ಮತ್ತು ಪರಮೇಶ್ವರ ನಾಯ್ಕ ನಾಮಪತ್ರ ಸಲ್ಲಿಸಿರುವುದರಿಂದ ಆ ಒಂದು ಕ್ಷೇತ್ರಕ್ಕೆ ಮಾತ್ರ ಮತದಾನ ನಡೆಯಲಿದೆ. ಉಳಿದ 8 ಕ್ಷೇತ್ರಗಳಲ್ಲಿ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ 8 ಕ್ಷೇತ್ರಗಳಲ್ಲೂ ಅವಿರೋಧ ಆಯ್ಕೆಯಾಗಿರುತ್ತದೆ. ಚುನಾವಣೆಯು ಮಾ. 2 ರಂದು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.