Breaking News

ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

Advt_Headding_Middle
Advt_Headding_Middle

ಮಾ.15ರಂದು ಸುಳ್ಯದಿಂದ ಬೃಹತ್ ಹೊರೆಕಾಣಿಕೆ ಮೆರವಣಿಗೆ

ಮಾ.7ರಂದು ಪ್ರಚಾರಾರ್ಥವಾಗಿ ಸುಳ್ಯ ತಾಲೂಕಿನಾದ್ಯಂತ ಬೈಕ್ ಜಾಥ – ಸಭೆ

`’ಪುಣ್ಯ ಕ್ಷೇತ್ರವಾಗಿರುವ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಮಾ.15ರಿಂದ ಆರಂಭಗೊಂಡು ಮಾ.20ರೊಳಗೆ ಅದ್ಧೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ಸುಳ್ಯದಿಂದ ಗಾಣಿಗ (ವಾಣಿಯ) ಸಮಾಜ ಭಾಂದವರು ಸೇರಿ ಮಾ.15ರಂದು ಸುಳ್ಯದಿಂದ ಬೃಹತ್ ಹಸಿರುವಾಣಿ ಮೆರವಣಿಗೆ ನಡೆಸುವುದಲ್ಲದೆ, ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಮಾ.೭ರಂದು ತಾಲೂಕಿನಾದ್ಯಂತ ಬೈಕ್ ರ್‍ಯಾಲಿ ನಡೆಸಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ವಠಾರದಲ್ಲಿ ಸಿದ್ಧತಾ ಸಭೆ ನಡೆಸಲಾಗುವುದೆಂದು ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ಚಂದ ಪಾಟಾಳಿ ಕುಡೆಕಲ್ಲು ಹಾಗೂ ತಾಲೂಕು ಗಾಣಿಗ ಸಮಾಜದ ಅಧ್ಯಕ್ಷ ರಮೇಶ್ ಇರಂತಮಜಲು ಹೇಳಿದ್ದಾರೆ.
ಮಾ.5ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾರ್ಯಕ್ರಮದ ವಿವರ ನೀಡಿದರು.
ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಸೂರಂಬೈಲು ಸಮೀಪದ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರವು ವಾಣಿಯ ಸಮುದಾಯದವರ ಪ್ರಧಾನವಾದ ಮತ್ತು ಪವಿತ್ರವಾದ ಆರಾಧನಾ ಕ್ಷೇತ್ರವಾಗಿದೆ. ವಾಣಿಯ ಸಮುದಾಯದವರು ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಕೇರಳ ಮತ್ತು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ಹಲವು ಶತಮಾನಗಳ ಚಾರಿತ್ರಿಕ ಹಿನ್ನಲೆಯನ್ನೊಳಗೊಂಡ ಈ ಕ್ಷೇತ್ರದಲ್ಲಿ ಪೂರ್ವ ಕಾಲದಿಂದಲೇ ಸಮಾಜಕ್ಕೆ ಆದರ್ಶ ಪ್ರಾಯವಾಗಿರುವ ಆಚಾರ ಅನುಷ್ಠಾನಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಾಮಾಜಿಕ ಹಿತ ದೃಷ್ಠಿಯಿಂದ ಸಮಾನತೆ, ಸರಳತೆ ಹಾಗೂ ಸೌಹಾರ್ದತೆಯನ್ನು ಕಾಣಲು ಸಾಧ್ಯ. ಈ ಕ್ಷೇತ್ರದಲ್ಲಿ ಆದಿ ಕಾಲದಿಂದಲೇ ಸಮಾಜ ಭಾಂದವರ ಸಾಮೂಹಿಕ ವಿವಾಹವು ನಡೆದು ಬರುತ್ತಿರುವುದು ಅಭಿನಂದನಾರ್ಹವಿಚಾರವಾಗಿದೆ. ಬಡವ ಬಲ್ಲಿದನೆಂಬ ಭೇದ ಭಾವವಿಲ್ಲದೆ ಸಾಮೂಹಿಕ ವಿವಾಹ, ಕ್ಷೇತ್ರದಲ್ಲಿ ನಡೆಯುವ ವಾರ್ಷಿಕ ಪರ್ವದಲ್ಲಿ ಸಮಾಜ ಬಾಂಧವರು ಭಾಗವಹಿಸುತ್ತಾರೆ. ಕ್ಷೇತ್ರದ ಪಡಿಪ್ಪುರೆಯಲ್ಲಿ ತೆಗೆದುಕೊಳ್ಳುವ ಯಾವುದೇ ತೀರ್ಮಾನವನ್ನು ಸಮಾಜ ಬಾಂಧವರು ಅದರಂತೆ ನಡೆದುಕೊಳ್ಳುತ್ತಿದ್ದು, ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ. ಸುಮಾರು 700 ವರ್ಷಗಳ ಚಾರಿತ್ರಿಕ ಹಿನ್ನಲೆಯನ್ನು ಹೊಂದಿದ ಈ ಕ್ಷೇತ್ರದಲ್ಲಿ ಹಲವಾರು ಬ್ರಹ್ಮಕಲಶೋತ್ಸವಗಳು ನಡೆದಿದ್ದರೂ ಪೂರ್ಣ ಪ್ರಮಾಣದ ನವೀಕರಣ ಈವರೆಗೆ ನಡೆದಿಲ್ಲ. ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ಕಂಡು ಬಂದಂತೆ ಕಳೆದ1ವರ್ಷ 10 ತಿಂಗಳ ಹಿಂದೆ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ನವೀಕರಣ ಕೆಲಸ ಕಾರ್ಯಗಳು ಆರಂಭಗೊಂಡು ಇದೀಗ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ. 2020 ಮಾಚ್ 15ರಿಂದ ಮೊದಲ್ಗೊಂಡು 2020 ಮಾರ್ಚ್ 20ರವರೆಗೆ ಬ್ರಹ್ಮಶ್ರೀ ಬಾಲಕೃಷ್ಣ ತಂತ್ರಿ ದೇಲಂಪಾಡಿ ಇವರ ನೆತೃತ್ವದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೈದಿಕ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿರುವುದು. ಈ ಮಹೋತ್ಸವ ಅಂಗವಾಗಿ ವಿವಿಧ ಸಮಿತಿಗಳನ್ನು ರೂಪೀಕರಿಸಿದ್ದು ಈ ಎಲ್ಲಾ ಸಮಿತಿಗಳ ಸದಸ್ಯರು ಹಾಗೂ ಸ್ತ್ರೀ- ಪುರುಷ ಭೇದವಿಲ್ಲದೆ ಸಮುದಾಯ ಭಾಂದವರು ಅಹೋರಾತ್ರಿ ಜೀರ್ಣೋದ್ಧಾರ ಕೆಲಸ ಕಾರ್ಯಗಳಲ್ಲಿ ಶ್ರಮಿಸುತ್ತಿದ್ದಾರೆ. ಅಲ್ಲದೆ ಸುಳ್ಯ ತಾಲೂಕಿನ ವಾಣಿಯ ಸಮುದಾಯದ ಎಲ್ಲಾ ಭಕ್ತ ಭಾಂದವರನ್ನು ಒಟ್ಟಾಗಿ ಸೇರಿಸಿ ಮಾ.15ರಂದು ಬೆಳಗ್ಗೆ 9 ಗಂಟೆಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಸುಮಾರು 750ಕ್ಕೂ ಮಿಕ್ಕಿದ ಬಾಂಧವರು ಜೊತೆ ಸೇರಿ ಹಸಿರುವಾಣಿ ಸಂಗ್ರಹದೊಂದಿಗೆ ಅದ್ಧೂರಿಯಾಗಿ ಮೆರವಣಿಗೆಯಲ್ಲಿ ಸಾಗಿ ಪೆರ್ಣೆ ಮುಚ್ಚಿಲೋಟ್ ಭಗವತೀ ಕ್ಷೇತ್ರಕ್ಕೆ ಸಮರ್ಪಿಸುವ ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಮಾ.7ರಂದು ಬೈಕ್ ಜಾಥ
ಬ್ರಹ್ಮಕಲಶೋತ್ಸವದ ಪ್ರಚಾರಾರ್ಥವಾಗಿ ಮಾ.7ರಂದು ತಾಲೂಕಿನಾದ್ಯಂತ ಸಮಾಜ ಭಾಂದವರು ಬೈಕ್ ರ್‍ಯಾಲಿಯಲ್ಲಿ ಸಂಚರಿಸಿ ಬಳಿಕ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಬರಲಿದ್ದಾರೆ. ಅಲ್ಲಿ ಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಬ್ರಹ್ಮಕಲಶೋತ್ಸವ ಉಪಾಧ್ಯಕ್ಷ ಚಂದ್ರಶೇಖರ ಪನ್ನೆ, ಪ್ರಮುಖರಾದ ನಾರಾಯಣ ಎಸ್.ಎಮ್. ಶಾಂತಿನಗರ, ಮಿಥುನ್ ಕರ್ಲಪ್ಪಾಡಿ, ಸರಸ್ವತಿ ಬೆಟ್ಟಂಪಾಡಿ, ದೇವಕಿ ಬೆಳ್ಳಾರೆ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.