ಮೊದಲ ಪಂದ್ಯದಲ್ಲಿ ಪ್ರತಾಪ ಮೆರೆದ ಸಚಿನ್ ಪ್ರತಾಪ್

Advt_Headding_Middle
Advt_Headding_Middle

 


ಜೈಪುರದಲ್ಲಿ ನಡೆದ 67 ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ನ 8 ನೇ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಪಂದ್ಯದಲ್ಲಿ ಕರ್ನಾಟಕ ತಂಡದ ಪರವಾಗಿ ಕಣಕ್ಕಿಳಿದ ಐವರ್ನಾಡಿನ ಸಚಿನ್ ಪ್ರತಾಪ್ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ. ಕರ್ನಾಟಕ ತಂಡದಲ್ಲಿ ಸುಖೇಶ್ ಹೆಗ್ಡೆ, ಪ್ರಶಾಂತ್ ರೈ ರಂತ ರೈಡರ್ಗಳಿದ್ದರು, ಅವರನ್ನು ಹಿಂದಿಕ್ಕಿ 9 ವೈಯಕ್ತಿಕ ಅಂಕ ಗಳಿಸುವ ಮೂಲಕ ಗಮನಸೆಳೆದರು. ಇದು ಪಂದ್ಯದಲ್ಲಿ ದಾಖಲಾದ ಹೆಚ್ಚಿನ ವೈಯಕ್ತಿಕ ಅಂಕವಾಗಿತ್ತು. ಸಹಜವಾಗಿಯೇ ಪಂದ್ಯದ ಬೆಸ್ಟ್ ರೈಡರ್ ಪ್ರಶಸ್ತಿ ಪಡೆದುಕೊಂಡರು.

ಈ ಪಂದ್ಯದಲ್ಲಿ ಕರ್ನಾಟಕ 42 ಮಧ್ಯ ಪ್ರದೇಶ 27 ಅಂಕ ಪಡೆದು ಕರ್ನಾಟಕ 15 ಅಂಕದಿಂದ ವಿಜಯಿಯಾಯಿತು.

ಸಚಿನ್ ಪ್ರತಾಪ್ ಐವರ್ನಾಡಿನ ಸಿ ಕೂಪ್ ಸುಂದರಲಿಂಗ ರ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.