Breaking News

ಸುಳ್ಯ: ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

Advt_Headding_Middle
Advt_Headding_Middle

ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಕ್ರೀಡೆ ಬಹಳ ಮುಖ್ಯ.- ರಮೇಶ್. ಎ.
ಕ್ರೀಡೆಯಿಂದ ದೈಹಿಕ ಆರೋಗ್ಯ, ಏಕಾಗ್ರತೆ, ಒಗ್ಗಟ್ಟು ಮೂಡುವುದು. ರಾಷ್ಟ್ರೀಯ ಸಮಗ್ರತೆಗೆ ಕ್ರೀಡೆ ಬಹಳ ಮುಖ್ಯ ಎಂದು ವೈಟ್ ಲಿಫ್ಟಿಂಗ್ ಮಾಜಿ ರಾಷ್ಟ್ರೀಯ ಚಾಂಪಿಯನ್ ರಮೇಶ್. ಎ. ಹೇಳಿದರು. ಅವರು ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟವನ್ನು ಉದ್ಟ್ಫಾಟಿಸಿ ಮಾತನಾಡಿದರು. ಧ್ವಜಾರೋಹಣ ನೇರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಎ.ಓ.ಎಲ್.ಇ(ರಿ), ಸುಳ್ಯ ಇದರ ಅಧ್ಯಕ್ಷರಾದ ಡಾ| ಕೆ.ವಿ. ಚಿದಾನಂದ ಅವರು ಶಾಲಾ ಕಾಲೇಜಿನ ಶಿಕ್ಷಣದ ಅವಧಿಯಲ್ಲಿ ಕೇವಲ ಕಲಿಕೆ ಮಾತ್ರವಲ್ಲದೇ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇದರಿಂದ ವೈಯಕ್ತಿಕ ಅಭಿವೃದ್ಧಿಯಲ್ಲದೇ ಸಂಸ್ಥೆಯ ಹಾಗೂ ಸಮಾಜಕ್ಕೂ ಕೀರ್ತಿ ಲಭಿಸುತ್ತದೆ. ಕ್ರೀಡಾ ಸ್ಪೂರ್ತಿಯೊಂದಿಗೆ ಪಾಲ್ಗೊಳ್ಳಿ ಎಂದು ಕರೆ ನೀಡಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಉದಯಕೃಷ್ಣ. ಬಿ, ಎನ್.ಎಮ್.ಸಿ ಯ ಶೈಕ್ಷಣಿಕ ಸಲಹೆಗಾರರಾದ ಪ್ರೊ. ಎಮ್.ಬಾಲಚಂದ್ರ ಗೌಡ ಕ್ಯಾಂಪಸ್ ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಡಿ. ಜವರೇ ಗೌಡ, ವಿದ್ಯಾರ್ಥಿ ಕ್ಷೇಮಾಧಿಕಾರಿ ಟೀನಾ. ಹೆಚ್.ಎಸ್, ಕಾಲೇಜಿನ ಶೈಕ್ಷಣಿಕ ನಿರ್ದೇಶಕ ನಾಗರಾಜ್ ನಾಕ್ ಭಟ್ಕಳ, ಎನ್.ಎಮ್.ಸಿ ಯ ದೈಹಿಕ ಶಿಕ್ಷಣ ನಿರ್ದೇಶಕ ಲೆಪ್ಟಿನೆಂಟ್. ಸೀತಾರಾಮ. ಎಮ್. ಡಿ, ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯದ ದೈಹಿಕ ಶಿಕ್ಷಕ ಮಿತಾನ್, ಎನ್.ಎಮ್.ಪಿ.ಯು.ಸಿ ಯ ದೈಹಿಕ ಶಿಕ್ಷಣ ನಿರ್ದೇಶಕ ನಿತಿನ್. ಎಮ್.ಎಮ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ರಕ್ಷಿತಾ, ಸೌಮ್ಯ, ಲಾವಣ್ಯ ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ್ ನಾಕ್ ಭಟ್ಕಳ ಸ್ವಾಗತಿಸಿದರು. ಕ್ರೀಡಾ ಸಾಧಕರಾದ ಗುರುಪ್ರಸಾದ್, ಸುಜಿತ್, ಅನಘಾ ಭಾಸ್ಕರನ್, ಸುಶ್ಮಿತಾ, ಶಮ್ಮಾಸ್ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿದರು. ಕಾಲೇಜಿನ ಕ್ರೀಡಾಕಾರ್ಯದರ್ಶಿ ಗಣೇಶ್ ದೇವಾಡಿಗ ಪ್ರತಿಜ್ನಾವಿಧಿ ಬೋದಿಸಿದರು. ಉಪನ್ಯಾಸಕಿ ನಯನ. ಪಿ. ಯು ಅತಿಥಿಗಳನ್ನು ಪರಿಚಯಿಸಿದರು. ಈ ಸಂದರ್ಭದಲ್ಲಿ ಅತ್ಯುತ್ತಮ ಪಥಸಂಚಲನ ನಿರ್ವಹಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲರಾದ ಪ್ರೊ. ಉದಯಕೃಷ್ಣ. ಬಿ ವಂದಿಸಿದರು. ಉಪನ್ಯಾಸಕಿ ಬೇಬಿವಿದ್ಯಾ. ಪಿ. ಬಿ ಹಾಗೂ ವಿದ್ಯಾರ್ಥಿ ವಿಕಾಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.