Breaking News

ಬಿಜೆಪಿ ಎಣ್ಮೂರು ಗ್ರಾಮ ಸಮಿತಿ ವತಿಯಿಂದ ಮನವಿ

Advt_Headding_Middle
Advt_Headding_Middle

ಎಣ್ಮೂರು ಬಿಜೆಪಿ ಗ್ರಾಮ ಸಮಿತಿ ವತಿಯಿಂದ ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕರನ್ನು ಭೇಟಿಯಾಗಿ ಎಣ್ಮೂರು – ಮುರುಳ್ಯ ಗ್ರಾಮಪಂಚಾಯತ್ ಬೇರ್ಪಡೆಯಾಗಿ ಎಣ್ಮೂರು ಗ್ರಾಮ ಎಡಮಂಗಲ ಪಂಚಾಯತ್‌ನೊಂದಿಗೆ ವಿಲೀನಗೊಂಡ ಬಗ್ಗೆ ಚರ್ಚಿಸಿ ಶೀಘ್ರವಾಗಿ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರವನ್ನು ಒದಗಿಸಿಕೊಡಬೇಕೆಂದು ಎಣ್ಮೂರು ಬಿಜೆಪಿಯ ಗ್ರಾಮಸಮಿತಿಯ ಪರವಾಗಿ ಮಾ. ೩ರಂದು ಮನವಿ ಸಲ್ಲಿಸಲಾಯಿತು.


ಶಾಸಕರು ಈ ವಿಚಾರದ ಬಗ್ಗೆ ಗ್ರಾಮಿಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಸಚಿವರಾದ ಈಶ್ವರಪ್ಪನವರನ್ನು ಭೇಟಿಯಾಗಿ ಗ್ರಾಮದ ಸಮಸ್ಯೆಯ ಬಗ್ಗೆ ಚರ್ಚಿಸಿ ಶಾಸಕರ ಮನವಿಗೆ ಸ್ಪಂದಿಸಿ ಗ್ರಾಮದ ಸಮಸ್ಯೆಗೆ ಅತೀ ಶೀಘ್ರದಲ್ಲಿ ಪರಿಹಾರ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಣ್ಮೂರು ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷ ಯೋಗನಂದ ಉಳ್ಳೆಲಾಡಿ
, ಬೂತ್ ಪ್ರಭಾರಿ ಅನೂಪ್ ಕುಮಾರ್ ಆಳ್ವ , ಕಾರ್ಯದರ್ಶಿ ಕಾರ್ತಿಕ್ ರೈ ಕಲ್ಲೇರಿ , ಕಾರ್ಯಕರ್ತರಾದ ಮನೋಜ್ ಕುಮಾರ್ ರೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.