ಮಾ: 8 ಜಟ್ಟಿಪಳ್ಳದಲ್ಲಿ ಮಹಿಳಾ ದಿನಾಚರಣೆ

Advt_Headding_Middle
Advt_Headding_Middle

ಭಾರತ ಸರ್ಕಾರ ನೆಹರೂ ಯುವಕೇಂದ್ರ ಮಂಗಳೂರು, ಜೇಸಿರೆಟ್ ಸುಳ್ಯ ಪಯಸ್ವಿನಿ ಜೇಸಿಸ್ ಹಾಗೂ ಮಾನಸ ಮಂಡಲ (ರಿ.) ಜಟ್ಟಿಪಳ್ಳ ಇವುಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 8 ಮಹಿಳಾ ದಿನಾಚರಣೆಯ ಅಂಗವಾಗಿ, ಜಟ್ಟಿಪಳ್ಳದ ಯುವ ಸದನದಲ್ಲಿ ಮಹಿಳಾ ದಿನಾಚರಣೆ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೇಸಿರೆಟ್ ವಲಯ 15ರ ನಿರ್ದೇಶಕಿ ಜೇಸಿರೆಟ್ ಜ್ಯೋತಿ ರಮಾನಾಥ ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಲಿದ್ದು, ಹೈನುಗಾರಿಕಾ ಕ್ಷೇತ್ರ ಸಾಧನೆ ಮಾಡುತ್ತಿರುವ ಭುವನೇಶ್ವರಿ ಅಮೈ ಮತ್ತು ರಾಷ್ಟ್ರ ಮಟ್ಟದ ವೈಟ್‌ಲಿಫ್ಟ್ ಜೂನಿಯರ್ ಚಾಂಪಿಯನ್ ಆಗಿರುವ ಕು| ಶ್ರಾವ್ಯ ಜೆ. ಆರ್. ರೈರವರುಗಳನ್ನು ಸನ್ಮಾನಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಮಾಜಿ ಅಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ. ರೈ ಉಪಸ್ಥಿತರಿದ್ದು, ಎಂ.ಜಿ.ಎಂ. ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಚಿತ್ರಲೇಖಾ ಮಡಪ್ಪಾಡಿ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಸುಳ್ಯ ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಸರೋಜಿನಿ ಪೆಲ್ತಡ್ಕ ಮತ್ತು ಕು| ವಾಣಿಶ್ರೀ ಬೊಳಿಯಮಜಲು ಅಲ್ಲದೆ ಸುಳ್ಯ ಪಯಸ್ವಿನಿ ಜೇಸಿಸ್ ಅಧ್ಯಕ್ಷ ದೇವರಾಜ್ ಕುದ್ಪಾಜೆ ಗೌರವ ಉಪಸ್ಥಿತಿಯಲ್ಲಿದ್ದಾರೆ. ಸುಳ್ಯ ಜೇಸಿರೆಟ್ ವಿಭಾಗದ ಅಧ್ಯಕ್ಷೆ ಜೇಸಿರೆಟ್ ಚೈತನ್ಯ ದೇವರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಹಿಳೆಯರಿಗೆ ಪೂರ್ವಾಹ್ನ ಗಂಟೆ 9.30 ರಿಂದ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದೂ ಮಾನಸ ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಸುನೀತ ರಾಮಚಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.