ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಜ್ಞಾನರಶ್ಮಿ ವಾರ್ಷಿಕ ಸಂಚಿಕೆಯ ಬಿಡುಗಡೆ

Advt_Headding_Middle
Advt_Headding_Middle

 

ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಕೆ. ಸೀತಾರಾಮ ರೈ ಸವಣೂರು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳು ತಮ್ಮ ಗುರಿ ಸಾಧನೆಯ ಕಡೆಗೆ ಗಮನವನ್ನು ಹರಿಸಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಶ್ರೀಹರ್ಷಾ ಎನ್. ಸೀನಿಯರ್ ಸುಪರಿಡೆಂಟ್ ಆಫ್ ಪೋಸ್ಟ್ ಆಫೀಸಸ್ ಮಂಗಳೂರು ವಿಭಾಗ, ಇವರು ಸರಕಾರಿ ಹುದ್ದೆಗಳಿಗಿರುವ ಪ್ರಾಮುಖ್ಯತೆಗಳನ್ನು ತಿಳಿಸುವುದರೊಂದಿಗೆ ಈ ಸಂಸ್ಥೆಯ ಕನಸನ್ನು ನನಸು ಮಾಡುವ, ಕನಸಿಗೆ ಜೀವ ತುಂಬುವ ಕೆಲಸ ವಿದ್ಯಾರ್ಥಿಗಳಿಂದಾಗಬೇಕು ಎಂದರು. ಇವರ ಪರಿಚಯವನ್ನು ದ್ವಿತೀಯ ಬಿ.ಎ ವಿದ್ಯಾರ್ಥಿಯಾದ ಸಿರಾಜುದ್ದೀನ್ ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ ಸದಾನಂದ ರೈ ಕೂವೆಂಜ ಪ್ರಾಂಶುಪಾಲರು ಕೆ.ಎಸ್.ಗೌಡ ಪಿ.ಯು ಕಾಲೇಜು ನಿಂತಿಕಲ್ ಇವರು ಕಾಲೇಜಿನ ಜ್ಞಾನರಶ್ಮಿ ಎನ್ನುವ ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಲ್ಲಿ ಕಲಿವಿನ ದಾಹ ಇರುವುದರೊಂದಿಗೆ ಏನನ್ನಾದರೂ ಸಾಧಿಸಬೇಕು ಎನ್ನುವ ಛಲ ಇರಬೇಕೆಂದರು. ಇವರ ಪರಿಚಯವನ್ನು ತೃತೀಯ ಬಿ.ಕಾಂ ನ ವಿದ್ಯಾರ್ಥಿಯಾದ ರಫೀನಾ ಮಾಡಿಕೊಟ್ಟರು. ಸಂಚಿಕೆಯ ರೂಪುರೇಷೆಯನ್ನು ಸಂಸ್ಥೆಯ ಉಪಪ್ರಾಂಶುಪಾಲರಾದ ಶೇಷಗಿರಿ ಎಂ. ತಿಳಿಯಪಡಿಸಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿಗಳಾದ ಇಡಿ. ಅಶ್ವಿನ್ ಎಲ್. ಶೆಟ್ಟಿ , ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ. ನಿವೇದಿತಾ, ಟ್ರಸ್ಟಿ ಸದಸ್ಯರಾದ ಸುಂದರ್ ರೈ ಸವಣೂರು, ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಸೀತಾರಾಮ ಕೇವಳ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರಾಜಲಕ್ಷ್ಮಿ ಎಸ್. ರೈ ಉಪಸ್ಥಿತರಿದ್ದರು. ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿಯಾದ ಶ್ರಾವ್ಯಾ ಸ್ವಾಗತಿಸಿ, ತೃತೀಯ ಬಿ.ಎ ವಿದ್ಯಾರ್ಥಿನಿಯಾದ ಭಾರತಿ ಕೆ. ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ತೃತೀಯ ಬಿ.ಕಾಂ. ನ ವಿದ್ಯಾರ್ಥಿನಿಯಾದ ಶ್ರಾವ್ಯಾ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.