Breaking News

ಜೇಸಿಐ ಸುಳ್ಯ ಸಿಟಿ ಘಟಕಕ್ಕೆ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ

Advt_Headding_Middle
Advt_Headding_Middle

ಫೆ.28ರಂದು ಶುಕ್ರವಾರದಂದು ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿಐ PPP ಕವೀನ್ ಕುಮಾರ್ ಜೇಸಿಐ ಸುಳ್ಯ ಘಟಕಕ್ಕೆ ಅಧಿಕೃತ ಭೇಟಿ ನೀಡುವ ಕಾರ್ಯಕ್ರಮವನ್ನು ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಸುಳ್ಯದಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜೇಸಿಐ ಸುಳ್ಯ ಸಿಟಿ ಘಟಕದ ವತಿಯಿಂದ ಮ್ಯಾಟ್ರಿಕ್ಸ್ ಎಜ್ಯುಕೇಶನಲ್ ಇನ್ಸ್ಟಿಟ್ಯೂಟ್ ಸಂಸ್ಥೆಗೆ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿಐ PPP ಕವೀನ್ ಕುಮಾರ್ ರವರ ಸಮ್ಮುಖದಲ್ಲಿ ಕುಡಿಯುವ ನೀರಿನ ಯಂತ್ರ ಮತ್ತು ಎರಡು ಲಾಪ್ ಟಾಪ್ ನ್ನು ಹಸ್ತಾಂತರಿಸಲಾಯಿತು. ಸಭಾಧ್ಯಕ್ಷತೆಯನ್ನು ಘಟಕಾಧ್ಯಕ್ಷ ಜೇಸಿ ವಿನಯ್ ರಾಜ್ ಮಡ್ತಿಲ ವಹಿಸಿದ್ದರು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಜೇಸಿ JFPಕಾರ್ತಿಕೇಯ ಮಧ್ಯಸ್ಥ, ವಲಯ ಉಪಾಧ್ಯಕ್ಷ ಜೇಸಿ ಪ್ರದೀಪ್ ಬಾಕಿಲ, ರಾಷ್ಟ್ರೀಯ ಉಪಾಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮದ Tour Co-ordinator ಆಗಿರುವ ಜೇಸಿ ರಾಯನ್ ಉದಯ ಕ್ರಾಸ್ತ ಹಾಗೂ ಜೇಸಿ ಜಬ್ಭರ್ ಸಾಹೇಬ್, ಜೇಸಿಐ ಭಾರತದ ವಲಯ ಸಂಯೋಜನಾ ಅಧಿಕಾರಿ ಜೇಸಿ ಚಂದ್ರಶೇಖರ ಕನಕಮಜಲು ಮತ್ತು ಜೇಸಿಐ ಸುಳ್ಯ ಸಿಟಿಯ ಸ್ಥಾಪಕರಾದ ಜೇಸಿ ಮನಮೋಹನ್ ಬಳ್ಳಡ್ಕ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.