ಮಡ್ತಿಲ, ಮರುವಂಜದಲ್ಲಿ ಬ್ರಹ್ಮ ಕಲಶ, ನೇಮೋತ್ಸವ

Advt_Headding_Middle
Advt_Headding_Middle

ಮುಪ್ಪೇರ್ಯ ಗ್ರಾಮದ ಮಡ್ತಿಲ, ಮರುವಂಜ ಶ್ರೀ ನಾಗಸಾನಿದ್ಯ, ರುದ್ರಚಾಮುಂಡಿ, ಶಿರಾಡಿ ಮತ್ತು ಪರಿವಾರ ದೈವಗಳ ನವೀಕರಣ ಪುನಃಪ್ರತಿಷ್ಠಾ ಬ್ರಹ್ಮ ಕಲಶವು ಫೆ. 25, 26 ಹಾಗೂ ಶ್ರೀ ದೈವಗಳ ನೇಮ ನಡಾವಳಿಯು ಫೆ. 28 ಮತ್ತು 29 ರಂದು ನಡೆಯಿತು.
ಫೆ. 25 ರಂದು ಸಂಜೆ ತಂತ್ರಿಗಳ ಆಗಮನದ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಫೆ. 26 ರಂದು ಬೆಳಿಗ್ಗೆ ಗಣಪತಿ ಹೋಮ, ಪೂ. 11.42ರ ವೃಷಭ ಲಗ್ನದಲ್ಲಿ ಶ್ರಿ ನಾಗದೇವರ ಮತ್ತು ದೈವಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು ಫೆ. 28 ರಂದು ಸಂಜೆ ದೈವಗಳ ಭಂಡಾರ ತೆಗೆದು ಅನ್ನಸಂತರ್ಪಣೆಯ ಬಳಿಕ ದೈವಗಳ ನೇಮೋತ್ಸವ ನಡೆಯಿತು. ಫೆ. 29ರಂದು ಬೆಳಿಗ್ಗೆ ರುದ್ರಚಾಮುಂಡಿ ಮತ್ತು ಶಿರಾಡಿ ದೈವಗಳ ನೇಮೋತ್ಸವ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಫೆ. 25 ರಂದು ರಾತ್ರ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಲಕ್ಷ್ಮಣ ಆಚಾರ್ಯ ಎಡಮಂಗಲರವರ ಸಂಯೋಜನೆಯಲ್ಲಿ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ, ಫೆ. 26 ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣು ಸಿಂಗಾರಿ ಮೇಳ ಬಾಳಿಲ ಮುಪ್ಪೇರ್ಯ ಇವರಿಂದ ಚೆಂಡೆವಾದನ, ಫೆ. 28ರಂದು ಸಂಜೆ ಶ್ರೀ ಧರ್ಮಶಾಸ್ತಾವು ಭಜನಾ ಮಂದಿರ ಪಿಲಿಕಜೆಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಡ್ತಿಲ, ಮರುವಂಜ ಮನೆಯವರಾದ ಬಾಲಕೃಷ್ಣ ಗೌಡ ಮಡ್ತಿಲ, ಪ್ರಸನ್ನ ಮಡ್ತಿಲ, ಮಡ್ತಿಲ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗಿಗಳಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.