Breaking News

ಯಕ್ಷಗಾನ ಪಠ್ಯ: ಫೇಸ್‌ಬುಕ್‌ನಲ್ಲಿ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಪ್ರಶಂಸೆ – ಪೋಸ್ಟ್ ವೈರಲ್

Advt_Headding_Middle
Advt_Headding_Middle


ಪುತ್ತೂರಿನಿಂದ ಮಡಿಕೇರಿಗೆ ತೆರಳುವ ಹಾದಿಯಲ್ಲಿದ್ದ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಅವರನ್ನು ಶಿಕ್ಷಕರಾದ ಡಾ.ಸುಂದರ್ ಕೇನಾಜೆ ಹಾಗೂ ಪ್ರಕಾಶ್ ಮೂಡಿತ್ತಾಯರು ಭೇಟಿ ಮಾಡಿ ಯಕ್ಷಗಾನ ಪಠ್ಯಪುಸ್ತಕವನ್ನು ನೀಡಿದ್ದು, ಈ ವಿಚಾರವನ್ನು ಶಿಕ್ಷಣ ಸಚಿವರು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದು ಅದು ವೈರಲ್ ಆಗುತ್ತಿದೆ.


ಮಡಿಕೇರಿಗೆ ತೆರಳುವಾಗ ಸುರೇಶ್‌ಕುಮಾರ್ ಬೆಳಗ್ಗಿನ ಉಪಾಹಾರಕ್ಕೆಂದು ಸುಳ್ಯದಲ್ಲಿ ನಿಂತಿದ್ದರು. ಈ ವೇಳೆ ಅವರನ್ನು ಭೇಟಿಯಾದ ಶಿಕ್ಷಣ ಸಂಯೋಜಕ ಡಾ.ಸುಂದರ್ ಕೇನಾಜೆ ಹಾಗೂ ಪಾಪೆಮಜಲು ಶಾಲಾ ಶಿಕ್ಷಕ ಪ್ರಕಾಶ್ ಮೂಡಿತ್ತಾಯರು, ಇತ್ತೀಚೆಗೆ ಬಿಡುಗಡೆಗೊಂಡ ಯಕ್ಷಗಾನ ಪಠ್ಯ ಪುಸ್ತಕ (ಜೂನಿಯರ್)ವನ್ನು ಅವರಿಗೆ ನೀಡಿದರು. ಕರಾವಳಿಯಲ್ಲಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಮತ್ತು ಮುಂದೆ ಕಲಿಸಬೇಕಾದ ರೀತಿ ನೀತಿಗಳ ಬಗ್ಗೆ ವಿವರಿಸಿದರು. ಬಹಳ ಆಸಕ್ತಿಯಿಂದ ಆಲಿಸಿದ ಸಚಿವರು ಹೊಟೇಲ್‌ನಿಂದ ತೆರಳಿದ ಕೆಲವೇ ನಿಮಿಷಗಳಲ್ಲಿ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಮೆಚ್ಚುಗೆಯ ಮಾತುಗಳ ಪೋಸ್ಟ್ ಹಾಕಿದರು.


ಪೋಸ್ಟ್ ಇಂತಿದೆ: 

ಪುತ್ತೂರಿನಿಂದ ಮಡಿಕೇರಿಗೆ ಹೋಗುವ ದಾರಿಯಲ್ಲಿ ಸುಳ್ಯದ ಬಳಿ ಈ ಇಬ್ಬರು ಶಿಕ್ಷಕರು ಸಿಕ್ಕಿದರು.

ಪುತ್ತೂರು ತಾಲ್ಲೂಕಿನ ಪಾವೆಮಜಲು ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾದ ಪ್ರಕಾಶ ಮುಡಿತ್ತಾಯ

ಮತ್ತು

ಸುಳ್ಯ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ECO ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುಂದರ ಕೇನಾಜೆ.

ಇವರಿಬ್ಬರ ಆಸಕ್ತಿ ಮತ್ತು ಪರಿಶ್ರಮದಿಂದ ರಚನೆಯಾಗಿರುವ ಯಕ್ಷಗಾನ ಕುರಿತ ಪಠ್ಯಪುಸ್ತಕವನ್ನು ನೀಡಿದರು.

ಉಡುಪಿಯಲ್ಲಿ ಸುಮಾರಷ್ಟು ಶಾಲೆಗಳಲ್ಲಿ ಮಕ್ಕಳು ಆಸಕ್ತಿಯಿಂದ ಯಕ್ಷಗಾನ ಕಲಿಯುತ್ತಿರುವ ಮಾಹಿತಿ ನೀಡಿದರು.

ಗಣಿತ ಕಲಿಸಲಿಕ್ಕೂ ಯಕ್ಷಗಾನ ವನ್ನು ಹೇಗೆ ಬಳಸಿಕೊಳ್ಳಬಹುದೆಂಬ ವಿಚಾರ ತಿಳಿಸಿದರು.

ಇಂತಹ ಸೃಜನಶೀಲ ಶಿಕ್ಷಕರ ಭೇಟಿ ಆದಾಗ ನನ್ನ ಉತ್ಸಾಹ ನೂರ್ಪಾಲು ಹೆಚ್ಚುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.