Breaking News

ಮಾ.5: ಹರಿಹರ ಪಲ್ಲತಡ್ಕದಲ್ಲಿ ಅಡಿಕೆ ತಳಿಗಳು, ಬಹು ಬೆಳೆ ಕೃಷಿ ಪದ್ಧತಿ, ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಬಗ್ಗೆ ಮಾಹಿತಿ ಹಾಗೂ ತರಬೇತಿ

Advt_Headding_Middle
Advt_Headding_Middle

ಭಾರತೀಯ ಕೃಷಿ ಸಂಶೋಧನಾ ಪರಿಷತ್ತು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಪ್ರಾದೇಶಿಕ ಕೇಂದ್ರ ವಿಟ್ಲ ಇವರ ಸಂಘಟನೆಯಲ್ಲಿ ಅಡಿಕೆ ಮತ್ತು ಸಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ, ಕೇರಳ ಇವರ ಪ್ರಾಯೋಜಕತ್ವದಲ್ಲಿ ರಬ್ಬರ್ ಉತ್ಪಾದಕರ ಸಂಘ ಹರಿಹರ ಪಲ್ಲತ್ತಡ್ಕ ಇದರ ಸಹಭಾಗಿತ್ವದಲ್ಲಿ ನಿಸರ್ಗ ಯುವಕ ಮಂಡಲ ಐನೆಕಿದು ಇದರ ಸಹಕಾರದೊಂದಿಗೆ, ಅಡಿಕೆ ತಳಿಗಳು ಹಾಗೂ ಬಹು ಬೆಳೆ ಕೃಷಿ ಪದ್ಧತಿ ಮತ್ತು ಅಡಿಕೆಯಲ್ಲಿ ಕೀಟ ಮತ್ತು ರೋಗಗಳ ಸಮಗ್ರ ನಿರ್ವಹಣೆ ಹಾಗೂ ಇತರ ಬೆಳೆಗಳ ಕುರಿತು ಮಾಹಿತಿ ಹಾಗೂ ತರಬೇತಿ ಕಾರ್ಯಕ್ರಮ ಫೆ.೫ರಂದು ನಡೆಯಲಿದೆ. ಕಾರ್ಯಕ್ರಮವು ಹರಿಹರ ಪಲ್ಲತಡ್ಕ ಗ್ರಾ.ಪಂ ನ ಕಛೇರಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿದೆ. ಪ್ರಗತಿಪರ ಕೃಷಿಕ ಭವಾನಿಶಂಕರ ಪಿಂಡಿಮನೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತರಬೇತಿ ಹಾಗೂ ಸಂವಾದದಲ್ಲಿ ಸಿ.ಪಿ.ಸಿ.ಆರ್.ಐ ವಿಟ್ಲ ಇಲ್ಲಿನ ಕೃಷಿ ವಿeನಿಗಳಾದ ಡಾ|| ನಾಗರಾಜ ಎನ್.ಆರ್ ಭಾಗವಹಿಸಲಿದ್ದಾರೆ. ತರಭೇತಿಯಲ್ಲಿ ಕೃಷಿಕರ ಅನಿಸಿಕೆ, ರಸಪ್ರಶ್ನೆ, ಬೋರ್ಡೋ ದ್ರಾವಣದ ಪ್ರಾತ್ಯಕ್ಷಿತೆ ನಡೆಯಲಿದೆ. ಅಲ್ಲದೆ ಆಯ್ದ ಕೃಷಿಕರ ಗುರುತಿಸುವಿಕೆ ಹಾಗೂ ಗೌರವಾರ್ಪಣೆ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.