ವಸಂತ ಕಿರಿಭಾಗ ಕೆ.ವಿ.ಜಿ.ಹೆಚ್.ಟಿ. ಪವರ್ ಹೌಸ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ನೇಮಕ

Advt_Headding_Middle
Advt_Headding_Middle

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಆಶ್ರಯದಲ್ಲಿರುವ ಕೆ.ವಿ.ಜಿ.ಹೆಚ್.ಟಿ. ಪವರ್ ಹೌಸ್ ನಲ್ಲಿ ಈವರೆಗೆ ಸಹಾಯಕ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಸಂತ ಗೌಡ ಕಿರಿಭಾಗರವರನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಪ್ರಧಾನ ಕಾರ್ಯದರ್ಶಿ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ಮುಖ್ಯ ಕಾರ್ಯನಿರ್ವಣಾಧಿಕಾರಿಯಾಗಿ ನೇಮಕಗೊಳಿಸಿದ್ದಾರೆ.


ಬಾಳುಗೋಡು ಗ್ರಾಮದ ಕಿರಿಭಾಗ ದಿ. ಬಾಲಕೃಷ್ಣ ಗೌಡ ಮತ್ತು ದಿ. ಸರಸ್ವತಿ ದಂಪತಿಗಳ ಪುತ್ರರಾದ ವಸಂತ ಕಿರಿಭಾಗರವರು ಮೈಸೂರಿನ ಚಾಮರಾಜನಗರದ ಸರಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಬಳಿಕ ಮೈಸೂರಿನ ಸ್ಟೆಲಿನ್ ವೆಲ್ ಇಂಜಿನಿಯರಿಂಗ್ ನಲ್ಲಿ ಸುಪರ್ ವೈಸರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ, 1998 ರಲ್ಲಿ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಲ್ಯಾಬ್ ಮೇಲ್ವಿಚಾರಕರಾಗಿ ಸೇವೆಗೆ ಸೇರ್ಪಡೆಯಾದರು. ಬಳಿಕ 2000ದಲ್ಲಿ ಕೆ.ವಿ.ಜಿ.ಹೆಚ್.ಟಿ. ಪವರ್ ಹೌಸ್ ನ ಸಹಾಯಕ ಕಾರ್ಯನಿರ್ವಣಾಧಿಕಾರಿಯಾಗಿ ನೇಮಕಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.