ಹೃದಯ ವಿಕಸನದ ಪ್ರತಿಬಿಂಬವೇ ಕಾವ್ಯ: ಕವಿತಾ ಅಡೂರು

Advt_Headding_Middle
Advt_Headding_Middle

ಸಿರಿಗನ್ನಡ ವೇದಿಕೆಯಿಂದ ಕವಿಗೋಷ್ಠಿ ಮತ್ತು ಉಪನ್ಯಾಸ‌

 

ಸಿರಿಗನ್ನಡ ವೇದಿಕೆ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ ‘ಸಾಹಿತ್ಯ ಸಿರಿ’ ಕವಿಗೋಷ್ಠಿ ಮತ್ತು ಉಪನ್ಯಾಸ ಕಾರ್ಯಕ್ರಮ ಈ ದಿನ ಸುಳ್ಯದ ಅಮೃತ ಭವನ ಸಭಾಂಗಣದಲ್ಲಿ ನಡೆಯಿತು.

ವಿಜಯವಾಣಿ ದಿನಪತ್ರಿಕೆಯ ‘ಕಗ್ಗದ ಬೆಳಕು’  ಅಂಕಣಕಾರರಾದ ಶ್ರೀಮತಿ ಕವಿತಾ ಅಡೂರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಡಿವಿಜಿ ಮತ್ತು ಸಾಹಿತ್ಯ ಸೌಂದರ್ಯ ಕುರಿತಂತೆ ಮಾತನಾಡುತ್ತಾ, ‘ನಮ್ಮ ಭಾಷೆಯೇ ಶ್ರೇಷ್ಠ ಉಳಿದ ಭಾಷೆಗಳು ಕನಿಷ್ಠ ಅನ್ನುವ ತಾರತಮ್ಯ ಖಂಡಿತಾ ಸಲ್ಲದು, ಎಲ್ಲ ಭಾಷೆಗಳನ್ನು ಕಲಿತು ಅದರಲ್ಲಿರುವ ಸತ್ವವನ್ನು ಹೀರಿ ನಮ್ಮ ಮಾತೃಭಾಷೆಯ ಬೆಳವಣಿಗೆಗೆ ಕಾಣಿಕೆಯನ್ನು ನೀಡಬೇಕು. ಪರಭಾಷೆಗಳ ಪ್ರಭಾವ ಅದೆಷ್ಟಿದ್ದರೂ ಕೂಡ ನಮ್ಮ‌ ಕನ್ನಡ ಎಂದಿಗೂ ಅಳಿಯಲು ಸಾಧ್ಯವೇ ಇಲ್ಲ, ನಮ್ಮ ಮನೋವಿಕಾರಗಳನ್ನು ಹೊರಹಾಕಲು ಕವಿತೆಯೊಂದು ಮಾಧ್ಯಮವಾಗಬಾರದು. ಹೃದಯ ವಿಕಸನದ ಪ್ರತಿಬಿಂಬವೇ ಕಾವ್ಯ. ಸಾಹಿತ್ಯದ ಓದಿನಿಂದ ಜೀವೋತ್ಕರ್ಷವಾಗಬೇಕು. ಪರವಶತೆಯೇ ಕಾವ್ಯದ ಓದಿನ ಸಾಫಲ್ಯ’ ಅನ್ನುವುದು ಡಿವಿಜಿಯವರ ಅಭಿಮತ ಎಂದರು.

ದ.ಕ‌ ಮತ್ತು ಗಡಿನಾಡಿನ ಹಲವಾರು ಕವಿಗಳು ಈ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದು ಗೋಪಾಲಕೃಷ್ಣ ಭಟ್ ಮನವಳಿಕೆ ಕವಿಗೋಷ್ಠಿಗೆ ಚಾಲನೆ ನೀಡಿದರು. ಮಕ್ಕಳ ವಿಭಾಗದಿಂದ 8, ಕಾಲೇಜು ವಿಭಾಗದಿಂದ 6, ಮತ್ತು ಸಾರ್ವಜನಿಕ ವಿಭಾಗದಿಂದ 21 ಕವಿಗಳು ಕವನ ವಾಚಿಸಿದರು.

ಸಿರಿಗನ್ನಡ ವೇದಿಕೆಯ ದ‌‌.ಕ ಜಿಲ್ಲಾಧ್ಯಕ್ಷರಾದ ಮಧುರಕಾನನ ಗಣಪತಿ ಭಟ್, ವೇದಿಕೆಯ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ವಸಂತಲಕ್ಷ್ಮಿ ಪುತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿರಿಗನ್ನಡ ವೇದಿಕೆ ಸುಳ್ಯ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಕೋಡಿಬೈಲು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷೆ ಪರಮೇಶ್ವರಿ ಪ್ರಸಾದ್ ಧನ್ಯವಾದ ಸಮರ್ಪಿಸಿದರು. ಕು‌.ದಿಶಾ ಮತ್ತು ಕು.ತನೀಶಾ ಪ್ರಾರ್ಥಿಸಿ, ಸಿರಿಗನ್ನಡ ವೇದಿಕೆ ಸುಳ್ಯ ತಾಲೂಕು ಅಧ್ಯಕ್ಷರಾದ ಉದಯಭಾಸ್ಕರ್ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ಟೀಂ ಯುವಾ ವಿವೇಕ್ ಫೋರ್ಸ್ ನ ಕಾರ್ಯಕರ್ತರಾದ ಹೇಮಂತ್ ದೊಡ್ಡೇರಿ, ಹರ್ಷಿತ್ ಅರ್ಭಡ್ಕ, ವಿಜೇತ್ ಸುವರ್ಣ, ನಿತಿನ್ ಎಂ.ಜಿ, ಕಿಶೋರ್ ಬಳ್ಳಡ್ಕ, ಶಿವರಾಮ್ ಮೇನಾಲ ಮತ್ತು ಲೋಹಿತ್ ಸ್ವಯಂಸೇವಕರಾಗಿ ಸಹಕರಿಸಿದರು‌.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.